ರಾಜ್ಯಕ್ಕೆ ಆಗಮಿಸಿದ ವರುಣ ಆರ್ಭಟಿಸುತ್ತಿಲ್ಲ
ಬೆಂಗಳೂರು, ಜೂ. 08: ನಿಗದಿಯಂತೆ ಮಾನ್ಸೂನ್ ಮಾರುತಗಳು ರಾಜ್ಯವನ್ನು ಪ್ರವೇಶ ಮಾಡಿದ್ದು ಎಲ್ಲಡೆ ಮಳೆ ಆರಂಭವಾಗಬೇಕಿತ್ತು. ಆದರೆ ಮುಂಗಾರು ದುರ್ಬಲ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದ್ದು ಮಳೆಯ ಆರ್ಭಟ ಕಂಡುಬಂದಿಲ್ಲ.
ಆದರೆ ಅರಬ್ಬಿ ಸಮುದ್ರದಲ್ಲಿ ಚಂಡ ಮಾರುತ ಕೇಂದ್ರಿತವಾಗಿದ್ದು ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಮುಂಬೈನಿಂದ 550 ಕಿ.ಮೀ ಅಂತರದಲ್ಲಿ ಚಂಡಮಾರುತ ಬಿಂದು ಇದೆ ಎಂದು ಹೇಳಲಾಗಿದೆ. ಆದರೆ ಇದು ಭಾರತದತ್ತ ಸಾಗುವುದಕ್ಕಿಂತಲೂ ವೇಗವಾಗಿ ಓಮನ್ ರಾಷ್ಟ್ರಗಳ ಕಡೆ ಚಲಿಸುತ್ತಿದೆ.[ಅಧಿಕೃತವಾಗಿ ಜೂ.5ರಂದು ಕೇರಳಕ್ಕೆ ಆಗಮಿಸಿದ ಮುಂಗಾರು]

ಅರಬ್ಬಿ ಸಮುದ್ರದಲ್ಲಿ ಏಕಾಏಕಿ ವಾಯುಭಾರ ಕುಸಿತ ಉಂಟಾಗಿದ್ದು ಈ ಚಂಡಮಾರುತ ಏಳಲು ಕಾರಣವಾಗಿದೆ. ಆದರೆ ತುಂಬಾ ದೂರದಲ್ಲಿ ಇರುವುದರಿಂದ ಮಳೆ ತರುವ ಅಪಾಯ ಕಡಿಮೆ ಎಂದೇ ಹೇಳಲಾಗಿದೆ.[ಬೆಂಗಳೂರು ಮಳೆ ಆವಾಂತರ ನೋಡಿ]
ಮುಂಗಾರು ಕುಂಠಿತ:
ರಾಜ್ಯದ 3-4 ಜಿಲ್ಲೆಗಳಿಗೆ ಮಳೆಯಾಗುತ್ತಿದೆ. ಆದರೆ ಉಳಿದೆಡೆ ಮಳೆ ಮಾಯವಾಗಿದೆ. ಮೋಡಗಳು ದಟ್ಟವಾಗಿ ಕಂಡುಬರುತ್ತಿಲ್ಲ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ವ್ಯತ್ಯಾಸವಾಗಿ ಮಳೆ ಮೋಡಗಳು ಧಾವಿಸಿದಲ್ಲಿ ಉತ್ತಮ ಮಳೆಯಾಗಲಿದೆ. ಕರಾವಳಿ ಭಾಗಗಳು ಮಳೆ ಪಡೆಯುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಭಾರತದ ರಾಜ್ಯಗಳು ಮಳೆ ಕೊರತೆ ಅನುಭವಿಸಿದರೂ ದಕ್ಷಿಣ ಭಾರತದ ರಾಜ್ಯಗಳಿಗೆ ಈ ಬಾರಿ ಯಾವ ಸಮಸ್ಯೆ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಮೊದಲಿಗೆ ಆರ್ಭಟದಿಂದಲೇ ಕಾಲಿರಿಸಿದ ವರುಣ ಮಂಕಾಗಿದ್ದ. ಮುಂದಿನ ದಿನಗಳಲ್ಲೂ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳು ಸಾಧಾರಣ ಮಳೆ ಪಡೆಯಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications