14ನೇ ಕರ್ನಾಟಕ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ: ಈವರೆಗೆ ಅಹಿಂದ ನಾಯಕ ಇಟ್ಟ ಹೆಜ್ಜೆಗಳ ಹಿನ್ನೋಟ, ವಿವರ

ಬೆಂಗಳೂರು, ಜಲೈ 06: ಕರ್ನಾಟಕ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದ ಆಡಳಿತಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2023-24ನೇ ಸಾಲಿನ ರಾಜ್ಯದ 14ನೇ ಆಯವ್ಯಯ ಜುಲೈ 7ರಂದು ನಾಳೆ ಶುಕ್ರವಾರ ಮಂಡನೆ ಆಗಲಿದೆ. ನಿರಂತರ ಸಭೆಗಳ ಮೂಲಕ ಹಣಕಾಸು ಇಲಾಖೆಯನ್ನು ಸಜ್ಜುಗೊಳಿಸಿರುವ ಸಿದ್ದರಾಮಯ್ಯ ಅವರು ಐತಿಹಾಸಿ ಬಜೆಟ್ ಮಂಡಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕಳೆದ ಒಂದು ವಾರದಿಂದ ಕಾಯಕ ಅಂದರೆ ಉತ್ಪತ್ತಿ, ದಾಸೋಹ ಅಂದರೆ ವಿತರಣೆ ಎಂಬ ಮಾತನ್ನು ಸಾರ್ವಜನಿಕ ಭಾಷಣಗಳಲ್ಲಿ ಮತ್ತೆ ಮತ್ತೆ ಹೇಳಿದ್ದಾರೆ. ಅಂದರೆ ಇದು ಕಾಕತಾಳಿಯವಲ್ಲ. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ, ಹಣಕಾಸು ಸಚಿವರಾಗಿ 1995-96 ರಲ್ಲಿ ಮೊದಲ ಆಯವ್ಯಯ ಮಂಡಿಸಿದ್ದರು. ಅವರ ಕೊನೆಯ ಅವಧಿ 2018-19ರಲ್ಲಿ ಮಂಡಿಸಿದ 13ನೇ ಆಯವ್ಯಯದಲ್ಲೂ ಶರಣ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ರಾಮ ಮನೋಹರ ಲೋಹಿಯಾ ಮತ್ತು ದೇವರಾಜ ಅರಸರ ನೆರಳು ಸ್ಪಷ್ಟವಾಗಿ ದಾಖಲಾಗಿವೆ.

Siddaramaiah To Present 14th Karnataka Budget 2023, Who Look At Back Steps Taken By Previous

ಇದೀಗ ಸಿಎಂ ಸಿದ್ದರಾಮಯ್ಯನವರು ಮಂಡಿಸಲಿರುವ 14 ನೇ ಆಯವ್ಯಯದಲ್ಲಿ ಬಸವಣ್ಣನವರ ಕಾಯಕ ಮತ್ತು ದಾಸೋಹದ ತತ್ವಗಳು ಸ್ಮರಿಸಿದ್ದಾರೆ.

1995 ರಿಂದ 2014ರ ವರೆಗೂ ಮಂಡಿಸಿದ ಏಳು ಆಯವ್ಯಯಗಳಲ್ಲಿ ಸಮಾಜವಾದಿ ಆಶಯಗಳು, ಚಿಂತನೆಗಳು, ಕಾಳಜಿಗಳು ಎದ್ದು ಕಾಣಿಸುತ್ತವೆ. 2013-14 ರಿಂದ 2018-19ರ ವರೆಗಿನ ಆರು ಆಯವ್ಯಯಗಳಲ್ಲಿ ಆಗಷ್ಟೆ ಎದೆ ಎತ್ತಿದ್ದ ಅಹಿಂದ ಚಳಚಳಿಯ ತತ್ವ ಮತ್ತು ಆದರ್ಶಗಳು ಸಿದ್ದರಾಮಯ್ಯರ ಕೈ ಹಿಡಿದು ನಡೆಸಿದ್ದಕ್ಕೆ ಸ್ಪಷ್ಟ ಕುರುಹುಗಳು ಮತ್ತು ದಾಖಲೆಗಳಿವೆ.

ಈ ಎರಡು ಹಂತದ ಆಯವ್ಯಯಗಳಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 85 ರಷ್ಟಿರುವ ಅಹಿಂದ ಮತ್ತು ಶೂದ್ರ ಸಮುದಾಯಗಳಿಗೆ ಹಂಚಿಕೆ ಮಾಡುತ್ತಲೇ ಕೃಷಿ, ಕೈಗಾರಿಕೆ, ಸೇವಾ ವಲಯ ಮತ್ತು ಕೌಶಲ್ಯಾಭಿವೃದ್ಧಿಗೂ ಹೆಚ್ಚಿನ ಪ್ರಮಾಣದ ಹಣ ನೀಡಿರುವುದು ಬಸವಣ್ಣನವರ ಸರ್ವರಿಗೂ ಸಮಪಾಲು ಎನ್ನುವ ಆಶಯವನ್ನು ಪಾಲಿಸಿರುವುದಕ್ಕೆ ಸಾಕ್ಷಿ ಆಗಿದೆ.

Siddaramaiah To Present 14th Karnataka Budget 2023, Who Look At Back Steps Taken By Previous

ಈಗ ಅತ್ಯಂತ ಸವಾಲಿನ 14ನೇ ಆಯವ್ಯಯದಲ್ಲಿ ಎಲ್ಲಾ ಜಾತಿ, ಜನವರ್ಗಗಳ ಬದುಕಿನ ಸಂಕಷ್ಟಗಳಿಗೆ ತಕ್ಕ ಮಟ್ಟಿನ ಸಮಾಧಾನ ನೀಡುವ ಐದು ಗ್ಯಾರಂಟಿಗಳ ಪ್ರಭಾವ ದಟ್ಟವಾಗಿರುತ್ತದೆ ಎನ್ನುವುದು ಮುಖ್ಯಮಂತ್ರಿಗಳ ಕಳೆದ ಒಂದು ವಾರದ ಹೇಳಿಕೆಗಳಿಂದ ಅಂದಾಜಿಸಬಹುದು.

ಬಜೆಟ್: ಆರ್ಥಿಕ ಶಿಸ್ತು ಮೀರದ ಸಿದ್ದರಾಮಯ್ಯ

ಇದುವರೆಗಿನ 13 ಆಯವ್ಯಯಗಳಲ್ಲಿ ಕೇಂದ್ರೀಕರಿಸಿರುವ ರಾಜಸ್ವ ಮತ್ತು ಮಾಡಿರುವ ವೆಚ್ಚಗಳೆಲ್ಲವೂ ವರ್ಷದಿಂದ ವರ್ಷಕ್ಕೆ ಏರಿಕೆ ಆಗಿದೆ. ವಿಶೇಷವಾಗಿ 2014-15 ರಿಂದ 2018-19ರ ವರೆಗೂ 127 ಕೋಟಿಯಿಂದ 910 ಕೋಟಿವರೆಗೂ ರಾಜಸ್ವ ಹೆಚ್ಚುವರಿಯಾ ಆಗಿರುವುದು ಸಿದ್ದರಾಮಯ್ಯ ಅವರು ಎಲ್ಲೂ ಆರ್ಥಿಕ ಶಿಸ್ತನ್ನು ಉಲ್ಲಂಘಿಸದಿರುವುದಕ್ಕೆ ಕನ್ನಡಿ ಹಿಡಿದಂತಿವೆ.

ರಾಜ್ಯದಲ್ಲಿ ಅತೀ ಹೆಚ್ಚು ಆಯವ್ಯಯ ಮಂಡಿಸಿದ ಹೆಗ್ಗಳಿಕೆ ಜತೆಗೇ ನುಡಿದದ್ದನ್ನೆ ನಡೆದ ಸಿದ್ದರಾಮಯ್ಯ ನವರ ಆರ್ಥಿಕ ಶಿಸ್ತು, ಜನಪರ ಕಾಳಜಿ ಮೇಳೈಸಿದ ಘೋಷಣೆಗಳನ್ನು ಅನುಷ್ಠಾನಗೊಳಿಸಿದ ಖ್ಯಾತಿಯೂ ಅವರಿಗೆ ಸೇರಿದೆ.

Siddaramaiah To Present 14th Karnataka Budget 2023, Who Look At Back Steps Taken By Previous

2018ರ ಫೆಬ್ರುವರಿ ಯಲ್ಲಿ 13ನೇ ಆಯವ್ಯಯ ಮಂಡಿಸಿ ರಾಮಕೃಷ್ಣ ಹೆಗಡೆಯವರ ದಾಖಲೆಯನ್ನು ಸರಿಗಟ್ಟಿದ ಸಿದ್ದರಾಮಯ್ಯ ಅವರು ರಾಜ್ಯದ ಭವಿಷ್ಯದಲ್ಲಿ ಮತ್ಯಾರೂ ತಮ್ಮನ್ನು ಸರಿಗಟ್ಟಲು ಸಾಧ್ಯವಾಗದ ಮಟ್ಟದ ದಾಖಲೆಯನ್ನು ದಾಖಲಿಸುತ್ತಿದ್ದಾರೆ.

ಅಧ್ಯಯನ ಮತ್ತು ಸಂಶೋಧನೆಗೆ ಅರ್ಹವಾದ ಸಿದ್ದರಾಮಯ್ಯ ಅವರ ದಾಖಲೆಯ ಆಯವ್ಯಯಗಳಲ್ಲಿ ಪ್ರಮುಖವಾಗಿ ಎರಡು ಸಂಗತಿಗಳನ್ನು ಗಮನಿಸಬಹುದು.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1991ನ್ನು ಮತ್ತು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ ಷರತ್ತುಗಳನ್ನು ಎಲ್ಲೂ ಉಲ್ಲಂಘಿಸಿಲ್ಲ. ಆರ್ಥಿಕ ಶಿಸ್ತಿನ ಚೌಕಟ್ಟನ್ನು ದಾಟಿಲ್ಲ.

ಪಾರದರ್ಶಕತೆ, ದೂರದೃಷ್ಟಿ, ವಿತ್ತೀಯ ವಿಧಾನ ಸರಳೀಕರಣ

ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1991ನ್ನು ಸಿದ್ದಪಡಿಸಿ ಜಾರಿಗೊಳಿಸಿದರು. ಹಾಗೆಯೇ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ ಮೂಲಕ ಸರ್ಕಾರದ ವಿತ್ತೀಯ ವಿಧಾನಗಳನ್ನು ಸರಳೀಕರಿಸಿದ ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆಯ ಅಂದಾಜುಗಳನ್ನು (MTFP) ಅನ್ನು ವಾರ್ಷಿಕ ಆಯವ್ಯಯದೊಂದಿಗೆ ವಿಧಾನಮಂಡಲದಲ್ಲೇ ಕಡ್ಡಾಯಗೊಳ್ಳುವಂತೆ ಮಾಡಿದ್ದು ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತು ಮತ್ತು ದೂರದೃಷ್ಟಿಗೆ ಹಿಡಿದ ಕನ್ನಡಿ ಎನ್ನುವ ಮೆಚ್ಚುಗೆಯ ಅಭಿಪ್ರಾಯಗಳು ಹಲವು ಆರ್ಥಿಕ ತಜ್ಞರಿಂದ ವ್ಯಕ್ತವಾಗಿವೆ.

ಇದುವರೆಗಿನ 13 ಆಯವ್ಯಯಗಳನ್ನು ಮಂಡಿಸುವ ಹೊತ್ತಿನಲ್ಲಿ ರಾಜ್ಯಗಳಿಗೆ ತೆರಿಗೆ ವಿಧಿಸುವ ಹಕ್ಕು ಮತ್ತು ಅಧಿಕಾರ ಇತ್ತು. ಈಗ ರಾಜ್ಯಗಳ ಈ ಹಕ್ಕನ್ನು ಕೇಂದ್ರದ GST ಕಿತ್ತುಕೊಂಡಿದೆ. ಜತೆಗೆ ಈಗಾಗಲೇ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುವುದನ್ನು ಕೇಂದ್ರ ಸರ್ಕಾರ ನಿರಾಕರಿಸುವ ಮೂಲಕ ಸಿದ್ದರಾಮಯ್ಯ ಅವರ ಎದುರಿಗೆ ಭಯಾನಕ ಸವಾಲನ್ನು ಕೇಂದ್ರ ಸರ್ಕಾರ ಕೃತಕವಾಗಿ ಸೃಷ್ಟಿಸಿದೆ.

ಸರ್ವ ಧರ್ಮದವರಿಗೆ 5 ಗ್ಯಾರೆಂಟಿ ಯೋಜನೆ

ಜಿಎಸ್‌ಟಿ ಹಾಗೂ ಕೇಂದ್ರದ ಅಸಹಕಾರದ ನಡುವೆ ಮುಖ್ಯಮಂತ್ರಿಗಳು ಐದು ಗ್ಯಾರಂಟಿ ಯೋಜನೆಗಳನ್ನು ಈ ಆರ್ಥಿಕ ವರ್ಷದಲ್ಲೇ ಖಡಾ ಖಂಡಿತವಾಗಿ ಜಾರಿ ಮಾಡುವುದಾಗಿ ಘೋಷಿಸಿದ್ದಾರೆ. ಸರ್ಕಾರ ಒಂದು ಪಕ್ಷಕ್ಕೆ, ಒಂದು ಧರ್ಮಕ್ಕೆ ಸೇರಿದ್ದಲ್ಲ ಎನ್ನುವುದನ್ನು 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಾಬೀತು ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಅವರು ಮಂಡಿಸಿದ 1ನೇ ಬಜೆಟ್ ಗಾತ್ರ 12,616 ಕೋಟಿ ಆಗಿತ್ತು, ಅವರ 13 ನೇ ಆಯವ್ಯಯದ ಗಾತ್ರ 2,09,181 ಕೋಟಿ ಆಗಿತ್ತು. 14 ನೇ ಆಯವ್ಯಯದ ಗಾತ್ರ 3,35,000 ಕೋಟಿ‌ ಆಗಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಅಂದಾಜಿಸಿದ್ದಾರೆಂದು ವರದಿಯಾಗಿದೆ.

ಈ ಬಾರಿ ಆಯವ್ಯಯದ ಗಾತ್ರದ ಜತೆಗೆ ಆರ್ಥಿಕ ಸವಾಲುಗಳೂ ಸರ್ಕಾರದ ಮುಂದಿವೆ. ಸಮಾಜವಾದಿ ಆರ್ಥಿಕ ನೀತಿಗಳನ್ನು ಅಳಿಸುತ್ತಾ ಜನಪರ ಕಾಳಜಿಗಳನ್ನು ಕೊಲ್ಲುತ್ತಾ ಲಾಭವಷ್ಟೆ ಆಧ್ಯತೆ ಆಗಿರುವ ಮಾರುಕಟ್ಟೆ ಮತ್ತು ಕಾರ್ಪೋರೇಟ್ ಆರ್ಥಿಕ ನೀತಿ ದೇಶವನ್ನು ಆಳುತ್ತಿದೆ ಎಂಬ ಆರೋಪಗಳಿವೆ. ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 14ನೇ ಬಜೆಟ್ ಆರ್ಥಿಕ ಸವಾಲುಗಳಿಂದಲೇ ಸುತ್ತುವರೆದಿದೆ.

ಈ ಸವಾಲುಗಳ ಚಕ್ರವ್ಯೂಹವನ್ನು ಮುಖ್ಯಮಂತ್ರಿಗಳು ಭೇದಿಸಿ ತಮ್ಮ ಜೀವಮಾನದ ಕಾಳಜಿಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ 24 ಗಂಟೆಗಳಲ್ಲಿ ತೆರೆ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+