5 State Election Results: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಯಾರು ಮುನ್ನಡೆ - ಹಿನ್ನಡೆ, ಇಲ್ಲಿದೆ ಸಂಪೂರ್ಣ ವಿವರ

5 State Election Results: ದೇಶದ ಗಮನವನ್ನು ಸೆಳೆದಿದ್ದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವು ಸೋಮವಾರ ಪ್ರಕಟವಾಗುತ್ತಿದ್ದು ಇನ್ನು ಕೆಲವೇ ಕ್ಷಣಗಳಲ್ಲಿ ಅಂತಿಮ ಫಲಿತಾಂಶ ಹೊರ ಬೀಳಿದೆ. ಪಂಚರಾಜ್ಯಗಳ ವಿಧಾನಸಭೆಯ ಈಗ ಬರುತ್ತಿರುವ ಟ್ರೆಂಡ್ ಬಹುತೇಕ ಅಂತಿಮವಾಗುವ ಸಾಧ್ಯತೆ ಇದೆ. ಒಂದೊಮ್ಮೆ ಬದಲಾದರೂ ಸಹ ವಿರಳ ಸಂಖ್ಯೆಯಲ್ಲಿ ಸಂಖ್ಯೆಗಳು ಹೆಚ್ಚಳವಾಗುವ ಸಾಧ್ಯತೆ ಇದೆ. 2026ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಗಮನ ಸೆಳೆದ ಎರಡು ರಾಜ್ಯಗಳೆಂದರೆ ಅದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಾಗೂ ತಮಿಳುನಾಡಿನ ವಿಧಾನಸಭೆ ಚುನಾವಣೆ. ಈ ಎರಡೂ ವಿಧಾನಸಭಾ ಚುನಾವಣೆಯು ಹಲವು ಕಾರಣಗಳಿಗೆ ಗಮನ ಸೆಳೆದಿತ್ತು. ಅದೇ ರೀತಿ ಈ ರಾಜ್ಯಗಳಲ್ಲಿ ಅಚ್ಚರಿಯ ಫಲಿತಾಂಶವೂ ಸಹ ಪ್ರಕಟವಾಗಿದೆ. ಈ ಕ್ಷಣದ ಟ್ರೆಂಡ್ ವಿವರ ಇಲ್ಲಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೇ ಗಮನ ಸೆಳೆದಿದ್ದ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ನಟ ಹಾಗೂ ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷವು ಭಾರೀ ಮುನ್ನಡೆ ಸಾಧಿಸಿದ್ದು, ಡಿಎಂಕೆಗೆ ಭಾರೀ ಹಿನ್ನಡೆ ಆಗಿದೆ. ತಮಿಳುನಾಡಿನಲ್ಲಿ ಟಿವಿಕೆಯು 104, ಎಐಎಡಿಎಂಕೆಗೆ 78 ಹಾಗೂ ಡಿಎಂಕೆಗೆ 51 ಸ್ಥಾನಗಳು ಬಂದಿವೆ. ತಮಿಳುನಾಡು ವಿಧಾನಸಭೆ ಚುನಾವಣೆಯ ಮ್ಯಾಜಿಕ್ ಸಂಖ್ಯೆಯು 118 ಆಗಿದೆ.

5 State Election Results

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಸುದೀರ್ಘ 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಭಾರೀ ಹಿನ್ನಡೆ ಆಗಿದೆ. ಈ ರಾಜ್ಯದಲ್ಲಿ 34 ವರ್ಷಗಳ ಸುದೀರ್ಘ ಕಮ್ಯೂನಿಸ್ಟ್‌ ಆಡಳಿತವನ್ನು ತೃಣಮೂಲ ಕಾಂಗ್ರೆಸ್ ಪಾರ್ಟಿಯು ಸೈಡ್‌ಲೈನ್‌ ಮಾಡಿತ್ತು. ಇದೀಗ ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 114, ಬಿಜೆಪಿ 169 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌7 ಹಾಗೂ ಪಕ್ಷೇತರರು 3 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಮ್ಯಾಜಿಕ್ ನಂಬರ್‌ 148 ಆಗಿದೆ.

Vijay: ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಟಿವಿಕೆ ಮುನ್ನಡೆ, ಡಿಎಂಕೆಗೆ ಹಿನ್ನಡೆ
Vijay: ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಟಿವಿಕೆ ಮುನ್ನಡೆ, ಡಿಎಂಕೆಗೆ ಹಿನ್ನಡೆ

ಕೇರಳಂ ವಿಧಾನಸಭೆ ಚುನಾವಣೆ

ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮುನ್ನಡೆ ಕಾಪಾಡಿಕೊಂಡಿದೆ. ಎಲ್‌ಡಿಎಫ್ 38 ಹಾಗೂ ಯುಡಿಎಫ್ 101 ಹಾಗೂ ಬಿಜೆಪಿ ಕೇವಲ 1 ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕೇರಳಂ ವಿಧಾನಸಭೆ ಚುನಾವಣೆಯ ಬಹುಮತವು 71 ಆಗಿದೆ.

ಪುದುಚೇರಿ ವಿಧಾನಸಭೆ ಚುನಾವಣೆ

ಪುದುಚೇರಿಯಲ್ಲಿ ಆಡಳಿತರೂಢ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಬಿಜೆಪಿ 22 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಪಕ್ಷವು 6 ಹಾಗೂ ಪಕ್ಷೇತರರು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪುದುಚೇರಿ ವಿಧಾನಸಭಾ ಕ್ಷೇತ್ರದ ಬಹುಮತ ಸಂಖ್ಯೆಯು 16 ಆಗಿದೆ.

Election Result 2026 Live; ಕೇರಳದಲ್ಲಿ ಬಹುಮತದತ್ತ ಕಾಂಗ್ರೆಸ್, ಕೆಸಿ ವೇಣುಗೋಪಾಲ ಸೂಚನೆ, ಜಮೀರ್ ದೌಡು
Election Result 2026 Live; ಕೇರಳದಲ್ಲಿ ಬಹುಮತದತ್ತ ಕಾಂಗ್ರೆಸ್, ಕೆಸಿ ವೇಣುಗೋಪಾಲ ಸೂಚನೆ, ಜಮೀರ್ ದೌಡು

ಅಸ್ಸಾಂ ವಿಧಾನಸಭೆ ಚುನಾವಣೆ

ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಭಾರೀ ಮುನ್ನಡೆ ಕಾಪಾಡಿಕೊಂಡಿದೆ. ಬಿಜೆಪಿ ಪಕ್ಷವು 95 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಪಕ್ಷವು ಕೇವಲ 29 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದೆ. ಪಕ್ಷೇತರರು 3 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದ್ದಾರೆ. ಅಸ್ಸಾಂ ವಿಧಾನಸಭೆಯ ಬಹುಮತ ಸಂಖ್ಯೆಯು 64 ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+