ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ಜಾಸ್ತಿ ಒತ್ತಡ ಇದೆ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 11: ''ಕೋಲಾರದಲ್ಲಿ ಶ್ರೀನಿವಾಸ್ ಗೌಡ ನಿಲ್ಲಲ್ಲ, ಅದಕ್ಕೆ ನೀವು ನಿಲ್ಲಿ ಅಂತಿದ್ದಾರೆ. ಅನೇಕ ಕಡೆಗಳಲ್ಲೂ ಕರೆಯುತ್ತಿದ್ದಾರೆ, ಅದಕ್ಕಾಗಿ ಅಲ್ಲಿ ಪರಿಶೀಲನೆ ಮಾಡಲು ಕೋಲಾರಕ್ಕೆ ಹೋಗ್ತಿದ್ದೇನೆ'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದೇ ನನ್ನ ಕೊನೆಯ ಚುನಾವಣೆ ಸ್ಪರ್ಧೆ ಎಂದು ಘೋಷಿಸಿದ್ದು, ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಸಿದ್ದರಾಮಯ್ಯ ಬಾದಾಮಿ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದು ಫಿಕ್ಸ್ ಆಗಿದೆ. ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತಾರೆ ಅನೋದು ಮಾತ್ರ ಇನ್ನೂ ಅಧಿಕೃತವಾಗಿಲ್ಲ. ಇದೀಗ ಕೋಲಾರದಿಂದ ಸಿದ್ದರಾಮಯ್ಯ ಅಖಾಡಕ್ಕಿಳಿಯುವುದು ಖಚಿತ ಅನ್ನುವ ಮಾತುಗಳು ಇದೀಗ ಬಲವಾಗಿ ಕೇಳಿ ಬರ್ತಿದೆ.

ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸದಿದ್ದರೆ ವಿಷ ಕುಡಿತೀವಿ: ಕಾಂಗ್ರೆಸ್ ಮುಖಂಡರ ಬೇಡಿಕೆ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸದಿದ್ದರೆ ವಿಷ ಕುಡಿತೀವಿ: ಕಾಂಗ್ರೆಸ್ ಮುಖಂಡರ ಬೇಡಿಕೆ

ಭಾನುವಾರ ಚುನಾವಣಾ ಪ್ರಚಾರಕ್ಕಾಗಿ ಸಿದ್ದಪಡಿಸಿರುವ ವಿಶೇಷ ಬಸ್‌ನಲ್ಲಿ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲಾರು ಒಟ್ಟಾಗಿ ಹೋಗಬೇಕು, ಅದಕ್ಕಾಗಿ ಬಸ್ಸಿನಲ್ಲಿ ಹೋಗುತ್ತೇವೆ. ಕೋಲಾರದಲ್ಲಿ ನನ್ನನ್ನು ಕರೆಯುತ್ತಿದ್ದಾರೆ.

Siddaramaiah visits Kolar and hints at contesting 2023 assembly elections

ಬಾದಾಮಿ, ವರುಣಾ, ಚಾಮರಾಜಪೇಟೆಯಲ್ಲೂ ಸ್ಪರ್ಧೆಗೆ ಒತ್ತಡ ಇದೆ, ಆದರೆ ಕೋಲಾರ ಕ್ಷೇತ್ರದಲ್ಲಿ ಜಾಸ್ತಿ ಒತ್ತಡ ಇದೆ. ಅದಕ್ಕಾಗಿ ನಾನು ಇಂದು ಅಲ್ಲಿಗೆ ಹೋಗುತ್ತಿದ್ದೇನೆ. ಇಂದು ಅಲ್ಲಿನ ಸ್ಥಳೀಯ ನಾಯಕರ ಜೊತೆಗೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀನಿ. ಅಂತಿಮವಾಗಿ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.

ಕ್ಷೇತ್ರದ ಜನರ ನಾಡಿಮಿಡಿತ ಅರಿಯಲು ಬಂದ ಸಿದ್ದರಾಮಯ್ಯ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೋಲಾರ ಕ್ಷೇತ್ರದ ಜನರ ನಾಡಿಮಿಡಿತ ಅರಿಯಲು ಸಿದ್ದರಾಮಯ್ಯ ಇಂದು ಕ್ಷೇತ್ರ ಪ್ರವಾಸವನ್ನು ಕೈಗೊಂಡಿದ್ದಾರೆ.

ಕೋಲಾರ ಜಿಲ್ಲೆಯ ಕಾಂಗ್ರೆಸ್ ಜನ ಪ್ರತಿನಿಧಿಗಳು, ಮುಖಂಡರು ಸಿದ್ದರಾಮಯ್ಯ ಸ್ಪರ್ಧದಿಸಿದರೆ ಗೆಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಅವರ ಸ್ಪರ್ಧೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೋಲಾರದಲ್ಲಿ ಚರ್ಚ್, ಮಸೀದಿ, ಮಂದಿರಗಳಿಗೆ ಭೇಟಿ ನೀಡಲಿದ್ದಾರೆ. ಕೋಲಾರದಲ್ಲಿ ಸ್ಪರ್ಧಿಸುವ ಕುರಿತಂತೆ ಮುಖಂಡರು, ಜನರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

Siddaramaiah visits Kolar and hints at contesting 2023 assembly elections

ನನಗೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರವೇ ಇಲ್ಲದೆ ಹೋದರೆ ನನ್ನನ್ನು ಬೇರೆ ಕಡೆಗಳಲ್ಲಿಂದ ಬಂದು ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂದು ಕರೆಯುತ್ತಾರೆ? ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿ ಸಾವಿರಾರು ಜನ ಮಹಿಳೆಯರು ಬಂದು ನಮ್ಮ ಮುಂದೆ ಕೂತುಕೊಳ್ಳುತ್ತೇವೆ ಎಂದು ಪತ್ರ ಬರೆದಿದ್ದಾರೆ ಎಂದು ನವೆಂಬರ್ 7ರಂದು ಬೆಳಗಾವಿಯಲ್ಲಿ ಸಿದ್ದರಾಮಯ್ಯ ಹೇಳಿದರು.

ಆದರೆ ನನ್ನ ಯೋಚನೆ ಏನೆಂದರೆ ಪ್ರತಿ ವಾರಕ್ಕೊಮ್ಮೆ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿ, ಕಾರ್ಯಕರ್ತರನ್ನು ಬೇಟಿಯಾಗಿ, ಜನರ ಸಮಸ್ಯೆಗಳಿಗೆ ತತ್‌ ಕ್ಷಣದಲ್ಲಿ ಸ್ಪಂದನೆ ನೀಡಲು ಸಾಧ್ಯವಾಗುವುದಿಲ್ಲ. ಜನ ನೀವು ನಿರಂತರ ಭೇಟಿ ನೀಡದಿದ್ದರೂ ಪರವಾಗಿಲ್ಲ ಇಲ್ಲಿಂದಲೇ ಸ್ಪರ್ಧೆಮಾಡಿ ಎಂದು ಹೇಳಬಹುದು ಆದರೆ ನನ್ನ ಮನಸು ಇದಕ್ಕೆ ಒಪ್ಪುತ್ತಿಲ್ಲ.

ನಾನು ಬಾದಾಮಿಗೆ ಹೋಗದೆ ಎರಡು ತಿಂಗಳು ಕಳೆದಿದೆ, ನಾಳೆ ಭೇಟಿ ನೀಡಬೇಕು ಎಂದುಕೊಂಡಿದ್ದೆ ಬೇರೆ ಯಾವುದೋ ತುರ್ತು ಕೆಲಸ ಬಂದಿರುವುದರಿಂದ ನಾಳೆಯೂ ಹೋಗಲು ಆಗಲ್ಲ. ಕೋಲಾರದಿಂದ ಸ್ಪರ್ಧೆ ಮಾಡಿ ಎಂದು ಕರೆಯುತ್ತಿದ್ದಾರೆ, ವರುಣಾದಿಂದ ಸ್ಪರ್ಧೆಮಾಡಿ ಎಂದು ನನ್ನ ಪುತ್ರ ಯತೀಂದ್ರ ಹೇಳುತ್ತಿದ್ದಾರೆ, ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡುವಂತೆ ಜಮೀರ್‌ ಅಹ್ಮದ್‌ ಕರೆಯುತ್ತಿದ್ದಾರೆ, ಹೀಗೆ ಬೇರೆ ಬೇರೆ ಕಡೆಗಳಿಂದ ಸ್ಪರ್ಧೆಗೆ ಆಹ್ವಾನ ಬರುತ್ತಿದೆ. ಎಲ್ಲಿಂದ ನಿಲ್ಲಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.

English summary
Senior Congress leader Siddaramaiah on Sunday visited Kolar indicated that he may contest the 2023 assembly elections from this contituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X