SWR: ಹಬ್ಬದ ಪ್ರಯುಕ್ತ ಹುಬ್ಬಳ್ಳಿಯಿಂದ 14 ವಿಶೇಷ ರೈಲುಗಳು ಕಾರ್ಯಾಚರಣೆ: ಮಾರ್ಗಗಳು, ವೇಳಾಪಟ್ಟಿ
ಬೆಂಗಳೂರು, ಸೆಪ್ಟಂಬರ್ 24: ದಸರಾ ಹಬ್ಬ ಶುರುವಾಗಿದೆ. ಇದರೊಂದಿಗೆ ಶಬರಿಮಲೆ ಯಾತ್ರೆ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಉತ್ತರ ಕರ್ನಾಟಕದ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ಮಾಡಲಿದೆ. 14 ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಯಾವೆಲ್ಲ ಮಾರ್ಗಗಳಲ್ಲಿ ಎಷ್ಟು ರೈಲುಗಳು ಸಂಚಾರ ಮಾಡಲಿವೆ, ವೇಳಾಪಟ್ಟಿ ವಿವರ ಇಲ್ಲಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಲ್ಲಂ ಎಕ್ಸ್‌ಪ್ರೆಸ್ ರೈಲು (07313) ಪ್ರತಿ ಭಾನುವಾರ ಮಧ್ಯಾಹ್ನ 3:15ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮುಂದಿನ ದಿನ ಮಧ್ಯಾಹ್ನ 12:55ಕ್ಕೆ ಕೊಲ್ಲಂ ತಲುಪುತ್ತದೆ. ಈ ರೈಲು ಸೆಪ್ಟಂಬರ್ 28 ರಿಂದ ಡಿಸೆಂಬರ್ 28 ರವರೆಗೆ ಸಂಚರಿಸಲಿದೆ. ಮುಖ್ಯವಾಗಿ ಇದು ದೀಪಾವಳಿ ಪ್ರಯುಕ್ತ ಊರುಗಳಿಗೆ ತೆರಳುವವರಿಗೂ ಅನುಕೂಲವಾಗಲಿದೆ.

ಕೊಲ್ಲಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು (07314) ಪ್ರತಿ ಸೋಮವಾರ ಸಂಜೆ 5:00ಕ್ಕೆ ಕೊಲ್ಲಂನಿಂದ ಹೊರಟು, ಮುಂದಿನ ದಿನ ಸಂಜೆ 6:30ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಈ ರೈಲು ಸೆಪ್ಟಂಬರ್ 29 ರಿಂದ ಡಿಸೆಂಬರ್ 29ರವರೆಗೆ ಸಂಚಾರ ಮಾಡಲಿದೆ.
ನಿಲುಗಡೆ ನಿಲ್ದಾಣದ ವಿವರಗಳು
ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೋಲಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಎರಡು ಬದಿ ಸಂಚಾರದಲ್ಲಿ ಹಾವೇರಿ, ದಾವಣಗೆರೆ, ಬಿರೂರು, ಅರ್ಸೀಕೆರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬನಗಾರಪೇಟೆ, ಸೇಲಂ, ಈರೋಡ್, ತಿರುಪುರ್, ಪೋದನೂರು, ಪಾಳಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಳಂ ಟೌನ್, ಕೊಟ್ಟಾಯಂ, ಚಂಗನಾಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕರಾ, ಕಯಂಕುಳಂ, ಕರುಣಾಗಪಲ್ಲಿ ಹಾಗೂ ಸಸ್ತಂಕೋಟ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ರೈಲುಗಳು ವಿವಿಧ ಎಸಿ, ನಾನ್ ಎಸಿ ಸ್ಲಿಪರ್, ಜನರಲ್ ಬೋಗಿ ಒಳಗೊಂಡಂತೆ ಒಟ್ಟು 22 ಬೋಗಿಗಳನ್ನು ಹೊಂದಿರಲಿದೆ. ಪ್ರಯಾಣಿಕರು ರೈಲು ವೇಳಾಪಟ್ಟಿ ಮತ್ತು ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಮತ್ತು http://www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಎನ್‌ಟಿಇಎಸ್ ಆಪ್ ಅಥವಾ 139 ಕರೆಮಾಡಿ ಮಾಹಿತಿ ತಿಳಿಯುವಂತೆ ನೈಋತ್ಯ ರೈಲ್ವೆ ತಿಳಿಸಿದೆ.












Click it and Unblock the Notifications