ತೇಜಸ್ ಮಾದರಿ ರೈಲಿನ 6 ಕಾರಿಡಾರ್; ಕರ್ನಾಟಕದ ಒಂದು ರೈಲು

ಬೆಂಗಳೂರು, ಫೆಬ್ರವರಿ 01 : "ತೇಜಸ್ ಮಾದರಿಯ ನೂತನ ರೈಲುಗಳನ್ನು ಪರಿಚಯಿಸಲಾಗುತ್ತದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಚೆನ್ನೈ-ಬೆಂಗಳೂರು-ಮೈಸೂರು ನಡುವಿನ ರೈಲು ಸಹ ಇದರಲ್ಲಿ ಸೇರಿದೆ.

ಶನಿವಾರ 2020ನೇ ಸಾಲಿನ ಬಜೆಟ್ ಮಂಡನೆ ಮಾಡಲಾಯಿತು. ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಮಾಡುವ ಸಂಪ್ರದಾಯವನ್ನು ನಿಲ್ಲಿಸಲಾಗಿದ್ದು, ಮುಖ್ಯ ಬಜೆಟ್‌ನಲ್ಲಿಯೇ ರೈಲ್ವೆಯನ್ನು ಸೇರಿಸಿಕೊಳ್ಳಲಾಗಿದೆ. ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೂ ಹಲವು ಕೊಡುಗೆಗಳನ್ನು ನೀಡಲಾಗಿದೆ.

" ಬೆಂಗಳೂರು ನಗರಕ್ಕೆ ಸಬ್ ಅರ್ಬನ್ ರೈಲು, ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸಲು ತೇಜಸ್ ಮಾದರಿಯ ರೈಲುಗಳನ್ನು ಪರಿಚಯಿಸಲಾಗುತ್ತದೆ" ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.

Six High Speed And Semi High Speed Corridors By Railway

ಬುಲೆಟ್ ರೈಲು ಯೋಜನೆಯನ್ನು ಪೂರ್ಣಗೊಳಿಸಲು ಆದ್ಯತೆ ನೀಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 14, 2017ರಲ್ಲಿ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗೆ ಶಂಕು ಸ್ಥಾಪನೆ ಮಾಡಲಾಗಿದೆ.

ಗಂಟೆಗೆ 350 ಕಿ. ಮೀ. ವೇಗದಲ್ಲಿ ಬುಲೆಟ್ ರೈಲು ಸಂಚಾರ ನಡೆಸಲಿದೆ. ಅಹಮದಾಬಾದ್-ಮುಂಬೈ ನಡುವಿನ 508 ಕಿ. ಮೀ.ಯನ್ನು ರೈಲು ಎರಡು ಗಂಟೆಗಳಲ್ಲಿ ಕ್ರಮಿಸಲಿದೆ. ಜಪಾನ್ ಜೊತೆಯಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ರೈಲ್ವೆ ಇಲಾಖೆ ಹೈಸ್ಪೀಡ್ ಮತ್ತು ಸೆಮಿ ಹೈಸ್ಪೀಡ್ ಕಾರಿಡಾರ್‌ಗಳನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ ಆರು ಮಾರ್ಗಗಳನ್ನು ಗುರುತಿಸಲಾಗಿದೆ. ಇದರಲ್ಲಿ ಚೆನ್ನೈ-ಬೆಂಗಳೂರು-ಮೈಸೂರು (435 ಕಿ. ಮೀ.) ಮಾರ್ಗವೂ ಸೇರಿದೆ.

ಆರು ಕಾರಿಡಾರ್‌ಗಳು

* ದೆಹಲಿ-ನೋಯ್ಡಾ-ಆಗ್ರಾ-ಲಕ್ನೋ-ವಾರಣಾಸಿ (865 ಕಿ. ಮೀ)
* ದೆಹಲಿ-ಜೈಪುರ-ಉದಯ್‌ಪುರ-ಅಹಮದಾಬಾದ್ (886 ಕಿ. ಮೀ)
* ಮುಂಬೈ-ನಾಸಿಕ್-ನಾಗ್ಪುರ (753 ಕಿ. ಮೀ)
* ಮುಂಬೈ-ಪುಣೆ-ಹೈದರಾಬಾದ್ (711 ಕಿ. ಮೀ)
* ಚೆನ್ನೈ-ಬೆಂಗಳೂರು-ಮೈಸೂರು (435 ಕಿ. ಮೀ)
* ದೆಹಲಿ-ಚಂಡೀಗಢ-ಲೂಧಿಯಾನ-ಜಲಂಧರ್-ಅಮೃತಸರ (459 ಕಿ.ಮೀ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+