ಟಿವಿ, ರೆಫ್ರಿಜರೇಟರ್ ಸೇರಿದಂತೆ ವಸ್ತುಗಳು ಪದೇ ಪದೇ ಹಾಳಾಗುತ್ತಿವೆಯೇ? ಈ ವಾಸ್ತು ದೋಷವೇ ಇದಕ್ಕೆ ಕಾರಣ

ಇತ್ತೀಚಿನ ದಿನಗಳಲ್ಲಿ, ಮನೆಗಳಲ್ಲಿ ರೆಫ್ರಿಜರೇಟರ್‌, ಟಿವಿ, ಮೈಕ್ರೋವೇವ್‌, ಮಿಕ್ಸರ್‌ ಹೀಗೆ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳು ಇರುತ್ತವೆ. ಈ ವಸ್ತುಗಳು ಪದೇ ಪದೇ ಹಾಳಾಗುತ್ತಿದ್ದರೆ ಅದು ಒಳ್ಳೆಯ ಸಂಕೇತವಲ್ಲ. ವಾಸ್ತು ದೋಷಗಳು ಅಥವಾ ನಕಾರಾತ್ಮಕ ರಾಹು ಇದಕ್ಕೆ ಕಾರಣವಾಗಿರಬಹುದು. ವಾಸ್ತು ದೋಷಗಳನ್ನು ಸೂಕ್ತ ಸಮಯಕ್ಕೆ ಸರಿಪಡಿಸದಿದ್ದರೆ, ಹೆಚ್ಚು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಎಲೆಕ್ಟ್ರಾನಿಕ್ ಸಾಧನಗಳನ್ನು ಇಡುವ ಸರಿಯಾದ ದಿಕ್ಕು ತಿಳಿದಿರಬೇಕು:

ಎಲೆಕ್ಟ್ರಾನಿಕ್ ವಸ್ತುಗಳನ್ನು ತಪ್ಪು ದಿಕ್ಕಿನಲ್ಲಿ ಅಥವಾ ನೀರಿನ ಬಳಿ ಇರಿಸುವುದರಿಂದ ಗಮನಾರ್ಹ ವಾಸ್ತು ದೋಷಗಳು ಉಂಟಾಗಬಹುದು. ವಾಸ್ತು ಪ್ರಕಾರ ಅವುಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಇಡುವುದು ಮುಖ್ಯ. ವಾಸ್ತು ಪ್ರಕಾರ, ಎಲೆಕ್ಟ್ರಾನಿಕ್ ವಸ್ತುಗಳನ್ನು ಆಗ್ನೇಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡುವುದು ಉತ್ತಮ.

ವಿದ್ಯುತ್ ಉಪಕರಣಗಳು ಅಗ್ನಿ ಅಂಶಕ್ಕೆ ಸಂಬಂಧಿಸಿವೆ. ಅವುಗಳನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ಗಂಭೀರ ವಾಸ್ತು ದೋಷಗಳು ಉಂಟಾಗಬಹುದು.

Vastu Tips for Electronics

ಆಗ್ನೇಯ ದಿಕ್ಕಿನಲ್ಲಿ ಈ ತಪ್ಪು ಮಾಡಬೇಡಿ:

ಆಗ್ನೇಯ ದಿಕ್ಕಿನಲ್ಲಿ ಹಾಳಾಗಿರುವ ವಸ್ತುಗಳನ್ನು ಸಂಗ್ರಹಿಸಿಡಬಾರದು.ನೀರು ಸೋರಿಕೆಯಾಗದಂತೆ ನೋಡಿಕೊಳ್ಳಿ. ಒಂದು ವೇಳೆ ಹೀಗೆ ಮಾಡಿದರೆ ಮನೆ ಮಂದಿಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ ವಿದ್ಯುತ್ ಉಪಕರಣಗಳಿಗೂ ಹಾನಿಯನ್ನುಂಟು ಮಾಡಬಹುದು.

ತುಳಸಿ ಬಾಡುವುದು ಅಶುಭ ಸೂಚನೆನಾ? ವಾಸ್ತು ಮತ್ತು ಜ್ಯೋತಿಷ್ಯ ಹೇಳುವುದೇನು
ತುಳಸಿ ಬಾಡುವುದು ಅಶುಭ ಸೂಚನೆನಾ? ವಾಸ್ತು ಮತ್ತು ಜ್ಯೋತಿಷ್ಯ ಹೇಳುವುದೇನು

ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುವ ಕೆಟ್ಟ ರಾಹು:

ನೀಚ ರಾಹು ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತಾನೆ. ಇದು ಮಾನಸಿಕ ಒತ್ತಡ ಮತ್ತು ಆರ್ಥಿಕ ತೊಂದರೆಗಳನ್ನು ಉಂಟುಮಾಡುತ್ತದೆ. ಮನೆಯಲ್ಲಿ ಹರಕು ಮುರುಕು ವಸ್ತುಗಳು ತುಂಬಿಕೊಂಡಿದ್ದರೆ, ರಾಹುವಿನ ಅಶುಭ ಪರಿಣಾಮಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ.

ರಾಹುವಿನ ಕೆಟ್ಟ ಪರಿಣಾಮವನ್ನು ತಪ್ಪಿಸುವುದು ಹೇಗೆ?:

ಮನೆಗೆ ಹೊಸ ಎಲೆಕ್ಟ್ರಾನಿಕ್ ವಸ್ತು ತಂದಾಗಲೆಲ್ಲಾ, ಅದಕ್ಕೆ ಶುಭ ಸಮಯದಲ್ಲಿ ಅರಶಿನ ಕುಂಕುಮ ಹಚ್ಚಿ ಅಕ್ಕಿ ಧಾನ್ಯಗಳನ್ನು ಹಾಕಿ ಪೂಜಿಸಿ. ಅದರ ಮೇಲೆ ಸ್ವಸ್ತಿಕ ಗುರುತು ಹಾಕಿ.

ಈ ವಸ್ತುಗಳನ್ನು ಡೈನಿಂಗ್‌ ಟೇಬಲ್‌ ಮೇಲಿಡುವ ಅಭ್ಯಾಸ ನಿಮಗೂ ಇದ್ಯಾ? ಹಣದ ಸಮಸ್ಯೆಗೆ ಇದೇ ಮೂಲ ಕಾರಣ
ಈ ವಸ್ತುಗಳನ್ನು ಡೈನಿಂಗ್‌ ಟೇಬಲ್‌ ಮೇಲಿಡುವ ಅಭ್ಯಾಸ ನಿಮಗೂ ಇದ್ಯಾ? ಹಣದ ಸಮಸ್ಯೆಗೆ ಇದೇ ಮೂಲ ಕಾರಣ

- ಶನಿವಾರ ಅಥವಾ ಪಂಚಕ ಅವಧಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಎಂದಿಗೂ ಖರೀದಿಸಬೇಡಿ.

-ನಕಾರಾತ್ಮಕ ರಾಹು ದೋಷವನ್ನು ಸರಿಪಡಿಸಲು, ಶನಿವಾರದಂದು ನಾಯಿಗೆ ಆಹಾರ ನೀಡಿ. ಇದು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+