Karnataka Rails: ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ತಾತ್ಕಾಲಿಕ ರದ್ದು, ಸಂಪೂರ್ಣ ವಿವರ
ಬೆಂಗಳೂರು, ಜೂನ್ 17: ಕರ್ನಾಟಕ ಒಳಗೊಂಡಂತೆ ನೈಋತ್ಯ ರೈಲ್ವೆ ವಲಯವು ಸೇವೆ ನೀಡುತ್ತಿದೆ. ವಿವಿಧ ಕಾರ್ಯಾಚರಣೆಗಳ ಕಾರಣಗಳಿಂದ ಹಾಗೂ ಮುಂಬರುವ ರಥಯಾತ್ರೆ ಉತ್ಸವದ ಪ್ರಯುಕ್ತ ವಿವಿಧ ಮಾರ್ಗಗಳ ಕೆಲವು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು South Western Railway ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಅವರು ತಿಳಿಸಿದ್ದಾರೆ. ಹಾಗಾದ್ರೆ ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ.
ಕೇಂದ್ರದ ಕಾರ್ಯಾಚರಣೆಯ ನಿರ್ಬಂಧಗಳಿಂದ ಈ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅವುಗಳ ಪಟ್ಟಿ, ದಿನಾಂಕ, ರೈಲ್ವೆ ಸಂಖ್ಯೆ ಸಹ ನೀಡಲಾಗಿದೆ. ಪ್ರಯಾಣಿಕರು ಇದೆಲ್ಲ ಗಮನಿಸಿ ರೈಲು ಸಂಚಾರ ಮಾಡುವಂತೆ ಕೋರಿಕೊಳ್ಳಲಾಗಿದೆ.

ರದ್ದು ರೈಲುಗಳ ಪಟ್ಟಿ
* ರೈಲು ಸಂಖ್ಯೆ 07315 ಎಸ್ಎಸ್ಎಸ್ ಹುಬ್ಬಳ್ಳಿ- ಮುಜಾಫರ್‌ಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 30.06.2025 ರಂದು ಸಂಚಾರಿಸುವುದಿಲ್ಲ. ತಾತ್ಕಾಲಿಕವಾಗಿ ರದ್ದಾಗಿದೆ.
* ರೈಲು ಸಂಖ್ಯೆ 07316 ಮುಜಾಫರ್‌ಪುರ - ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 03.07.2025 ರಂದು ಆರಂಭವಾಗಬೇಕಿದ್ದ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ.
* ಮೈಸೂರು - ಅಜ್ಜರ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06281) 21.06.2025 ಮತ್ತು 28.06.2025 ರಂದು ಸಂಚರಿಸುವುದಿಲ್ಲ.
* 06282 ಸಂಖ್ಯೆಯ ಅಜೀರ್-ಮೈಸೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 23.06.2025 ಮತ್ತು 30.06.2025 ರಂದು ಪ್ರಾರಂಭವಾಗುವ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಥಯಾತ್ರೆ ಉತ್ಸವ: ರದ್ದಾದ ರೈಲುಗಳ ಪಟ್ಟಿ
* ಹುಬ್ಬಳ್ಳಿ-ಕಟಿಹಾರ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 18.06.2025 ರಿಂದ ಸಂಚರಿಸಬೇಕಿತ್ತು. ಆ ರೈಲಿನ ಸಂಚಾರವನ್ನು ತಾತ್ಕಾಲಿಕವಾಗಿ ಮುಂದಿನ ಆದೇಶವರೆಗೆ ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 07326 ಕಟಿಹಾರ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜೂನ 21 ರಂದು ಪ್ರಾರಂಭವಾಗುವ ಪ್ರಯಾಣಗಳು ರದ್ದಾಗಿವೆ.
* ಎಸ್ಎಂವಿಟಿ ಬೆಂಗಳೂರು - ಮಾಲ್ಡಾ ಟೌನ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (06565) ಜೂನ್ 22 ಹಾಗೂ 29 ರಂದು ರದ್ದುಗೊಳಿಸಲಾಗಿದೆ.
* 06566 ಸಂಖ್ಯೆಯ ಮಾಲ್ಡಾಟೌನ್ - ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜೂನ್ 25 ಮತ್ತು ಜುಲೈ 02 ರಂದು ಪ್ರಾರಂಭವಾಗುವ ಪ್ರಯಾಣಗಳನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ.
* ಎಸ್‌ಎಂವಿಟಿ ಬೆಂಗಳೂರು - ನಾರಂಗಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (06559) 17.06.2025 ಮತ್ತು 24.06.2025 ರಂದು ಸಂಚರಿಸುವುದಿಲ್ಲ.
* ರೈಲು ಸಂಖ್ಯೆ 06560 ನಾರಂಗಿ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 21.06.2025 ಮತ್ತು 28.06.2025 ರಂದು ಆರಂಭವಾಗುವ ಪ್ರಯಾಣ ಸೇವೆ ರದ್ದುಗೊಳಿಸಲಾಗಿದೆ.












Click it and Unblock the Notifications