ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕರ್ನಾಟಕದ 6 ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದ ಪದಕ

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖೆ ನಡೆಸಿದ ಪೊಲೀಸರಿಗೆ ನೀಡುವ ಕೇಂದ್ರ ಗೃಹ ಸಚಿವಾಲಯದ ಪದಕಕ್ಕೆ ಕರ್ನಾಟಕ ರಾಜ್ಯದ ಆರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರತಿವರ್ಷ ನೀಡುವ ಈ ಉನ್ನತ ಪದಕಕ್ಕೆ ದೇಶದ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತೆ. ಸದ್ಯ ಈ ವರ್ಷ ದೇಶದಾದ್ಯಂತ ಸಿವಿಲ್ ಪೊಲೀಸ್ ಸಿಬಿಐ, ಎನ್ ಸಿಬಿ ಸೇರಿ 151 ಅಧಿಕಾರಿಗಳನ್ನು ಈ ಪದಕಕ್ಕೆ ಆಯ್ಕೆ ಮಾಡಲಾಗಿದ್ದು, ಪಟ್ಟಿ ಬಿಡುಗಡೆಯಾಗಿದೆ.

ಕೇಂದ್ರ ಗೃಹ ಸಚಿವಾಲಯದ ಪದಕವನ್ನು ಅತ್ಯುತ್ತಮ ಸೇವೆ ಮತ್ತು ಉತ್ತಮವಾದ ತನಿಖೆಯನ್ನು ನಡೆಸಿದ ಅಧಿಕಾರಿಗಳಿಗೆ ನೀಡಲಾಗುತ್ತದೆ. ದೇಶದ ಬೇರೆ ಬೇರೆ ರಾಜ್ಯದಿಂದಲೂ ಉತ್ತಮವಾದ ತನಿಖೆಯನ್ನು ನಡೆಸಿರುವವರನ್ನು ಆಯ್ಕೆ ಮಾಡಲಾಗುತ್ತದೆ.

Six police officers of Karnataka got union Home Ministry Medal

ಈ ಸಾಲಿನಲ್ಲಿ ಕರ್ನಾಟಕದಿಂದ ಆರು ಅಧಿಕಾರಿಗಳು ಆಯ್ಕೆಯಾಗಿದ್ದು. ಪ್ರಸ್ತುತ ಲೋಕಾಯುಕ್ತ ಕಚೇರಿಯಲ್ಲಿ ಎಸ್ಪಿಯಾಗಿರುವ ಲಕ್ಷ್ಮೀ ಗಣೇಶ್, ರಾಯಚೂರು ಜಿಲ್ಲೆಯ ಸಿಂಧನೂರು ಉಪವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಹೆಸ್ಕಾಂ ಎಸ್ಪಿ ಶಂಕರ್ ಕೆ ಮರಿಹಾಳ್, ಕಲಬುರಗಿ ಸಿಐಡಿ ಡಿವೈಎಸ್ಪಿ ಶಂಕರೇಗೌಡ ಪಾಟೀಲ್ ಮತ್ತು ಲೋಕಾಯುಕ್ತ ಡಿವೈಎಸ್ಪಿ ಎಂ. ಆರ್. ಗೌತಮ್ ಹಾಗೂ ದಾವಣಗೆರೆ ಬಸವನಗರ ಠಾಣೆಯ ಸಿಪಿಐ ಹೆಚ್ ಗುರುಬಸವರಾಜು ಪದಕಕ್ಕೆ ಆಯ್ಕೆಯಾಗಿದ್ದಾರೆ.

ಇನ್ನೂ ಅತ್ಯುತ್ತಮ‌ ತನಿಖೆಗೆ ನಡೆಸಿದ ಅಧಿಕಾರಿಗಳನ್ನು ಮಾತ್ರ ಈ ಪದಕ್ಕೆ ಆಯ್ಕೆ ಮಾಡಲಾಗಿದ್ದು. ಎಸ್ಪಿ ಲಕ್ಷ್ಮೀ ಗಣೇಶ ಈ ಹಿಂದೆ ಬೆಂಗಳೂರು ಗ್ರಾಮಾಂತ ಹೆಚ್ಚುವರಿ ವರಿಷ್ಠಾಧಿಕಾರಿಯಾಗಿದ್ದರು, ಮೊದಲ ಬಾರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಸುಮಾರು ಎರಡು ಕೋಟಿ ಆಸ್ತಿ ವಶಕ್ಕೆ ಪಡೆದಿದ್ದರು.

Six police officers of Karnataka got union Home Ministry Medal

ಇದಕ್ಕೂ ಮೊದಲೂ ರಾಮನಗರ ಜಿಲ್ಲೆಯಲ್ಲಿ ಮೂರು ಕೊಲೆ ಜೊತೆಗೆ ರೇಪ್ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗೆ ಮರಣದಂಡನೆ ಆಗುವಂತೆ ಪ್ರಕರಣದಲ್ಲಿ ಸಾಕ್ಷ್ಯ ಕಲೆ ಹಾಕಿ ಕೋರ್ಟ್ ಚಾರ್ಜ್ ಶೀಟ್ ಸಲ್ಲಿಸಿದ್ದರು.‌ ಇದರ ಜೊತೆಗೆ ಇನ್ನೂ ಅನೇಕ ನಿಷ್ಪಕ್ಷಪಾತ ತನಿಖೆಗಾಗಿ ಕೇಂದ್ರ ಸರ್ಕಾರ ನೀಡುವ ಈ ಗೌರವವನ್ನ ಲಕ್ಷ್ಮೀ ಗಣೇಶ್ ತಮ್ಮದಾಗಿಸಿಕೊಂಡಿದ್ದಾರೆ.

English summary
Independence day 2022; Karnataka's Six police officers has been selected for the union home ministry medal. 151 officers including civil police CBI, NCB across the country are selected for this medal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X