ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಇದೇನಿದು? ಬಿಜೆಪಿ ನಾಯಕರಿಂದಲೇ ಟಿಪ್ಪು ಜಯಂತಿಗೆ ಜೈಕಾರ..ಧಿಕ್ಕಾರ..!

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಬಿಜೆಪಿ ನಾಯಕರಿಂದಲೇ ಟಿಪ್ಪು ಜಯಂತಿಗೆ ಜೈಕಾರ..ಧಿಕ್ಕಾರ..? | Oneindia Kannada

    ಬೆಂಗಳೂರು, ನವೆಂಬರ್ 10 : ರಾಜ್ಯದೆಲ್ಲೆಡೆ ಟಿಪ್ಪು ಜಯಂತಿ ವಿರುದ್ಧ ಬಿಜೆಪಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದರೇ, ಮತ್ತೊಂದೆಡೆ ಬಿಜೆಪಿ ಕೆಲ ನಾಯಕರು ಟಿಪ್ಪುವಿಗೆ ಜೈ ಎಂದಿದ್ದಾರೆ.

    In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ?

    ಇದಕ್ಕೆ ಪೂರಕವೆಂಬಂತೆ ಟಿಪ್ಪು ಜಯಂತಿಗೆ ಶುಭ ಕೋರಿದ ಫ್ಲೆಕ್ಸ್ ವೊಂದರಲ್ಲಿ ಬೊಮ್ಮನಹಳ್ಳಿ ಬಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಭಾವ ಚಿತ್ರ ರಾರಾಜಿಸುತ್ತಿದೆ. ಅತ್ತ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಕೂಡ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

    ಇನ್ನು ಯಾದಗಿರಿ ಜಿಲ್ಲೆಯ ಶಹಾಪುರದ ಶಾಸಕ ಗುರು ಪಾಟೀಲ ಶಿರವಾಳ ಅವರು ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ, ಟಿಪ್ಪು ಸುಲ್ತಾನ್ ರಾಷ್ಟ್ರಪ್ರೇಮಿ ಎಂದು ಗುಣಗಾನ ಮಾಡಿದ್ದಾರೆ. ಇದು ಬಿಜೆಪಿ ನಾಯಕರಿಗೆ ಇರುಸು ಮುರುಸು ಉಂಟು ಮಾಡಿದೆ.

    "ಸಿದ್ದರಾಮಯ್ಯನವರ ಅಹಂಕಾರ ತೃಪ್ತಿ ಪಡಿಸೋದಕ್ಕೆ ಟಿಪ್ಪು ಜಯಂತಿ!"

    ಅಷ್ಟೇ ಅಲ್ಲದೇ ರೆಡ್ಡಿ ಬ್ರದರ್ಸ್ ಅಪ್ಪಟ ಆಪ್ತ ಹಾಗೂ ಬಳ್ಳಾರಿ ಕಾರ್ಪೋರೆಟರ್ ಗೋವಿಂದ್ ರಾಜ್ ಎನ್ನುವರು ಕೂಡ ತಮ್ಮ ಬಿಜೆಪಿ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ನಾಯಕರ ನಡೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ಎರಡು ವರ್ಷದ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಜಾರಿಗೆ ತಂದಿತ್ತು. ಅಂದಿನಿಂದ ಟಿಪ್ಪು ಜಯಂತಿಗೆ ಬಿಜೆಪಿ ವಿರೋಧಿಸುತ್ತಾ ಬಂದಿದೆ. ಅಷ್ಟೇ ಅಲ್ಲದೇ ಕಳೆದ ಟಿಪ್ಪು ಜಯಂತಿ ದಿನದಂದು ಮಡಿಕೇರಿಯಲ್ಲಿ ಕೋಮು ಗಲಭೆಯಲ್ಲಿ ಸಾವು-ನೋವುಗಳು ನಡೆದಿದ್ದವು. ಇಷ್ಟೇಲ್ಲ ಆದರೂ ಬಿಜೆಪಿ ಪ್ರಮುಖ ನಾಯಕರೇ ಇದೀಗ ಟಿಪ್ಪು ಜಯಂತಿಗೆ ಜೈ ಎಂದಿರುವುದು ಎಷ್ಟು ಸರಿ ಎನ್ನುವುದು ಅಪ್ಪಟ ಬಿಜೆಪಿ ಕಾರ್ಯಕರ್ತರ ಮಾತು. ಟಿಪ್ಪು ಜಯಂತಿ ಮಾಡಿ ಎಲ್ಲವೂ ಆಗಿ ಕೈತೊಳಕೊಂಡ ಬಳಿಕ ನಾಯಕರು ತಮ್ಮ ಸ್ಪಷ್ಟನೆಗಳು ನೀಡಿದ್ದಾರೆ.

    ಈ ಬಗ್ಗೆ ಸತೀಶ್ ರೆಡ್ಡಿ ಸ್ಪಷ್ಟನೆ ನೀಡಿದ್ದೇನು?

    ಈ ಬಗ್ಗೆ ಸತೀಶ್ ರೆಡ್ಡಿ ಸ್ಪಷ್ಟನೆ ನೀಡಿದ್ದೇನು?

    ಇದರಿಂದ ಎಚ್ಚೆತ್ತುಕೊಂಡ ಸತೀಶ್ ರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ನನಗೆ ಗೊತ್ತಿಲ್ಲದೇ, ನನ್ನ ಗಮನಕ್ಕೆ ಬಾರದೇ ಯಾರೋ ಫ್ಲೆಕ್ಸ್ ಹಾಕಿದ್ದಾರೆ. ನನ್ನ ಪಕ್ಷ ನಿರ್ಧಾರ ನನ್ನ ನಿರ್ಧಾರ. ಬಿಜೆಪಿ ಟಿಪ್ಪು ಜಯಂತಿ ವಿರೋಧಿಸಿದೆ, ನಾನು ಕೂಡಾ ವಿರೋಧಿಸುತ್ತೇನೆ. ಅದನ್ನು ತೆರವು ಮಾಡಿಸಲು ಪೊಲೀಸರಿಗೆ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಅಷ್ಟೇ ಅಲ್ಲದೇ ನನ್ನ ಅನುಮತಿ ಇಲ್ಲದೆ ನನ್ನ ಫೋಟೋ ಹಾಕಿದವರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಸತೀಶ್ ರೆಡ್ಡಿ ತಿಳಿಸಿದ್ದಾರೆ.

    ವಿಜಯನಗರ ಶಾಸಕ ಆನಂದ್ ಸಿಂಗ್ ಸ್ಪಷ್ಟನೆ

    ವಿಜಯನಗರ ಶಾಸಕ ಆನಂದ್ ಸಿಂಗ್ ಸ್ಪಷ್ಟನೆ

    ನಾನು ಯಾವ ಜಯಂತಿಯನ್ನು ಬಹಿಷ್ಕರಿಸಿಲ್ಲ, ಎಲ್ಲಾ ಜಯಂತಿಗಳಲ್ಲಿ ಭಾಗವಹಿಸುತ್ತೇನೆ. ನನಗೆ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದಂತೆ ಯಾರು ಹೇಳಿಲ್ಲ ಎಂದು ಹೊಸಪೇಟೆಯ ವಿಜಯನಗರದ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರು ಇಂದು ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿದರು.

    ಬಿಜೆಪಿ ನಾಯಕರಿಂದ ಓಟ್ ಬ್ಯಾಂಕ್ ಗಿಮಿಕ್

    ಬಿಜೆಪಿ ನಾಯಕರಿಂದ ಓಟ್ ಬ್ಯಾಂಕ್ ಗಿಮಿಕ್

    ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗಿದ್ದರಿಂದ ಓಟ್ ಬ್ಯಾಂಕ್ ಗಾಗಿ ಸ್ಥಳೀಯ ಮುಸ್ಲಿಂ ಸಮುದಾಯವನ್ನು ಎದುರು ಹಾಕಿಕೊಳ್ಳಬಾರದು ಎಂಬ ದೃಷ್ಟಿಯಿಂದ ಕೆಲ ಬಿಜೆಪಿ ನಾಯಕರು ಟಿಪ್ಪು ಜಯಂತಿಗೆ ಬೆಂಬಲ ನೀಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದೆ.

    ಟಿಪ್ಪು ಜಯಂತಿ ವಿರೋಧಕ್ಕೆ ಬಿಜೆಪಿಯಲ್ಲೇ ದ್ವಂದ್ವ

    ಟಿಪ್ಪು ಜಯಂತಿ ವಿರೋಧಕ್ಕೆ ಬಿಜೆಪಿಯಲ್ಲೇ ದ್ವಂದ್ವ

    ಟಿಪ್ಪು ಜಯಂತಿಯನ್ನು ವಿರೋಧಿಸಬೇಕೋ ಬೇಡವೋ ಎನ್ನುವುದು ರಾಜ್ಯ ಬಿಜೆಪಿ ನಾಯಕರಲ್ಲಿಯೇ ದ್ವಂದ್ವ ಮೂಡಿಸಿದೆ. ರಾಜ್ಯ ಬಿಜೆಪಿಯ ಎ ಗ್ರೇಡ್ ನಾಯಕರು ಮಾತ್ರ ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿ ಪ್ರತಿಭಟಿಸುತ್ತಿದ್ದಾರೆ, ಮತ್ತೊಂದೆಡೆ ಕೆಲ ನಾಯಕರು ತಮ್ಮ ಮುಂದಿನ ರಾಜಕೀಯ ಲೆಕ್ಕಚಾರವನ್ನು ಅಳೆದು ತೂಗಿ ಟಿಪ್ಪು ಜಯಂತಿಗೆ ಬೆಂಬಲಿಸಿದ್ದಾರೆ. ಇದನ್ನು ನೋಡಿದರೆ ಟಿಪ್ಪು ಜಯಂತಿ ಬಗ್ಗೆ ಬಿಜೆಪಿಯಲ್ಲಿಯೇ ದ್ವಂದ್ವ ಉಂಟಾಗಿದೆ.

    ಟಿಪ್ಪು ಜಯಂತಿ ವಿರುದ್ಧ ಸಿಡಿದೆದ್ದ ಕೇಂದ್ರ ಸಚಿವ

    ಟಿಪ್ಪು ಜಯಂತಿ ವಿರುದ್ಧ ಸಿಡಿದೆದ್ದ ಕೇಂದ್ರ ಸಚಿವ

    ಟಿಪ್ಪು ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ಟಿಪ್ಪು ಜಯಂತಿ ಆಚರಣೆ ಇನ್ನು 15 ದಿನಗಳು ಇರುವಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪ್ರೋಟ ಕಾಲ್ ಪ್ರಕಾರ ಹೆಸರು ಇರಲಿದೆ ಬರೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ಸಿಎಂ ಸಿದ್ದರಾಂಯ್ಯ ಹೇಳಿದ್ದರು. ಇದರಿಂದ ಕೆಂಡಮಂಡಲಗೊಂಡ ಅನಂತ್ ಕುಮಾರ್, ನನ್ನ ಹೆಸರು ಹಾಕಿದ್ರೆ ಕಾರ್ಯಕ್ರಮದಲ್ಲಿ ಟಿಪ್ಪುವಿನ ಬಂಡವಾಳ ಬಯಲಿಗೆಳೆಯುವೆ ಎಂದಿದ್ದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka BJP leaders and activists opposed and protest statewide against Tipu Jayanti celebrations. But some BJP leaders involved in Tipu Jayanti occasion. Hospet's Vijayanagar BJP MLA Anand Singh inaugurats the Tipu Jayanti function. The BJP workers expressed anger.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more