ಪ್ರಾಪರ್ಟಿ ರಿಜಿಸ್ಟ್ರೇಷನ್‌ನಲ್ಲಿ ಮಹತ್ವದ ಬದಲಾವಣೆ!
ರಾಜ್ಯ ಸರ್ಕಾರವು ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯನ್ನು ತಂದಿದೆ. ಕಳೆದ ಐದಾರು ತಿಂಗಳಿನಿಂದಲೂ ಆಸ್ತಿ ನೋಂದಣಿ, ಆಸ್ತಿ ತೆರಿಗೆ, ಇ ಖಾತಾ ಹಾಗೂ ಬಿ ಖಾತಾ ಸೇರಿದಂತೆ ವಿವಿಧ ಆಸ್ತಿ ಮಾರಾಟ ಹಾಗೂ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೆಲವೊಂದು ಪ್ರಮುಖ ಬದಲಾವಣೆಗಳನ್ನು ತಂದಿದೆ. ಇದರೊಂದಿಗೆ ಇದೀಗ ಆಸ್ತಿ ರಿಜಿಸ್ಟ್ರೇಷನ್‌ನಲ್ಲಿ ಕೆಲವೊಂದು ಮುಖ್ಯ ಬದಲಾವಣೆಗಳನ್ನು ತರಲಾಗಿದೆ. ಇತ್ತೀಚೆಗಷ್ಟೇ ಆಸ್ತಿಯಲ್ಲಿ ಮಾಲೀಕರ ಹೆಸರು ಸೇರ್ಪಡೆ ಮಾಡುವುದಕ್ಕೆ ಸಹ ಶುಲ್ಕ ನಿಗದಿ ಮಾಡಿ ರಾಜ್ಯ ಸರ್ಕಾರವು ಆದೇಶವೊಂದನ್ನು ಹೊರಡಿಸಿತ್ತು.
ಆಸ್ತಿಗಳ ಸುರಕ್ಷತೆ ಹಾಗೂ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಆಗುವ ಮೋಸವನ್ನು ತಪ್ಪಿಸುವ ಉದ್ದೇಶದಿಂದ. ಅಲ್ಲದೇ ಮುಂದಿನ ದಿನಗಳಲ್ಲಿ ಆಸ್ತಿ ಮಾರಾಟದಲ್ಲಿ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಆಸ್ತಿ ರಿಜಿಸ್ಟ್ರೇಷನ್ ಮಾಡುವುದಕ್ಕೆ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ. ಆದರೆ, ಪ್ರಾಪರ್ಟಿ ರಿಜಿಸ್ಟ್ಟ್ರೇಷನ್‌ನಲ್ಲಿ ರಾಜ್ಯ ಸರ್ಕಾರವು ಜಾರಿ ಮಾಡಿರುವ ಹೊಸ ವಿಧಾನವು ಅತ್ಯಂತ ಸರಳವಾಗಿದೆ. ಹೀಗಾಗಿ ಪ್ರಾಪರ್ಟಿದಾರರು ಈ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.

ಪ್ರಾಪರ್ಟಿ ರಿಜಿಸ್ಟ್ರೇಷನ್ ಹೊಸ ನಿಯಮ ಏನು: ರಾಜ್ಯ ಸರ್ಕಾರವು ಪ್ರಾಪರ್ಟಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್ ಜೋಡಣೆ ಮಾಡಬೇಕು ಎಂದು ಎಲ್ಲಾ ಸಬ್ ರಿಜಿಸ್ಟ್ರೇಷನ್ ಕಚೇರಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೇ ರಿಜಿಸ್ಟ್ರೇಷನ್‌ಗೆ ಮುಂಚಿತವಾಗಿಯೇ ಅಧಿಕೃತ ಮೊಬೈಲ್ ನಂಬರ್ ಜೋಡಣೆ, ಬಯೋಮೆಟ್ರಿಕ್ ಆಸ್ಟ್ರೇಟ್ ಹಾಗೂ ಹೆಸರು ಹೊಂದಾಣಿಕೆ ಆಗಿದೆಯಾ ಎನ್ನುವ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು.
ಒಂದೊಮ್ಮೆ ಅಷ್ಟೇಟ್ ಮಾಡಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ರಿಜಿಸ್ಟ್ರೇಷನ್ ಪ್ರಕ್ರಿಯೆಗಳನ್ನು ನೀವು ಮುಗಿಸಿಕೊಳ್ಳಬಹುದಾಗಿದೆ. ಇಲ್ಲದಿದ್ದರೆ ತಾಂತ್ರಿಕ ಸಮಸ್ಯೆ ಉಂಟಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಸಾಧ್ಯವಾಗದೆ ಇರಬಹುದು ಎಂದೂ ಹೇಳಲಾಗಿದೆ.
ಮುಂದುವರಿದು ಸಬ್ ರಿಜಿಸ್ಟ್ರಾರ್ ಕಚೇರಿ ಸಾಫ್ಟ್‌ವೇರ್ ಅನ್ನು ಕಾವೇರಿ 2.0 ತಂತ್ರಾಂಶಕ್ಕೆ ಅಪ್ ಗ್ರೇಡ್ ಮಾಡಿಕೊಳ್ಳಲಾಗಿದ್ದು. ಅಕ್ರಮ ತಡೆಗೆ ಸುರಕ್ಷಿತ ಕ್ರಮಗಳು ಹಾಗೂ ಆದಾಯ ಸೋರಿಕೆಗೆ ಸಾಕಷ್ಟು ಬದಲಾವಣೆ ತರಲಾಗಿದೆ ಎಂದೂ ಹೇಳಲಾಗಿದೆ.
ಪರ್ಯಾಯ ದಾಖಲೆಗಳೇನು: ಇನ್ನು ರಾಜ್ಯ ಸರ್ಕಾರವು ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಇದರೊಂದಿಗೆ ಕೆಲವೊಂದು ವಿನಾಯಿತಿಗಳನ್ನೂ ರಾಜ್ಯ ಸರ್ಕಾರವು ನೀಡಿದೆ ಎಂದು ಹೇಳಲಾಗಿದೆ. ಆಸ್ತಿ ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ಅಥವಾ ಆಗದೆ ಇರುವವರಿಗೆ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಎಲ್ಲಕ್ಕಿಂತ ಆಧಾರ್ ಆಸ್ಟ್ರೇಟ್ ಮಾಡಿಕೊಳ್ಳುವುದು ಉತ್ತಮ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಿ ಖಾತಾ ಅವಧಿ ವಿಸ್ತರಣೆ: ರಾಜ್ಯ ಸರ್ಕಾರವು ಇದೇ ಸಂದರ್ಭದಲ್ಲಿ ಬಿ ಖಾತಾ ಮಾಡಿಸಿಕೊಳ್ಳುವ ಅವಧಿಯನ್ನೂ ವಿಸ್ತರಿಸಿದೆ. ಬಿ ಖಾತಾ ಅವಧಿಯನ್ನು ಬರೋಬ್ಬರಿ 3 ತಿಂಗಳ ಅವಧಿಗೆ ವಿಸ್ತರಿಸಲಾಗಿದೆ ಇದರಿಂದ ಆಸ್ತಿದಾರರಿಗೆ ಲಾಭವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications