ಗಾನ ಗಂಧರ್ವ Dr.Rajkumar ಗಾಯನದ ಬಗ್ಗೆ ವ್ಯಂಗ್ಯವಾಡಿದ ಗಾಯಕ!
Dr.Rajkumar: ಡಾ. ರಾಜ್‌ಕುಮಾರ್ ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ, ಕನ್ನಡ ಚಿತ್ರರಂಗದ ಧ್ರುವತಾರೆ.... ಈ ರೀತಿ ಹೇಳುತ್ತಲ್ಲೇ ಹೋದರೆ ಡಾ. ರಾಜ್‌ಕುಮಾರ್ ಅವರಿಗೆ ಇರುವ ಬಿರುದುಗಳಿಗೆ ಲೆಕ್ಕವೇ ಇಲ್ಲ. ಡಾ. ರಾಜ್‌ಕುಮಾರ್ ಅವರು ಐದು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಈಗಲೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರು ಕೇವಲ ಅಭಿನಯದಿಂದ ಮಾತ್ರವಲ್ಲ. ಕನ್ನಡ ನಾಡು - ನುಡಿಗಾಗಿ ಅವರು ಮಾಡಿರುವ ಸೇವೆಯಿಂದ ಇಂದಿಗೂ ಯಾರೂ ಮರೆಯಲಾಗದ ಸ್ಥಾನವನ್ನು ಗಳಿಸಿದ್ದಾರೆ. ಇಂದು ಯುವ ಗಾಯಕನೊಬ್ಬನ ಕೀಳುಮಟ್ಟದ ಟ್ವೀಟ್‌ನಿಂದ ಕನ್ನಡಿಗರು ಡಾ. ರಾಜ್‌ಕುಮಾರ್ ಅವರ ಸಾಧನೆಯನ್ನು ಮತ್ತೆ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಡಾ. ರಾಜ್‌ಕುಮಾರ್ ಅವರ ಗಾಯನದ ಬಗ್ಗೆ ಮಾತನಾಡಿದ ಯುವ ಗಾಯಕನಿಗೆ ಕನ್ನಡಿಗರು ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ. ಏನಿದು ವಿವಾದ ಎನ್ನುವ ವಿವರ ಇಲ್ಲಿದೆ.
ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಧ್ರುವತಾರೆ. ಅವರ ನಟನೆ ಹಾಗೂ ಹಾಡನ್ನು ಇಂದಿಗೂ ಎಂದಿಗೂ ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ಎಷ್ಟೆತ್ತರಕ್ಕೆ ಬೆಳೆದರೂ ಅವರು ಬೇರುಗಳನ್ನು ಮರೆತಿರಲಿಲ್ಲ. ಇದೇ ಕಾರಣಕ್ಕೆ ಕನ್ನಡಿಗರು ಡಾ. ರಾಜ್‌ಕುಮಾರ್ ಎಂದ ಕೂಡಲೇ ಪುಳಕಿತರಾಗುತ್ತಾರೆ. ಅವರ ಯಾವುದೋ ಸಿನಿಮಾದ ಹಾಡು, ದೃಶ್ಯ ಹಾಗೂ ನಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಇಂತಹ ನಟರ ಬಗ್ಗೆ ಗಾಯಕರೊಬ್ಬರು ಮಾಡಿರುವ ಟ್ವೀಟ್ ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅದೇನು ಅಂತ ನೋಡೋಣ..

ಸಂಜಯ್ ನಾಗ್ ಟ್ವೀಟ್‌ಗೆ ಕನ್ನಡಿಗರು ಕೆಂಡ!
ಗಾಯಕ ಸಂಜಯ್ ನಾಗ್‌ನ ಒಂದೇ ಒಂದು ಸಾಲಿನ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಬೆಂಕಿಯುಂಡೆಯಂತೆ ಚಿಮ್ಮುವಂತೆ ಮಾಡಿದೆ. ಗಾಯಕ ಸಂಜಯ್ ನಾಗ್ ಇಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ವೊಂದನ್ನು ಮಾಡಿದ್ದು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಗಾಯಕ ಸಂಜಯ್ ನಾಗ್, ಡಾ. ರಾಜ್‌ಕುಮಾರ್ ಅವರು ಬಹುಶಃ ಅತ್ಯುತ್ತಮ ನಟನಾಗಿರಬಹುದು. ಆದರೆ, ಭಯಾನಕ ಗಾಯಕ ಅಂತ ಟ್ವೀಟ್ ಮಾಡಿದ್ದು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಕನ್ನಡಿಗರ ಸರಣಿ ಟ್ವೀಟ್: ಈ ಟ್ವೀಟ್‌ಗೆ ಕನ್ನಡಿಗರು ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. Let's fill the timeline with #DrRajkumar songs 🙏 ಅಣ್ಣಾವ್ರು ಹಾಡೋದು ಕೇಳೋದು ಒಂದು ಭಾಗ್ಯ. 🙏 ಕೆಲವು ಕಾಗೆಗಳು ಕೋಗಿಲೆಯನ್ನು ಬರೀ ಉರ್ಕೋಬೇಕೋ ಅಷ್ಟೇ ಅಂತ ಕೃಷ್ಣ ಎನ್ನುವವರು ಟ್ವೀಟ್ ಮಾಡಿದ್ದಾರೆ. ಅಣ್ಣಾವ್ರು ಹಾಡೋದು ಕೇಳೋದು ಒಂದು ಭಾಗ್ಯ. ಅವರ ಧ್ವನಿ ನಾ ಕರ್ಕಶ ಅನ್ನೋ ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ... ಎಂದು ಭೈರೇಗೌಡ ಎನ್ನುವರು ಟ್ವೀಟ್ ಮಾಡಿದ್ದಾರೆ. ಗಾನ ಗಂಧರ್ವ Dr.Rajkumar 💛❤️, ಹೇ ದಿನಕರ ಶುಭಕರ ಹಾಡನ್ನು ದ್ವೇಷ ಮಾಡೋ ಕರ್ಕಶ ಜೀವಿಗಳು ಇದ್ದಾರೆ ಎಂದು ಇವತ್ತೇ ಗೊತ್ತಾಗಿದ್ದು ಅಂತ ಕನ್ನಡಿಗರು ಟ್ವೀಟ್ ಮಾಡಿದ್ದಾರೆ. ಹಲವರು ಡಾ. ರಾಜ್‌ಕುಮಾರ್ ಅವರ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಂಜಯ್ ಅಕೌಂಟ್ ಡಿಲೀಟ್ ?
ಇನ್ನು ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸಂಜಯ್ ಅಕೌಂಟ್ ಕಾಣಿಸುತ್ತಿಲ್ಲ. ನೂರಾರು ಜನ ಕನ್ನಡಿಗರು ಡಾ.ರಾಜ್‌ಕುಮಾರ್ ಅವರ ಗಾಯನದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಸಂಜಯ್ ನಾಗ್‌ಗಾಗಿ ಹುಕುತ್ತಿರುವ ಕನ್ನಡಿಗರು
ಇನ್ನು ಈ ರೀತಿ ಟ್ವೀಟ್ ಮಾಡಿ ಭಾರೀ ವಿರೋಧಕ್ಕೆ ಗುರಿಯಾಗುತ್ತಿದ್ದಂತೆಯೇ ಸಂಜಯ್ ನಾಗ್ ತಲೆಮರೆಸಿಕೊಂಡಿದ್ದು. ಕನ್ನಡಿಗರು ಈತನಿಗಾಗಿ ಹುಡುಕುತ್ತಿದ್ದಾರೆ. ಕನ್ನಡಿಗರ ಕೋಪಕ್ಕೆ ಗುರಿಯಾದ ಸಂಜಯ್‌ನಾಗ್ ಕೂಡಲೇ ಟ್ವಟ್ಟರ್‌ನಿಂದಲೇ ಹೊರಗೆ ಓಡಿ ಹೋಗಿದ್ದಾನೆ. ಇದೀಗ ಅವರ ಖಾತೆ ಎಕ್ಸ್‌ನಲ್ಲಿ ಕಾಣಿಸುತ್ತಿಲ್ಲ ಎಂದು ಕನ್ನಡಿಗರು ಟ್ವೀಟ್ ಮಾಡುತ್ತಿದ್ದಾರೆ.
ರಾಜ್ಯ ಪ್ರಶಸ್ತಿ ಗಳಿಸಿರುವ ಡಾ.ರಾಜ್‌ಕುಮಾರ್
ಇನ್ನು ಡಾ. ರಾಜ್‌ಕುಮಾರ್ ಅವರು ಅವರ ಅದ್ಭುತ ಕಂಠ ಸಿರಿಯಿಂದಲೇ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಬಾಳುವಂತೆ ಹೂವೆ.. ಯಾರೇ ಕೂಗಾಡಲಿ... ಅಶ್ವಮೇಧ, ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು.. ನಾದ ಮಯ ಈ ಲೋಕವೆಲ್ಲಾ.. ಅರಿಷಿಣ ಕುಂಕುಮ.. ಸೇರಿದಂತೆ ಹಲವು ಹಾಡುಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಇನ್ನು ನಾಲ್ಕು ಹಾಡುಗಳಿಗೆ ಡಾ. ರಾಜ್‌ಕುಮಾರ್ ಅವರಿಗೆ ರಾಜ್ಯ ಪ್ರಶಸ್ತಿ ಸಂದಿವೆ.












Click it and Unblock the Notifications