ಮನೆಗೆ ಬಾರದ ಮಗನಿಗಾಗಿ ಪರಿತಪಿಸುತ್ತಿರುವ ಉಡುಪಿ ಕುಟುಂಬ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಜನವರಿ.05: ನಾನು ಸುರಕ್ಷಿತವಾಗಿದ್ದೇನೆ, ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಾನು ಮನೆಗೆ ಬರುವುದಿಲ್ಲ, ನೀವು ತುಂಬಾ ದ್ರೋಹಿಗಳು ಎಂದು ಫೋನನ್ನು ಬಂದ್ ಮಾಡಿದ ಮಗನ ಸುಳಿವಿಲ್ಲದೇ ಹದಿನೈದು ದಿನಗಳಾಗಿವೆ.

ಉಡುಪಿಯ ಅಂಬಲಪಾಡಿ ನಿವಾಸಿ ಪ್ರದೀಪ್ ಆಚಾರ್ಯ (21) ಮನೆಯಿಂದ ನಾಪತ್ತೆಯಾದ ಯುವಕ. ಮಗ ಮನೆಬಿಟ್ಟು ಹೋಗಿರುವುದಕ್ಕೆ ಕಂಗಾಲಾದ ಪೋಷಕರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.[ನನ್ನ ಅಮ್ಮ ಕಳೆದುಹೋಗಿದ್ದಾರೆ, ಯಾರಾದರೂ ಹುಡುಕಿಕೊಡಿ]

Udupi

ಡಿ.20ರ ಭಾನುವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಮನೆಯಿಂದ ಹೋರಹೋದ ಪ್ರದೀಪ್ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಆತನ ತಾಯಿ ಮೊಬೈಲ್‌ ಗೆ ಪೋನ್‌ ಮಾಡಿದಾಗ ‘ಇಂದು ಬರುವುದಿಲ್ಲ ನನ್ನ ಮನಸ್ಸು ಸರಿಯಿಲ್ಲ, ನಾನು ನಾಳೆ ಬರುತ್ತೇನೆ' ಎಂದು ಬೇಸರದಿಂದಲೇ ನುಡಿದಿದ್ದಾನೆ.

ಮಾರನೇ ದಿನ ಮನೆಗೆ ಬರುವುದಾಗಿ ತಾಯಿಗೆ ಹೇಳಿದ ಪ್ರದೀಪ ಮರುದಿನವೂ ಮನೆಗೂ ಹೋಗಲಿಲ್ಲ. ಬಳಿಕ ಆತ ಡಿ. 25ರಂದು 8:30ಕ್ಕೆ ಕರೆ ಮಾಡಿ ‘ ನಾನು ಸುರಕ್ಷಿತವಾಗಿದ್ದೇನೆ, ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಾನು ಮನೆಗೆ ಬರುವುದಿಲ್ಲ, ನೀವು ತುಂಬಾ ದ್ರೋಹಿಗಳು' ಎಂದು ಹೇಳಿ ಪೋನ್ ಬಂದ್‌ ಮಾಡಿದ್ದಾನೆ.[18 ವರ್ಷದ ಮಗನ ಹುಡುಕಾಟಕ್ಕೆ ನಿಂತ ಮಹಾತಾಯಿ]

ಮನೆಗೆ ಮಗ ಬಾರದಿರುವುದಕ್ಕೆ ಸದಾ ಬೇಸರದಲ್ಲಿಯೇ ಇರುವ ಪೋಷಕರು, ಮಗನ ಆಗಮನವನ್ನು ಎದುರು ನೋಡುತ್ತಿದ್ದಾರೆ. ಮಗ ಮನೆಗೆ ಬಂದರೆ ಸಾಕು ಎಂಬ ಭಾವ ಪೋಷಕರ ಮೊಗದಲ್ಲಿ ಎದ್ದು ಕಾಣುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Prodeep Acharya left his home before 15 days back like December 20th. He is resident of Ambalapaadi, Udupi. His parents filed complaint in Udupi police station.
Please Wait while comments are loading...