SWR Trains cancel: ಈ ಮಾರ್ಗದಲ್ಲಿ ರೈಲುಗಳ ರದ್ದು, ಸಮಯ ಬದಲಾವಣೆ, ಯಾಕೆ? ಪೂಣ ವಿವರ
ಹುಬ್ಬಳ್ಳಿ, ಜನವರಿ 30: ನೈರುತ್ಯ ರೈಲ್ವೆ (SWR) ವಲಯ ವ್ಯಾಪ್ತಿಯಲ್ಲಿನ ಕೊಪ್ಪಳ-ಗಿಣಿಗೇರಾ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 63ರ ಬದಲಿಗೆ ಸಬ್‌ವೇ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಈ ಕೆಳಗಿನ ಕೆಲ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಯಾವೆಲ್ಲ ರೈಲುಗಳ ಸಮಯದಲ್ಲಿ ಬದಲಾವಣೆ ಆಗಿದೆ ಹಾಗೂ ಯಾವೆಲ್ಲ ರೈಲುಗಳು ರದ್ದಾಗಿವೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ರೈಲು ಸಂಚಾರ ರದ್ದಾರ ರೈಲುಗಳ ಪಟ್ಟಿ
ಫೆಬ್ರವರಿ 2 ರಂದು ನರಸಾಪುರ- ಹುಬ್ಬಳ್ಳಿ, ಕಾಚಿಗುಡ- ಹುಬ್ಬಳ್ಳಿ (17225) ರೈಲು ಸೇವೆ ರದ್ದು. ಫೆಬ್ರವರಿ 3ರಂದು ಹುಬ್ಬಳ್ಳಿ-ನರಸಾಪುರ, ಹುಬ್ಬಳ್ಳಿ- ಕಾಚಿಗುಡ (17226), ಹುಬ್ಬಳ್ಳಿ-ಗುಂತಕಲ್ (07337), ಗುಂತಕಲ್- ಹುಬ್ಬಳ್ಳಿ (07338), ಬೆಳಗಾವಿ- ಕಾಜಿಪೇಟೆ (07335) ರೈಲು ರದ್ದಾಗಿದೆ.

ಇನ್ನೂ ಫೆಬ್ರವರಿ 4ರಂದು ಕಾಜಿಪೇಟೆ- ಬೆಳಗಾವಿ (07336). ಫೆಬ್ರವರಿ 3ರಂದು ಹುಬ್ಬಳ್ಳಿ- ಕಾರಟಗಿ (07381), ಕಾರಟಗಿ- ಹುಬ್ಬಳ್ಳಿ (07382). ಹುಬ್ಬಳ್ಳಿ- ಕಾರಟಗಿ (17303) ಹಾಗೂ ಫೆಬ್ರವರಿ 4ರಂದು ಕಾರಟಗಿ- ಹುಬ್ಬಳ್ಳಿ (17304) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ಇನ್ನು ಫೆಬ್ರವರಿ 2 ರಂದು ಮುಂಬೈ- ಹೊಸಪೇಟೆ (11139) ರೈಲು ಸೇವೆಯನ್ನು ಗದಗ- ಹೊಸಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸ ಲಾಗುವುದು. ಈ ರೈಲು ಹೊಸಪೇಟೆ ನಿಲ್ದಾಣದ ಬದಲು ಗದಗ ನಿಲ್ದಾಣದಲ್ಲಿ ಸೇವೆ ಕೊನೆಗೊಳ್ಳಲಿದೆ.
ಫೆಬ್ರವರಿ 3ರಂದು ಹೊಸಪೇಟೆ- ಮುಂಬೈ (11140) ರೈಲು ಸೇವೆಯನ್ನೂ ಸಹ ಹೊಸಪೇಟೆ-ಗದಗ ನಿಲ್ದಾಣಗಳ ನಡುವೆ ಭಾಗಶಃ ರದ್ದು ಮಾಡಲಾಗುವುದು. ಈ ರೈಲು ಗದಗ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
ಫೆಬ್ರವರಿ 3ರಂದು ತಿರುಪತಿ- ಹುಬ್ಬಳ್ಳಿ (07657) ರೈಲನ್ನು ಮಾರ್ಗ ಮಧ್ಯದಲ್ಲಿ 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ವಿಜಯಪುರ- ಯಶವಂತಪುರ (06546) ರೈಲನ್ನು ವಿಜಯಪುರ ನಿಲ್ದಾಣದಿಂದ 120 ನಿಮಿಷಗಳ ಕಾಲ ತಡವಾಗಿ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ತಿಳಿಸಿದ್ದಾರೆ.
ರೈಲ್ವೆ ವಿದ್ಯುದೀಕರಣದ ಮಾಹಿತಿ
ಭಾರತೀಯ ರೈಲ್ವೆಯು ಒಟ್ಟು ಶೇಕಡಾ 93ರಷ್ಟು ರೈಲ್ವೆ ಟ್ಯ್ರಾಕ್ ಅನ್ನು ವಿದ್ಯುದೀಕರಣ ಮಾಡಿದೆ. ಈ ಪೈಕಿ ನೈಋತ್ಯ ರೈಲ್ವೆ ವ್ಯಾಪ್ತಿಯ ಕರ್ನಾಟಕದಲ್ಲಿ ಒಟ್ಟು ಶೇಕಡಾ 85ರಷ್ಟು ರೈಲ್ವೆ ಕಿಲೋ ಮೀಟರ್ ವಿದ್ಯುದೀಕರಣಗೊಂಡಿದೆ. ಅಸ್ಸಾಂ, ಪಶ್ಚಿಮ ಬಂಗಾಳದ ರಾಜ್ಯಗಳಲ್ಲಿ ಇನ್ನೂ ವಿದ್ಯುದೀಕರಣ ಬಾಕಿ ಇದೆ. ಕೆಲವು ರಾಜ್ಯಗಳಲ್ಲಿ ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದೆ.












Click it and Unblock the Notifications