ನೈಋತ್ಯ ಮುಂಗಾರು ಚುರುಕು: ರಾಜ್ಯಾದ್ಯಂತ ಜುಲೈ 18ರವರೆಗೆ ಭಾರಿ ಮಳೆ

ಬೆಂಗಳೂರು, ಜುಲೈ 14: ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ಜುಲೈ 18ರವರೆಗೂ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಅವಧಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಧಿಕ ಮಟ್ಟದಲ್ಲಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. ಮಂಗಳವಾರ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.

ರಾಜ್ಯದ ಒಳನಾಡಿನಲ್ಲಿ ಕೂಡ ಉತ್ತಮ ಮಳೆಯಾಗಿದೆ. ಇನ್ನೂ ಬುಧವಾರ ಬೆಳಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪಿ ಮಳೆಯಾಗುತ್ತಿದೆ. ದೇಶದಲ್ಲೂ ಮೊದಲ ಬಾರಿಗೆ ನೈರುತ್ಯ ಮುಂಗಾರು ಎಲ್ಲೆಡೆ ವ್ಯಾಪಿಸಿದ್ದು, ದೇಶದಾದ್ಯಂತ ಉತ್ತಮ ಮಳೆಯಾಗುತ್ತಿದೆ.

ಮುಂದಿನ ಜುಲೈ 18ರವರೆಗೂ ಮಳೆ ಇದೇ ರೀತಿ ಮುಂದುವರೆಯಲಿದ್ದು, ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಈಗಾಗಲೇ ಆರೆಂಜ್​ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

 ಹೆಚ್ಚು ಮಳೆಯಾದ ಪ್ರದೇಶಗಳು

ಹೆಚ್ಚು ಮಳೆಯಾದ ಪ್ರದೇಶಗಳು

ಮಂಕಿ, ಮಂಗಳೂರು, ಮಡಿಕೇರಿ, ಪಣಂಬೂರು, ಪುತ್ತೂರು, ಧರ್ಮಸ್ಥಳ, ಸುಬ್ರಹ್ಮಣ್ಯಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮುಂದಿನ ನಾಲ್ಕು ದಿನ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗಲಿದೆ.

 ಎಲ್ಲೆಲ್ಲಿ ಸಾಧಾರಣ ಮಳೆಯಾಗಿದೆ?

ಎಲ್ಲೆಲ್ಲಿ ಸಾಧಾರಣ ಮಳೆಯಾಗಿದೆ?

ಕಾರವಾರ, ಹೊನ್ನಾವರ, ಮಂಕಿ, ಮುಲ್ಕಿ, ಮೂಡುಬಿದಿರೆ, ಉಪ್ಪಿನಂಗಡಿ, ಗೋಕರ್ಣ, ಶಿರಾಲಿ, ಆಗುಂಬೆ, ಕದ್ರ, ಭಟ್ಕಳ, ಸಿದ್ದಾಪುರ, ಬೆಳ್ತಂಗಡಿ, ಕಾರ್ಕಳ, ಕೋಟ, ಕುಂದಾಪುರ, ಚಿಂಚೋಳಿ, ಸೋಮವಾರಪೇಟೆ, ಜಯಪುರ, ಕಲಬುರಗಿ, ಯಲ್ಲಾಪುರ, ಹಳಿಯಾಳ, ಮಂಚಿಕೆರೆ, ಉಡುಪಿ, ಸೇಡಂ, ತಾಳಗುಪ್ಪ, ಹುಂಚದಕಟ್ಟೆ, ಶೃಂಗೇರಿ, ಕೊಟ್ಟಿಗೆಹಾರ, ಕಿರವತ್ತಿ, ಸಿದ್ದಾಪುರ, ಕಲ್ಘಟಗಿ, ವಿರಾಜಪೇಟೆ, ಗಣಗಾಪುರ, ಬೆಳಗಾವಿ, ನಿಪ್ಪಾಣಿ, ಭೀಮರಾಯನಗುಡಿ, ಬಂಡೀಪುರ, ಶಿವಮೊಗ್ಗ, ತ್ಯಾಗರ್ತಿ, ಕುಶಾಲ್‌ನಗರ, ಹಾರಂಗಿಯಲ್ಲಿ ಮಳೆಯಾಗಿದೆ.

 ಬೆಂಗಳೂರು ವಾತಾವರಣ ಹೇಗಿದೆ?

ಬೆಂಗಳೂರು ವಾತಾವರಣ ಹೇಗಿದೆ?

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಲಿದೆ. 25 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಎಚ್‌ಎಎಲ್‌ನಲ್ಲಿ 27.7 ಡಿಗ್ರಿ ಸೆಲ್ಸಿಯಸ್, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Recommended Video

    ಬಿಡುಗಡೆಯಾಯ್ತು ಉಮಾಪತಿ ಮತ್ತು ಅರುಣಾಕುಮಾರಿ ವಾಟ್ಸಾಪ್ ಮೆಸೇಜ್ | Oneindia Kannada
     ಎಲ್ಲೆಲ್ಲಿ ಅಧಿಕ ಮಳೆ ಸಾಧ್ಯತೆ

    ಎಲ್ಲೆಲ್ಲಿ ಅಧಿಕ ಮಳೆ ಸಾಧ್ಯತೆ

    ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಈ ಅವಧಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಧಿಕ ಮಟ್ಟದಲ್ಲಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. ಮಂಗಳವಾರ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+