ಬೇಸಿಗೆಯಲ್ಲಿ ಕಾಡುವ ಕಣ್ಣಿನ ಅಲರ್ಜಿ, ಶುಷ್ಕತೆಯ ಲಕ್ಷಣಗಳು ಮತ್ತು ಪರಿಹಾರ ಮಾರ್ಗ ಇಲ್ಲಿದೆ

ಕಣ್ಣುಗಳು ಕೆಂಪಾಗುವುದು, ತುರಿಕೆ, ಕಣ್ಣುಗಳಲ್ಲಿ ಏನೋ ಬಿದ್ದಂತೆ ಭಾಸವಾಗುವುದು, ಸೋಂಕು ಈ ಸಮಸ್ಯೆಗಳು ಬೇಸಿಗೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಸ್ವಲ್ಪ ಎಚ್ಚರಿಕೆ ವಹಿಸಿದರೆ ಈ ಸಮಸ್ಯೆಗಳನ್ನು ಸುಲಭವಾಗಿ ತಡೆಯಬಹುದು. ಸೂರ್ಯನ ತೀಕ್ಷ್ಣ ಬೆಳಕು, UV ಕಿರಣಗಳು, ಶುಷ್ಕ ಮತ್ತು ಕಲುಷಿತ ಗಾಳಿ ಎಲ್ಲವೂ ಸೇರಿ ಕಣ್ಣುಗಳ ಆರೋಗ್ಯ ಕೆಡಿಸುತ್ತದೆ. ಜನರು ಸಾಮಾನ್ಯವಾಗಿ ಈ ಸಮಸ್ಯೆಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಕಣ್ಣಿನ ಈ ಸಮಸ್ಯೆಗಳು ಯಾವ ಕಾರಣದಿಂದ ಹುಟ್ಟಿಕೊಳ್ಳುತ್ತವೆ ಎನ್ನುವುದನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಾರೆ.

ಬೇಸಿಗೆಯಲ್ಲಿ ಕಣ್ಣುಗಳಿಗೆ ಆಗುವ ಹಾನಿಗೆ ಕಾರಣ ಮತ್ತು ತಡೆಯುವ ವಿಧಾನ:

ಬೇಸಿಗೆಯಿಂದಾಗಿ ಕಣ್ಣುಗಳು ಒಣಗುವುದು:

ಬೇಸಿಗೆಯ ಹವಾಮಾನವು ಕಣ್ಣುಗಳ ನೈಸರ್ಗಿಕ ರಕ್ಷಣಾ ಕಾರ್ಯವಿಧಾನಗಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ, ಕಣ್ಣುಗಳು ತೇವಾಂಶದ ತೆಳುವಾದ ಪದರದಿಂದ ಮುಚ್ಚಲ್ಪಟ್ಟಿರುತ್ತವೆ. ಹೀಗಾಗಿ ಕಣ್ಣು ಶುಷ್ಕವಾಗುವುದು, ಸೋಂಕು ಬಾಧಿಸುವುದು ಮುಂತಾದ ಸಮಸ್ಯೆಗಳಿಂದ ರಕ್ಷಣೆ ಸಿಗುತ್ತದೆ. ಆದರೆ ಬಿಸಿಲಿನ ಕಾರಣದಿಂದಾಗಿ ತಾಪಮಾನ ಹೆಚ್ಚಾದಾಗ, ತೇವಾಂಶ ಕಡಿಮೆಯಾದಾಗ, ಈ ಪದರವು ಬೇಗನೆ ಒಣಗುತ್ತದೆ. ಇದು ಶುಷ್ಕತೆ, ಕಣ್ಣು ಉರಿ, ಕಣ್ಣು ಚುಚ್ಚುವುದು, ಮತ್ತು ಆಯಾಸಕ್ಕೆ ಕಾರಣವಾಗುತ್ತದೆ. ಡಿ ಹೈಡ್ರೇಶನ್‌ ಈ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ.

ದೀರ್ಘಕಾಲದವರೆಗೆ ಹವಾನಿಯಂತ್ರಣ, ಫ್ಯಾನ್‌ ಅಥವಾ ಬಿಸಿ ಗಾಳಿಗೆ ಒಡ್ಡಿಕೊಳ್ಳುವುದರಿಂದ ಕಣ್ಣಿನ ತೇವಾಂಶವು ಕಡಿಮೆಯಾಗಬಹುದು. ಹೆಚ್ಚು ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಟಿವಿ ವೀಕ್ಷಣೆ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ನಾವು ಸಾಮಾನ್ಯವಾಗಿ ನಿಮಿಷಕ್ಕೆ 15-20 ಬಾರಿ ಕಣ್ಣು ಮಿಟುಕಿಸುತ್ತೇವೆ. ಹೀಗಾಗುವಾಗ ಕಣ್ಣುಗಳು ತೇವವಾಗಿರುತ್ತವೆ. ಆದರೆ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್ ಬಳಸುವಾಗ, 5-7 ಬಾರಿ ಮಾತ್ರ ಕಣ್ಣು ಮಿಟುಕಿಸುತ್ತೇವೆ. ಇದರಿಂದಾಗಿ ನಮ್ಮ ಕಣ್ಣುಗಳು ಬೇಗನೆ ಒಣಗುತ್ತವೆ. ಕೆಲವೊಮ್ಮೆ ಡ್ರೈ ಐ ಸಿಂಡ್ರೋಮ್‌ಗೆ ಕಾರಣವಾಗಬಹುದು .

Summer Eye Allergies and Dry Eyes

ಕಣ್ಣುಗಳ ಮೇಲೆ UV ಕಿರಣಗಳ ಪರಿಣಾಮ:

ಬೇಸಿಗೆಯಲ್ಲಿ UV ಕಿರಣಗಳು ಹೆಚ್ಚು ತೀವ್ರವಾಗಿರುತ್ತವೆ. ಇವು ನೇರವಾಗಿ ಮತ್ತು ಪ್ರತಿಫಲನದ ಮೂಲಕ ಕಣ್ಣುಗಳನ್ನು ತಲುಪುತ್ತವೆ. ದೀರ್ಘಕಾಲದವರೆಗೆ ಈ ಕಿರಣಗಳಿಗೆ ಒಡ್ಡಿಕೊಳ್ಳುವುದು ಕಣ್ಣಿಗೆ ಗಂಭೀರ ಹಾನಿ ಉಂಟು ಮಾಡಬಹುದು. ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಿಗೆ ಇದು ಇನ್ನಷ್ಟು ಸವಾಲಿನದ್ದಾಗಿರುತ್ತದೆ. ಏಕೆಂದರೆ ಡ್ರೈಯಾಗಿರುವ ಕಣ್ಣು ಸೋಂಕಿನ ಅಪಾಯವನ್ನು ಕೂಡಾ ಹೆಚ್ಚಿಸುತ್ತವೆ.

ಬೇಸಿಗೆಯಲ್ಲಿ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯಬೇಕಾ, ಇಲ್ಲಿದೆ ಉತ್ತರ
ಬೇಸಿಗೆಯಲ್ಲಿ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯಬೇಕಾ, ಇಲ್ಲಿದೆ ಉತ್ತರ

ಯಾವ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು?:

ಕಣ್ಣಿನ ಸಮಸ್ಯೆ ಉಲ್ಬಣಗೊಳ್ಳುವ ಮೊದಲೇ ಅದನ್ನು ನಿರ್ವಹಿಸಬೇಕಾದರೆ, ಕೆಲವೊಂದು ಲಕ್ಷಣಗಳನ್ನು ಮೊದಲೇ ಗುರುತಿಸುವುದು ಬಹಳ ಮುಖ್ಯ. ಡ್ರೈ ಐ ಲಕ್ಷಣಗಳು ಹೀಗಿರಬಹುದು.

ಆಗಾಗ ದೃಷ್ಟಿ ಮಸುಕಾಗುವುದು
ಕಣ್ಣು ಉರಿ ಅಥವಾ ಚುಚ್ಚಿದ ಅನುಭವ
ಕಣ್ಣಲ್ಲಿ ನೀರು ಬರುವುದು
ಬೆಳಕಿನಲ್ಲಿ ಕಿರಿ ಕಿರಿಯಾಗುವುದು

ಕಣ್ಣುಗಳ ಅಲರ್ಜಿ ಇದ್ದರೆ ಲಕ್ಷಣಗಳು ಈ ರೀತಿಯಾಗಿರಬಹುದು:

ನಿರಂತರವಾಗಿ ತುರಿಕೆ
ಕಣ್ಣುಗಳು ಕೆಂಪಾಗುವುದು
ಕಣ್ಣುರೆಪ್ಪೆಗಳಲ್ಲಿ ಸ್ವಲ್ಪ ಊತ
ಹೊರಗೆ ಹೋದಾಗ ಸಮಸ್ಯೆ ಇನ್ನಷ್ಟು ಹದಗೆಡುತ್ತದೆ.

ನಿರಂತರ ನೋವು, ಅತಿಯಾದ ಕೆಂಪು, ಕಣ್ಣಿನಿಂದ ರೇಶಿಯಂತೆ ದಪ್ಪ ಸ್ರಾವ ಬರುವುದು. ದೃಷ್ಟಿಯಲ್ಲಿನ ಬದಲಾವಣೆಗಳಂತಹ ಲಕ್ಷಣಗಳು ಹೆಚ್ಚು ತೀವ್ರವಾಗಿದ್ದರೆ, ಅದು ಸೋಂಕಿನ ಸಂಕೇತವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಸ್ವಯಂ-ಚಿಕಿತ್ಸೆ ಮಾಡುವ ಬದಲು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಬೇಸಿಗೆಯ ಬಿಸಿಲಿಗೆ ಅಲೋವೆರಾ ಮದ್ದು: ದೇಹ ತಂಪಾಗಿಸುವ ಸಿಂಪಲ್ ಡ್ರಿಂಕ್
ಬೇಸಿಗೆಯ ಬಿಸಿಲಿಗೆ ಅಲೋವೆರಾ ಮದ್ದು: ದೇಹ ತಂಪಾಗಿಸುವ ಸಿಂಪಲ್ ಡ್ರಿಂಕ್

ತಜ್ಞರ ಸಲಹೆ:

ನೀರು ಕುಡಿಯುವುದು ಮತ್ತು ಸರಿಯಾದ ಆಹಾರ ಕ್ರಮ: ಸಾಕಷ್ಟು ನೀರು ಕುಡಿಯುವುದು ಈ ಸಮಸ್ಯೆಗೆ ಸರಳ ಮತ್ತು ಸುಲಭ ಮಾರ್ಗವಾಗಿದೆ. ದಿನಕ್ಕೆ ಸುಮಾರು 3-4 ಲೀಟರ್ ನೀರು ದೇಹ ಮತ್ತು ಕಣ್ಣುಗಳೆರಡಕ್ಕೂ ಅತ್ಯಗತ್ಯ. ಹೆಚ್ಚುವರಿಯಾಗಿ, ಒಮೆಗಾ -3, (ಮೀನು, ವಾಲ್ನಟ್ಸ್) ಮತ್ತು ವಿಟಮಿನ್ ಎ (ಕ್ಯಾರೆಟ್, ಹಸಿರು ಎಲೆಗಳ ತರಕಾರಿಗಳು) ಕಣ್ಣಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.

ಸನ್ ಗ್ಲಾಸ್ ಗಳ ಸರಿಯಾದ ಆಯ್ಕೆ: ಜನರು ಬೇಸಿಗೆಯಲ್ಲಿ ಸನ್ ಗ್ಲಾಸ್ ಗಳನ್ನು ಧರಿಸುತ್ತಾರೆ. ಆದರೆ ಇದು ಸಾಕಾಗುವುದಿಲ್ಲ. ಹಾನಿಕಾರಕ UVA ಮತ್ತು UVB ಕಿರಣಗಳನ್ನು ನಿರ್ಬಂಧಿಸುವ UV400 ರಕ್ಷಣೆಯನ್ನು ಹೊಂದಿರುವ ಸನ್ ಗ್ಲಾಸ್ ಗಳನ್ನು ಆಯ್ಕೆ ಮಾಡುವುದು ಮುಖ್ಯ.

ಸ್ಕ್ರೀನ್‌ ಟೈಂ ಅನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ: ಡಿಜಿಟಲ್ ಸ್ಕೀನ್‌ ಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ಕಷ್ಟ.ಆದರೆ ಸರಿಯಾದ ಅಭ್ಯಾಸಗಳ ಮೂಲಕ ಸ್ಕ್ರೀನ್‌ ಟೈಂ ಅನ್ನು ಕಡಿಮೆ ಮಾಡಬಹುದು. 20-20-20 ನಿಯಮವನ್ನು ಅನುಸರಿಸಿ. ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ 20 ಅಡಿ ದೂರ ನೋಡಿ.

ಕಣ್ಣು ಮಿಟುಕಿಸುವ ಅಭ್ಯಾಸ ರೂಢಿ ಮಾಡಿಕೊಳ್ಳಿ: ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು, ಉದ್ದೇಶಪೂರ್ವಕವಾಗಿ ಹಲವಾರು ಬಾರಿ ಕಣ್ಣು ಮಿಟುಕಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.ಇದು ಕಣ್ಣುಗಳಲ್ಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಕಣ್ಣಿನ ಹನಿಗಳ ಸರಿಯಾದ ಬಳಕೆ: ಅಗತ್ಯವಿದ್ದರೆ ಲೂಬ್ರಿಕಂಟ್ ಡ್ರಾಪ್‌ಗಳನ್ನು ಬಳಸಬಹುದು.ಇದು ಕಣ್ಣುಗಳನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಆದರೆ, ಯಾವುದೇ ಡ್ರಾಪ್‌ಗಳನ್ನು ನಿಯಮಿತವಾಗಿ ಬಳಸಬೇಕಾದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಲೆನ್ಸ್ ಬಳಕೆದಾರರಿಗೆ ಸಲಹೆಗಳು:

* ಬೇಸಿಗೆಯಲ್ಲಿ ಲೆನ್ಸ್ ಧರಿಸುವ ಸಮಯವನ್ನು ಕಡಿಮೆ ಮಾಡಿ.
* ಡಿಸಪೋಸೇಬಲ್‌ ಲೆನ್ಸ್‌ಗಳು ಉತ್ತಮ ಆಯ್ಕೆಯಾಗಿರಬಹುದು.
* ಮಲಗುವಾಗ ಅಥವಾ ಈಜುವಾಗ ಲೆನ್ಸ್‌ಗಳನ್ನು ಧರಿಸಬೇಡಿ.
* ಲೆನ್ಸ್‌ಗಳನ್ನು ತೆಗೆಯುವಾಗ ಮತ್ತು ಹಾಕುವಾಗ ಕೈಗಳನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.
* ಸರಿಯಾದ ರೀತಿಯಲ್ಲಿ ಕಣ್ಣಿನ ಶುಚಿಗೊಳಿಸುವಿಕೆ
* ನಿಮ್ಮ ಕಣ್ಣುಗಳನ್ನು ನೀರಿನಿಂದ ನಿಧಾನವಾಗಿ ಸ್ವಚ್ಛಗೊಳಿಸುವುದು ಸರಿ, ಆದರೆ ಪದೇ ಪದೇ ಕಣ್ಣುಗಳನ್ನು ತೊಳೆಯುತ್ತಿರುವುದು ಹಾನಿಯುಂಟು ಮಾಡಬಹುದು.
* ಕಣ್ಣುಗಳನ್ನು ಉಜ್ಜುವುದರಿಂದ ಅಲರ್ಜಿಗಳು ಉಲ್ಬಣಗೊಳ್ಳಬಹುದು ಮತ್ತು ಕಣ್ಣಿನ ಮೇಲ್ಮೈಗೆ ಹಾನಿಯಾಗಬಹುದು.

ಬೇಸಿಗೆಯಲ್ಲಿ ಕಣ್ಣಿನ ಆರೈಕೆಯಲ್ಲಿ ಮಾಡುವ ತಪುಗಳು:

*ವೈದ್ಯರ ಸಲಹೆ ಇಲ್ಲದೆ ನಮ್ಮ ಪಾಡಿಗೆ ಕಣ್ಣನ ಡ್ರಾಪ್ಸ್‌ ಹಾಕುವುದು ನಾವು ಮಾಡುವ ದೊಡ್ಡ ತಪ್ಪು
*ಇಡೀ ದಿನ ಕಣ್ಣು ತೊಳೆಯುವುದು ಯಾವಾಗಲೂ ಪ್ರಯೋಜನಕಾರಿಯಲ್ಲ.
*ಕೇವಲ ಗಾಢ ಬಣ್ಣದ ಸನ್ ಗ್ಲಾಸ್ ಧರಿಸಿದರೆ ಸಾಲದು, UV ರಕ್ಷಣೆ ಅತ್ಯಗತ್ಯ.
*ಪ್ರತಿ ಬಾರಿ ಕಣ್ಣು ಕೆಂಪಾಗುವುದು ಶಾಖದ ಪರಿಣಾಮದಿಂದಲೇ ಆಗಿರಬೇಕಿಲ್ಲ. *ವೈದ್ಯರ ಸಲಹೆ ಇಲ್ಲದೆ ಸ್ಟೆರಾಯ್ಡ್ ಡ್ರಾಪ್‌ಗಳನ್ನು ಹಾಕಲೇ ಬಾರದು.

ಕಣ್ಣುಗಳನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡುವುದು ಹೇಗೆ?:

ಬೇಸಿಗೆಯಲ್ಲಿ ಕಣ್ಣಿನ ಆರೈಕೆಗಾಗಿ ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಗ್ಲುಕೋಮಾದಂತಹ ಅನೇಕ ಗಂಭೀರ ಪರಿಸ್ಥಿತಿಗಳು ಆರಂಭದಲ್ಲಿ ಲಕ್ಷಣರಹಿತವಾಗಿರುವುದರಿಂದ ನಿಯಮಿತ ಕಣ್ಣಿನ ಪರೀಕ್ಷೆಗಳು ಅನಿವಾರ್ಯವಾಗಿದೆ. ಸಮಯೋಚಿತ ತಪಾಸಣೆ ಮತ್ತು ಸರಿಯಾದ ಆರೈಕೆಯು ದೀರ್ಘಕಾಲದವರೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+