ಕೆಎಸ್‌ಆರ್‌ಟಿಸಿ ಪ್ರಯಾಣಿಕರೇ ಗಮನಿಸಿ: ಉಳವಿ ಶ್ರೀ ಚನ್ನಬಸವೇಶ್ವರ & ಸೌದತ್ತಿ ರೇಣುಕಾ ಯಲ್ಲಮ್ಮ ಜಾತ್ರೆಗೆ ಹೋಗಲು ಸಿದ್ಧರಾಗಿ!

ಹುಬ್ಬಳ್ಳಿ: ಉಳವಿ ಶ್ರೀ ಚನ್ನಬಸವೇಶ್ವರ & ಸೌದತ್ತಿ ರೇಣುಕಾ ಯಲ್ಲಮ್ಮ ಜಾತ್ರೆಗೆ ಹೋಗಿ ಬರುವ ಭಕ್ತರಿಗೆ ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಭಕ್ತರಿಗೆ ವಿಶೇಷ ಸಂಚಾರ ವ್ಯವಸ್ಥೆ ಕಲ್ಪಿಸಿದೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. ಹೀಗೆ ಜಾತ್ರೆ ಸಮಯಕ್ಕೆ ಬಸ್ ಕೊರತೆ ಉಂಟಾಗದ ರೀತಿ ಕ್ರಮವನ್ನು ಕೈಗೊಳ್ಳಲಾಗಿದೆ.

ಜಾತ್ರಾ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ. ಅಂದಹಾಗೆ ಅಧಿಕಾರಿ, ಎಚ್. ರಾಮನಗೌಡರ ಅವರು ಮಾಹಿತಿ ನೀಡಿ, ಈ ಬಾರಿ ಸೌದತ್ತಿ ಯಲ್ಲಮ್ಮ ರಥೋತ್ಸವ & ಉಳವಿ ಚನ್ನಬಸವೇಶ್ವರ ರಥೋತ್ಸವ ಫೆಬ್ರವರಿ 24 ರಂದು ನಡೆಯಲಿದೆ ಎಂದರು. ಅಲ್ಲದೆ ಈ ಸಮಯದಲ್ಲೇ ಭರತ ಹುಣ್ಣಿಮೆ ಬಂದಿದೆ. ಶನಿವಾರ ಒಂದೇ ದಿನ ಬಂದಿರುವ ಕಾರಣಕ್ಕೆ ಈಗ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Special Bus For Ulavi Channabasaveshwara Jatra & Savadatti Yallamma Jatra

ಸದರಿ ದಿನ ವಾರಂತ್ಯ ದಿನ ಆಗಿರುವುದು ವಿಶೇಷ. ಇದರ ಜೊತೆಗೆ ಫೆ. 25 ರಂದು ಭಾನುವಾರ ಸಾರ್ಜಜನಿಕ ರಜೆ. ಫೆ. 26 ಕ್ಕೆ ಸೋಮವಾರ ಈಶ್ವರನ ವಾರ ಹಾಗೂ 27 ರಂದು, ಮಂಗಳವಾರ ದೇವಿಯ ವಾರವಾಗಿದೆ. ಹೀಗೆ ಎಲ್ಲಾ ಕಾರಣದಿಂದ, ಈ ದಿನಗಳಂದು ಹೆಚ್ಚಿನ ಪ್ರಮಾಣದಲ್ಲಿ ಭಕ್ತರ ಸಂಚಾರ ನಿರೀಕ್ಷಿಸಲಾಗಿದೆ. ಎರಡೂ ಜಾತ್ರೆಗೆ ಹೋಗಿ ಬರುವವರಿಗೆ ಅನುಕೂಲ ಆಗುವ ರೀತಿಯೇ ಇದೀಗ ಹುಬ್ಬಳ್ಳಿಯಿಂದ ನೇರ ಉಳವಿಗೆ & ಯಲ್ಲಮ್ಮನ ಗುಡ್ಡಕ್ಕೆ ಜಾತ್ರಾ ವಿಶೇಷ ಬಸ್ಸು ವ್ಯವಸ್ಥೆ ಮಾಡಿದ್ದೇವೆ ಅಂತಾ, ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಆದ ಎಚ್. ರಾಮನಗೌಡರ ತಿಳಿಸಿದ್ದಾರೆ. ಹಾಗಾದ್ರೆ ಈ ವಿಶೇಷ ಬಸ್ಸು ಹೋರಡುವುದು ಎಲ್ಲಿಂದ?

ವಿಶೇಷ ಬಸ್ಸುಗಳ ಮಾರ್ಗ ಇಲ್ಲಿದೆ

ಜಾತ್ರಾ ವಿಶೇಷ ಬಸ್ಸುಗಳು ಹೊರಡುವ ಬಸ್ ನಿಲ್ದಾಣದ ಮಾಹಿತಿ ನೋಡುವುದಾದರೆ, ಈಗ ಉಳವಿಗೆ ಹೋಗುವ ಬಸ್ಸು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. ಧಾರವಾಡ & ಹಳಿಯಾಳ, ದಾಂಡೇಲಿ ಮಾರ್ಗವಾಗಿ ಸಂಚಾರ ಮಾಡಲಿವೆ. ಹಾಗೇ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ ಎನ್ನಲಾಗಿದೆ. ಹಾಗಾದರೆ ಯಾವ ದಿನಾಂಕದಂದು ಈ ಬಸ್ ಹೊರಡಲಿವೆ? ಮುಂದೆ ಓದಿ.

Special Bus For Ulavi Channabasaveshwara Jatra & Savadatti Yallamma Jatra

ಹುಬ್ಬಳ್ಳಿ & ಯಲ್ಲಮ್ಮನ ಗುಡ್ಡ ಬಸ್ಸುಗಳು

ಅಂದಹಾಗೆ ಇದೀಗ ಹುಬ್ಬಳ್ಳಿ - ಯಲ್ಲಮ್ಮನ ಗುಡ್ಡದ ಬಸ್ಸುಗಳು ಧಾರವಾಡ, ಅಮ್ಮಿನಭಾವಿ, ಸೌದತ್ತಿ ಮಾರ್ಗವಾಗಿ ಯಲ್ಲಮ್ಮನ ಗುಡ್ಡಕ್ಕೆ ಸಂಚಾರ ಮಾಡಲಿವೆ. ಹಾಗೆಯೇ ನವಲಗುಂದ - ಯಲ್ಲಮ್ಮನ ಗುಡ್ಡ ಈ ಬಸ್ಸುಗಳು ನವಲಗುಂದ ಬಸ್ ನಿಲ್ದಾಣ ದಿಂದ ಹೊರಡುತ್ತವೆ. ಗೊಬ್ಬರ ಗುಂಪಿ ಕ್ರಾಸ್, ಗೊಬ್ಬರ ಗುಂಪಿ, ಅಳಗವಾಡಿ ಹಂಚಿನಾಳ ಹಿರೇಕುಂಬಿ ಮಾರ್ಗವಾಗಿ ಸಂಚಾರ ಮಾಡಲಿವೆ ಅಂತಾ ತಿಳಿಸಲಾಗಿದೆ.

ಹಾಗೆಯೇ ಫೆಬ್ರವರಿ 24 ರಂದು ಶನಿವಾರ, ರಥೋತ್ಸವದ ನಂತರ ಉಳವಿಯಿಂದ ಹುಬ್ಬಳ್ಳಿಗೆ ಮತ್ತು ಯಲ್ಲಮ್ಮನ ಗುಡ್ಡದಿಂದ ಹುಬ್ಭಳ್ಳಿ & ನವಲಗುಂದಕ್ಕೂ ಜಾತ್ರಾ ವಿಶೇಷ ಬಸ್ಸುಗಳನ್ನು ಬಿಡಲಾಗಿದೆ. ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ. ಈ ಮೂಲಕ ಭಕ್ತರು ಜಾತ್ರೆಗೆ ತೆರಳಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+