ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಮಲಾನಂದನಾಥರ ಎದುರು ಕಾಲ ಮೇಲೆ ಕಾಲು ಹಾಕಿ ಕೂತ ಅಮಿತ್ ಶಾ

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ನಡೆದ ಮೇಲೆ ರಾಜ್ಯದ ಒಕ್ಕಲಿಗ ಸಮುದಾಯ ಬಿಜೆಪಿ ವಿರುದ್ಧ ಸಿಟ್ಟಾಗಿದೆ. ಆ ಸಿಟ್ಟಿನ ಪರಿಣಾಮ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಆಗಲಿದೆ ಎಂಬ ಮಾತು ಹಬ್ಬಿತ್ತು. ಅದಕ್ಕು ಪೂರಕ ಎಂಬಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆದಿ ಚುಂಚನ ಗಿರಿ ಮಠದಲ್ಲಿ ಪೀಠಾಧ್ಯಕ್ಷ ನಿರ್ಮಲಾನಂದ ನಾಥರನ್ನು ಭೇಟಿಯಾದರು.

ಈಗಿನ ಸ್ಥಿತೀಲಿ 80 ಸ್ಥಾನ ಗೆಲ್ಲಬಹುದು, ಅಮಿತ್ ಶಾ ಫುಲ್ 'ಕ್ಲಾಸ್'ಈಗಿನ ಸ್ಥಿತೀಲಿ 80 ಸ್ಥಾನ ಗೆಲ್ಲಬಹುದು, ಅಮಿತ್ ಶಾ ಫುಲ್ 'ಕ್ಲಾಸ್'

ಒಕ್ಕಲಿಗರ ಸಿಟ್ಟನ್ನು ತಮಣಿ ಮಾಡುವಲ್ಲಿ ಈ ನಡೆ ಚಾಣಾಕ್ಷತನದ್ದು ಅಂತಲೇ ವಿಶ್ಲೇಷಿಸಲಾಗಿತ್ತು. ಆದರೆ ಇದೀಗ ಭೇಟಿಯ ಸಂದರ್ಭದಲ್ಲಿನ ಫೋಟೋವೊಂದು ಎಲ್ಲೆಡೆ ಹರಿದಾಡಿ, ಮತ್ತೊಂದು ಬಗೆಯ ಸಿಟ್ಟಿಗೆ ಕಾರಣವಾಗುವಂತೆ ಗೋಚರ ಆಗುತ್ತಿದೆ. ಅಮಿತ್ ಶಾ ಭೇಟಿಯ ವೇಳೆ ಆಗಿದ್ದೇನು, ಏಕೆ ಸಿಟ್ಟು?

ಅಮಿತ್ ಶಾ ಮಠಕ್ಕೆ ಭೇಟಿ, ಬೇರೆ ಅರ್ಥ ಕಲ್ಪಿಸುವುದು ಬೇಡವೆಂದ ಶ್ರೀಗಳುಅಮಿತ್ ಶಾ ಮಠಕ್ಕೆ ಭೇಟಿ, ಬೇರೆ ಅರ್ಥ ಕಲ್ಪಿಸುವುದು ಬೇಡವೆಂದ ಶ್ರೀಗಳು

ಆದಿಚುಂಚನಗಿರಿ ಮಠಕ್ಕೆ ಅಮಿತ್ ಶಾ ಅವರು ಭೇಟಿ ನೀಡಿದ್ದ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಎದುರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತು, ಸ್ವಾಮೀಜಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜತೆಗೆ ಆ ಫೋಟೋ ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ.

ಅಸಮಾಧಾನ, ಟೀಕೆ

ಅಸಮಾಧಾನ, ಟೀಕೆ

ಅಮಿತ್ ಶಾ ಅವರ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದು, ನಿರ್ಮಲಾನಂದ ನಾಥರು ಶೂದ್ರ್ ಸಮುದಾಯದ ಸ್ವಾಮೀಜಿ ಎಂಬ ಕಾರಣದಿಂದ ಹೀಗೆ ನಡೆದುಕೊಂಡು, ಅವಮಾನ ಮಾಡಲಾಗಿದೆ. ಅದೇ ಪೇಜಾವರ ಶ್ರೀಗಳೋ ಅಥವಾ ಮತ್ಯಾರಾದರೂ ಮೇಲ್ಜಾತಿಯ ಸ್ವಾಮೀಜಿ ಆಗಿದ್ದರೆ ಈ ರೀತಿ ನಡೆದುಕೊಳ್ಳುತ್ತಿದ್ದರೆ ಎಂಬ ಪ್ರಶ್ನೆ ಎತ್ತಲಾಗಿದೆ.

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

ಫೋಟೋ ಹರಿದಾಡುತ್ತಿದೆ

ಫೋಟೋ ಹರಿದಾಡುತ್ತಿದೆ

ಒಕ್ಕಲಿಗರ ಬ್ರಿಗೇಡ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳೂ ಸೇರಿದಂತೆ ಫೇಸ್ ಬುಕ್, ಟ್ವಿಟ್ಟರ್ ಹಾಗೂ ವಾಟ್ಸ್ ಆಪ್ ಗುಂಪುಗಳಲ್ಲಿ ಸದ್ಯಕ್ಕೆ ಈ ಫೋಟೋ ಸುಳಿದಾಡುತ್ತಿದೆ. ಸಚಿವ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ನಡೆದ ನಂತರ ಒಕ್ಕಲಿಗ ಸಮುದಾಯ ಬಿಜೆಪಿ ವಿರುದ್ಧ ಮುನಿಸಿಕೊಂಡಿದೆ ಎಂಬ ಕಾರಣಕ್ಕೆ ಅಮಿತ್ ಶಾ ಅವರು ಸ್ವಾಮೀಜಿಯನ್ನು ಭೇಟಿ ಮಾಡಿದರು ಎಂಬ ಸುದ್ದಿಯಿತ್ತು. ಈಗ ಭೇಟಿ ವೇಳೆ ಹೊಸ ವಿವಾದ ಹುಟ್ಟಿಕೊಂಡಿದೆ.

ಮಾಜಿ ಸಂಸದೆ-ನಟಿ ರಮ್ಯಾ ಆಕ್ರೋಶ

ಮಾಜಿ ಸಂಸದೆ-ನಟಿ ರಮ್ಯಾ ಆಕ್ರೋಶ

ದೇವರು ಮತ್ತು ನಿರ್ಮಲಾನಂದ ಶ್ರೀಗಳ ಮುಂದೆ ದರ್ಪದಿಂದ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು ಅಪಮಾನ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ. ಶ್ರೀಗಳ ಮುಂದೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದು ನಿಮ್ಮ ಸಂಸ್ಕೃತಿಯೇ ಎಂದು ಮಾಜಿ ಸಂಸದೆ, ನಟಿ ರಮ್ಯಾ ಪ್ರಶ್ನಿಸಿದ್ದಾರೆ.

ಬ್ರಿಜೇಶ್ ಕಾಳಪ್ಪ

ಹಿಂದೂಗಳನ್ನು ಪ್ರತಿನಿಧಿಸುತ್ತೇವೆ ಎನ್ನುವ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷರು ಕುಳಿತುಕೊಳ್ಳುವ ರೀತಿ ಇದೇನಾ? ಆಘಾತವಾಗುತ್ತದೆ. ಇದು ಅಹಂಕಾರದ ಪರಮಾವಧಿ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯಿಸಿದ್ದಾರೆ.

English summary
BJP national president Amit Shah sitting posture in front of Adichunachanagiri seer Nirmalananda natha become controversy. Photo circulating in social media and people angry on this gesture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X