ರೈಲು ಪ್ರಯಾಣಿಕರಿಗೆ ಭರ್ಜರಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ, ಈ ಮಾರ್ಗದಲ್ಲಿ ವಿಶೇಷ ರೈಲು... South Western Railway
ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ಹಲವು ಬದಲಾವಣೆ ಮಾಡಿಕೊಂಡು, ಹೊಸ ಹೊಸ ರೈಲುಗಳ ಸೌಲಭ್ಯ ನೀಡುತ್ತಾ ಬಂದಿದೆ. ಅದರಲ್ಲೂ ವಿಶೇಷ ರೈಲುಗಳ ಮೂಲಕ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲಾಗುತ್ತಿದ್ದು, ಲಕ್ಷ ಲಕ್ಷ ಪ್ರಯಾಣಿಕರಿಗೆ ಇದರಿಂದ ಅನುಕೂಲ ಆಗುತ್ತಿದೆ. ಅದೇ ರೀತಿ ಈಗ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನ ನಿವಾರಿಸಲು ಸೌತ್ ವೆಸ್ಟರ್ನ್ ರೈಲ್ವೆ, ಕಾಚಿಗುಡಾ ಮಾರ್ಗವಾಗಿ ಒಂದು ವಿಶೇಷ ರೈಲನ್ನು ಸಂಚರಿಸಲು ನಿರ್ಧರಿಸಿದೆ. ಹಾಗಾದರೆ ಕರ್ನಾಟಕದ ಯಾವ ನಿಲ್ದಾಣದಿಂದ ಈ ವಿಶೇಷ ರೈಲು ಹೊರಡಲಿದೆ? ಬನ್ನಿ ತಿಳಿಯೋಣ.
ಅಂದಹಾಗೆ ಇದೀಗ ಪ್ರಯಾಣಿಕರ ದಟ್ಟಣೆಯನ್ನ ನಿವಾರಿಸಲು ಸೌತ್ ವೆಸ್ಟರ್ನ್ ರೈಲ್ವೆ ಯಶವಂತಪುರ ಟು ಹಜ್ರತ್ ನಿಜಾಮುದ್ದೀನ್ ನಡುವೆ, ಕಾಚಿಗುಡಾ ಮಾರ್ಗವಾಗಿ ಒಂದು ವಿಶೇಷ ರೈಲನ್ನು ಸಂಚರಿಸಲು ನಿರ್ಧರಿಸಿದೆ. ವಿಶೇಷ ರೈಲು ಒಟ್ಟಾರೆ 23 ಬೋಗಿಗಳನ್ನ ಹೊಂದಿರಲಿದ್ದು, ರೈಲು ಸಂಖ್ಯೆ 06569 ಇದೇ ತಿಂಗಳು ಎಂದರೆ ಫೆಬ್ರವರಿ 25ರ ರಾತ್ರಿ 10.40ಕ್ಕೆ ಯಶವಂತಪುರದಿಂದ ಹೊರಡಲಿದೆ.

ನಂತರ 2 ದಿನದ ಬಳಿಕ ಎಂದರೆ ಫೆಬ್ರವರಿ 27ರ ಮಧ್ಯಾಹ್ನ 2.45ಕ್ಕೆ ಹಜ್ರತ್ ನಿಜಾಮುದ್ದೀನ್ ತಲುಪಲಿದೆ ಈ ವಿಶೇಷ ರೈಲು. ಹಾಗೇ ಇದೇ ರೈಲು ಮತ್ತೆ ಹಿಂತಿರುಗುವ ಪ್ರಯಾಣದಲ್ಲಿ ಮಾರ್ಚ್ 1ಕ್ಕೆ ಹಜ್ರತ್ ನಿಜಾಮುದ್ದೀನ್ ನಿಲ್ದಾಣವನ್ನ ಬಿಡಲಿದೆ. ಹೀಗೆ ಮಾರ್ಚ್ 1 ಬೆಳಗ್ಗೆ, 7 ಗಂಟೆಗೆ ಹಜ್ರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06570 ಮಾರ್ಚ್ 2ರ ರಾತ್ರಿ 9.40ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಈ ರೈಲು ಪ್ರಯಾಣಿಕರಿಗೆ ಭಾರಿ ದೊಡ್ಡ ಅನುಕೂಲ ಮಾಡಿಕೊಡುವ ನಿರೀಕ್ಷೆ ಇದ್ದು, ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಇಲಾಖೆ ಈ ಕ್ರಮ ಕೈಗೊಂಡಿದೆ.












Click it and Unblock the Notifications