ಸೂರ್ಯ ಗ್ರಹಣದ ಎಫೆಕ್ಟ್ : ರಾಜ್ಯದ ಕೆಲ ರಾಜಕಾರಣಿಗಳು ಜೈಲು ಸೇರ್ತಾರೆ : ಕಾಲಜ್ಞಾನಿ ಡಾ. ಯಶವಂತ ಗುರೂಜಿ

ತುಮಕೂರು, ಅಕ್ಟೋಬರ್‌ 09: ಈ ಸಲದ ಮಹಾಲಯ ಅಮವಾಸ್ಯೆಯ ಸೂರ್ಯ ಗ್ರಹಣದ ಪರಿಣಾಮದಿಂದಾಗಿ ಕೆಲ ರಾಜಕಾರಣಿಗಳು ಜೈಲು ಸೇರ್ತಾರೆ ಎಂದು ಕಾಲಜ್ಞಾನಿ ಡಾ. ಯಶ್ವಂತ ಗುರೂಜಿಯ ಮತ್ತೊಂದು ಸ್ಟೋಟಕ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ತುಮಕೂರು ಜಿಲ್ಲೆ ನೊಣವಿನಕೆರೆಯ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಇದೇ ಅಕ್ಟೋಬರ್ 14 ಮಹಾಲಯ ಅಮಾವಾಸ್ಯೆಯ ಸೂರ್ಯಗ್ರಹಣ ಇದೆ. ಸೂರ್ಯ ಎಂದರೆ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಧಿಪತಿ. ಸರ್ಕಾರದ ಕೆಲಸ ಮಾಡ್ತಿರುವ ಅಂದರೆ ರಾಜಕಾರಣಿಗಳಿಗೆ ದೊಡ್ಡ ಕಂಟಕ ಇದೆ. ಎಲ್ಲಾ ಸ್ಥರದ ರಾಜಕಾರಣಿಗಳು, ಅಧಿಕಾರಿಗಳೂ ಕೂಡ ಗ್ರಹಣದ ಎಫೆಕ್ಟ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Some Karnataka Politicians Will Go To Jail Dr Yashwant Guruji Predicts

ಗ್ರಹಣದ ಮುನ್ನ ಮೂರು ತಿಂಗಳು ಹಾಗೂ ಗ್ರಹಣ ನಂತರದ ಮೂರು ತಿಂಗಳು ಪ್ರಭಾವ ಬೀರುತ್ತದೆ. ಗ್ರಹಣದ ಎಫೆಕ್ಟ್ ನಿಂದ ಕೆಲ ರಾಜಕಾರಣಿಗಳಿಗೆ ಯೋಗ ಕೂಡ ಪ್ರಾಪ್ತಿ ಆಗುತ್ತದೆ. ಮೇಷ, ಕರ್ಕಾಟಕ(ಕಟಕ), ವೃಶ್ಚಿಕ, ಮಕರ ರಾಶಿಯ ಮಂದಿಗೆ ಶುಭ ಫಲ ನೀಡುತ್ತದೆ. ಅದಲ್ಲದೇ ವೃಷಭ ರಾಶಿಯ ಕೃತಿಕ ನಕ್ಷತ್ರದ ರಾಜಕಾರಣಿಗಳು ಜೈಲು ಸೇರ್ತಾರೆ ಎಂದು ತಿಳಿಸಿದ್ದಾರೆ.

ವೃಷಭ ರಾಶಿಯ ಕೃತಿಕ ನಕ್ಷತ್ರದ ಮಂದಿ ಶಾಂತಿ ಕರ್ಮಗಳನ್ನ ಮಾಡಿಕೊಳ್ಳಬೇಕಿದೆ. ಇಲ್ಲವಾದ್ರೆ ಗ್ರಹಣದ ಕಂಟಕಕ್ಕೆ ಗುರಿ ಆಗುತ್ತಾರೆ ಅಂತಾ ಸಲಹೆ ನೀಡಿದ ಯಶವಂತ ಗುರೂಜಿ. ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಜೈಲು ಸೇರ್ತಾರೆ ಅಂತಾ ಎಚ್ಚರಿಸಿದ್ದೆ. ಚಂದ್ರಬಾಬು ನಾಯ್ಡು ಅವರ ಜಾತಕ ವೃಷಭ ರಾಶಿ, ಕೃತಿಕ ನಕ್ಷತ್ರ ಆಗಿದೆ. ನಮ್ಮ ರಾಜ್ಯದಲ್ಲೂ ಸಹ ವೃಷಭ ರಾಶಿಯ ರಾಜಕಾರಣಿಗಳು ಜೈಲು ಸೇರ್ತಾರೆ ಎಂದು ಹೇಳಿದರು.

ವೃಷಭ ರಾಶಿಯ ಮಂದಿ ದೈವದ ಮೊರೆ ಅಥವಾ ಶಾಂತಿ ಕರ್ಮಗಳನ್ನ ಮಾಡುವುದು ಒಳಿತು. ಹಿಂದೆ ಕಾಲಜ್ಞಾನದ ಪ್ರಕಾರ ಯಾವ ಪಕ್ಷ ಅಧಿಕಾರಕ್ಕೆ ಬರ್ತದೆ ಅಂತಾ ಭವಿಷ್ಯ ಹೇಳಲಾಗಿತ್ತು.
ಚುನಾವಣೆಯ 6 ತಿಂಗಳ ಮುನ್ನವೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತಾ ಹೇಳಿದ್ದೆ. 135 ಸೀಟ್ ಬರ್ತದೆ ಅಂತಾ ಹೇಳದ್ದೆ. ಸಿದ್ಧರಾಮಯ್ಯರೇ ಮುಖ್ಯಮಂತ್ರಿ ಆಗ್ತಾರೆ ಅಂತನೂ ಭವಿಷ್ಯ ನುಡಿದಿದ್ದೆ ಎಂದು ತಿಳಿಸಿದರು.

ಇನ್ನೂ ಪ್ರಧಾನಿ ನರೇಂದ್ರ ಮೋದಿ ನಂತರ ಸ್ತ್ರಿ ದೇಶ ಆಳ್ತಾಳೆ ಅಂತಾ ಹೇಳಿದ್ದೆ. ಅದು ಕೂಡ ನಿಜ ಆಗುವ ಲಕ್ಷಣ ಕಾಣ್ತಿದೆ. ಹೆಣ್ಮಕ್ಕಳಿಗೆ ಮೀಸಲಾತಿ ಸಿಕ್ತಿದೆ. ಒಳ್ಳೆಯದು ಆಗುವ ಲಕ್ಷಣ ಕೂಡ ಗೋಚರಿಸುತ್ತಿದೆ.ಮುಂದಿನ ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ರಾಜ್ಯಕ್ಕೆ ಕಂಟಕ ಇದೆ. ಕಾರಣ ರಾಜ್ಯ ರಾಜಕಾರಣದಲ್ಲಿ ದ್ವೇಷದ ರಾಜಕೀಯ ಹೆಚ್ಚಾಗ್ತಿದೆ. ಇಲ್ಲಿತನ ಒಂದು ತರಹ ಆದ್ರೆ, ಗ್ರಹಣದ ನಂತರ ಪ್ರಭಾವ ಹೆಚ್ಚಾಗಿ, ಕಂಟಕ ಜಾಸ್ತಿ ಆಗುತ್ತದೆ. ಹೀಗಾಗಿ ರಾಜಕಾರಣಿಗಳು ದೈವದ ಮೋರೆ ಹೋಗಿ ಶಾಂತಿ ಕರ್ಮಗಳನ್ನ ಮಾಡಿಕೊಳ್ಳಲಿ. ಕಂಟಕದ ಬಗ್ಗೆ ಎಚ್ಚರಿಸಿದ್ದಲ್ಲದೆ ಪರಿಹಾರ ಮಾಡಿಕೊಳ್ಳಲ್ಲಿ ಎಂದು ಡಾ. ಯಶವಂತ ಗುರೂಜಿ ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+