Get Updates
Get notified of breaking news, exclusive insights, and must-see stories!

ಲೋಕಸಭಾ ಚುನಾವಣೆ: ಪುತ್ರ ರಾಜಕೀಯ ಭವಿಷ್ಯಕ್ಕೆ ಸಿದ್ದರಾಮಯ್ಯ ಪ್ಲಾನ್-‌ ಶಾಸಕರಿಗೆ ಕೊಟ್ಟ ಹೊಸ ಟಾಸ್ಕ್‌ ಏನು?

ಬೆಂಗಳೂರು, ಫೆಬ್ರವರಿ 05: ವಿಧಾನಸಭಾ ಚುನಾವಣೆಯಲ್ಲಿ ತಂದೆಗಾಗಿ ಯತೀಂದ್ರ ಸಿದ್ದರಾಮಯ್ಯ ಅವರು ವರುಣಾ ವಿಧಾನಸಭಾ ಕ್ಷೇತ್ರವನ್ನ ತ್ಯಾಗ ಮಾಡಿದ್ದರು. ಆದರೆ, ಇದೀಗ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಸ್ಟರ್‌ ಪ್ಲಾನ್‌ ನಡೆಸಿದ್ದಾರೆ.

ಹೌದು, ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಹೀಗಾಗಿ ಮಾಜಿ ಶಾಸಕರಾದ ಯತೀಂದ್ರ ಅವರನ್ನ ಲೋಕಸಭಾ ಚುನಾವಣೆಯಿಂದ ಸ್ಪರ್ಧಿಸಿದರೆ ಹೇಗೆ ಎನ್ನುವ ಕುರಿತು ಮೈಸೂರು ಜಿಲ್ಲೆಯ ಶಾಸಕರು ಹಾಗೂ ಮಾಜಿ ಶಾಸಕರು, ಮುಖಂಡರಿಗೆ ಮಹತ್ವದ ಟಾಸ್ಟ್‌ ಅನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.

Siddaramaiah Take Opinions From Mysuru District Congress MLAs And Leaders For Yathindra Contest

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರತಿ ಕ್ಷೇತ್ರದ ಜಾತಿವಾರು ಅಂಕಿ ಅಂಶಗಳ ಸಮೇತ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದಾರೆ. ಹಾಗೂ ಯತೀಂದ್ರ ಸ್ಪರ್ಧಿಸಿದರೆ ಹೇಗೆ ಎನ್ನುವ ಬಗ್ಗೆ ಸಿದ್ದರಾಮಯ್ಯ ಅವರು ಜಿಲ್ಲೆಯ ಶಾಸಕ ಹಾಗೂ ಮಾಜಿ ಶಾಸಕರ ಬಳಿ ಅಭಿಪ್ರಾಯ ಕೇಳಿದ್ದಾರೆ.

ಈಗಾಗಲೇ ಮೈಸೂರು ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನ ಕಣಕ್ಕಿಳಿಸುವ ಕುರಿತು ಈಗಾಗಲೇ ಭರ್ಜರಿ ತಯಾರಿ ನಡೆಸಿರುವ ಸಿದ್ದರಾಮಯ್ಯ ಅವರು, ಮೊನ್ನೆ ಮೈಸೂರು-ಕೊಡಗು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ತಮ್ಮ ಮಗನನ್ನು ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಬಗ್ಗೆ ಸ್ಥಳೀಯ ಶಾಸಕ ಹಾಗೂ ಮಾಜಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನ ತೆಗೆದುಕೊಂಡು ಕಾರ್ಯನಿರ್ವಹಿಸುವಂತೆ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಸ್ಪರ್ಧೆ ಕುರಿತು ಒಲವು ಹೇಗಿದೆ? ಜಾರಿವಾರು ಸಮೇತ ಮಾಹಿತಿ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದಾರೆ. ಇನ್ನೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಸ್ಥಳೀಯ ಶಾಸಕರು ಹಾಗೂ ಮಾಜಿ ಶಾಸಕರು, ಮುಖಂಡರಿಂದ ಸಿದ್ದರಾಮಯ್ಯ ಅವರು ಮುಕ್ತವಾಗಿ ಅಭಿಪ್ರಾಯವನ್ನ ಸಂಗ್ರಹಿಸಿದ್ದಾರೆ. ಆದರೆ, ಈ ವೇಳೆ ಮೂವರು ಶಾಸಕರು ಹಾಗೂ ಮಾಜಿ ಶಾಸಕರು ಯತೀಂದ್ರ ಅವರು ಸ್ಪರ್ಧೆ ಸರಿ ಆಗಲ್ಲ ಎಂಬ ಅಭಿಪ್ರಾಯವನ್ನ ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.

Siddaramaiah Take Opinions From Mysuru District Congress MLAs And Leaders For Yathindra Contest

ಈಗಾಗಲೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದರಾದ ಪ್ರತಾಪ್‌ ಸಿಂಹ ಅವರಿದ್ದು, ಈ ಬಾರೀಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ರುಚಿ ತೋರಿಸಲು ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದೆ. ಕಮಲ-ದಳ ಒಂದಾಗಿರುವ ವೇಳೆ ಮಾಜಿ ಶಾಸಕಿರಾದ ಯತೀಂದ್ರ ಅವರನ್ನ ಕಣಕ್ಕಿಳಿ ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂಬ ಅಭಿಪ್ರಾಯವನ್ನ ಕೆಲ ಶಾಸಕರು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಯತೀಂದ್ರ ಸ್ಪರ್ಧೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಓರ್ವ ಮಾಜಿ ಶಾಸಕ ಹಾಗೂ ಓರ್ವ ಪರಾಜಿತ ಅಭ್ಯರ್ಥಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತ ಒಂದು ಸುತ್ತಿನ ಮಾತುಕತೆಯನ್ನ ಶಾಸಕರು ಹಾಗೂ ಮಾಜಿ ಶಾಸಕರ ಜೊತೆಗೆ ನಡೆಸಿರುವ ಸಿದ್ದರಾಮಯ್ಯ ಅವರು, ಮುಂದಿನ ಬಾರಿ ಮೈಸೂರಿಗೆ ಬರುವ ವೇಳೆಗೆ ಪ್ರತಿ ಕ್ಷೇತ್ರದ ಜಾತಿವಾರು ಅಂಕಿ ಅಂಶದ ಸಮೇತ ಮಾಹಿತಿ ಕೊಡುವಂತೆ ಶಾಸಕರು ಹಾಗೂ ಮಾಜಿ ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ನಾಲಿ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ತ್ಯಾಗ ಮಾಡಿದ್ದ ಪುತ್ರ ರಾಜಕೀಯ ಭವಿಷ್ಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಣ ತೊಟ್ಟಿದ್ದು, ಪುತ್ರ ರಾಜಕೀಯ ಭವಿಷ್ಯಕ್ಕಾಗಿ ಹಲವು ರಾಜಕೀಯ ಲೆಕ್ಕಾಚಾರವನ್ನ ಹಾಕಿಕೊಂಡಿದ್ದಾರೆ. ಪುತ್ರನ ಭವಿಷ್ಯಕ್ಕಾಗಿ ಮೈಸೂರು ಜಿಲ್ಲೆಯ ಶಾಸಕರಿಗೆ ಹಾಗೂ ಮುಖಂಡರಿಗೆ ಟಾಸ್ಕ್‌ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್‌ ನಾಯಕರ ಜೊತೆಗೆ ಚರ್ಚೆ ನಡೆಸಿ ಯಾವ ನಿರ್ಧಾರಕ್ಕ ಸಿದ್ದರಾಮಯ್ಯನವರು ಬರಲಿದ್ದಾರೆ ಎಂಬುದನ್ನ ಕಾದುನೋಡ್ಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+