Siddaramaiah: ಪಟ್ಟಾಭಿಷೇಕದ ಬಳಿಕ ಮೈಸೂರು ಹುಲಿ ಸಿದ್ದರಾಮಯ್ಯ ಘರ್ಜನೆ; ಇಂದೇ 5 ಗ್ಯಾರಂಟಿ ಘೋಷಣೆ
ಬೆಂಗಳೂರು, ಮೇ 20: ರಾಜ್ಯದ 31 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ ಐತಿಹಾಸಿಕ ಕ್ಷಣಗಣನೆಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸೇರಿದಂತೆ ರಾಷ್ಟ್ರೀಯ ನಾಯಕರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇನ್ನೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯದ ಜನತೆಯನ್ನ ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿ, ಇದು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವ ಜಯ, ನಾಡಿನ ಏಳುವರೆ ಕೋಟಿ ಜನರಿಗೆ ಸಿಕ್ಕಿರುವ ಜಯ ಇದು. ಎಲ್ಲಾರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಈ ರಾಜ್ಯದ ಜನರ ಆಶೀರ್ವಾದ ಕಾರಣ ಎಂದು ಸಂತೋಷವನ್ನ ವ್ಯಕ್ತಪಡಿಸಿದರು.

ಈ ರಾಜ್ಯದಲ್ಲಿ ಪ್ರಚಾರ ಪ್ರಾರಂಭವಾಗಿದ್ದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದ, ನಂತರಮಲ್ಲಿಕಾರ್ಜುನ ಖರ್ಗೆಯವರು ಪ್ರಿಯಾಂಕಾ ಗಾಂಧಿಯವರು ಹಾಗೂ ಅನೇಕ ರಾಷ್ಟ್ರ ನಾಯಕರು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರವನ್ನು ಮಾಡಿದ್ದಾರೆ. ಸಾಕಷ್ಟು ಜನ ಸಾಹಿತಿಗಳು, ಚಿಂತಕರು ಸಂಘಟನೆಯ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದವನ್ನು ಮಾಡಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು ಹೇಳುತ್ತೇನೆ ಎಂದರು.
ರಾಜ್ಯದ ಮಹಿಳೆಯರರು, ಯುವಕರಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಎಲ್ಲರಿಗೂ ಧನ್ಯವಾದಗಳು. ಪ್ರಮಾಣವಚನ ಕಾರ್ಯಕ್ರಮಕ್ಕೆ ಅನೇಕ ಜನ ರಾಷ್ಟ್ರ ನಾಯಕರು ಬಂದಿದ್ದಾರೆ. ಬಂದಿರುವಂತಹ ನಾಯಕರಿಗೆ ಧನ್ಯವಾದ. ಹಲವು ಕೆಲಸಗಳು ಇದ್ರೂ ಸಹ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಲು ಬಂದಿದ್ದಾರೆ. ಎಲ್ಲರಿಗೂ ಧನ್ಯವಾದ. ಜನರ ನಿರೀಕ್ಷೆಗೆ ತಕ್ಕಂತೆ ನಾವು ಆಡಳಿತವನ್ನು ಕೊಡುತ್ತೇವೆ.

ಜನರು ಬದಲಾವಣೆಯನ್ನು ಬಯಸಿದ್ದಾರೆ ಜನರಿಗೆ ಕೊಟ್ಟ ಭರವಸೆಗಳು ಗ್ಯಾರಂಟಿ ಭರವಸೆಗಳು ಸಹ ಇವತ್ತೇ ಜಾರಿಗೊಳಿಸುತ್ತೇವೆ. ಐದು ಗ್ಯಾರಂಟಿ ಘೋಷಣೆ ಜಾರಿಗೊಳಿಸುವ ಕೆಲಸ ಮಾಡುತ್ತೇವೆ, ಇದು ಕನ್ನಡ ನಾಡಿನ ಜನರಿಗೆ ಕೊಡುತ್ತಿರುವಂತಹ ಭರವಸೆ. ಈ ಭರವಸೆಯನ್ನು ಈಡೇರಿಸುತ್ತೇವೆ. ಇಂದೇ ಈಡೇರಿಸುತ್ತೇವೆ ಹಾಗೂ ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಿರುವಂತ ಭರವಸೆಗಳನ್ನು ಐದು ವರ್ಷದಲ್ಲಿ ಈಡೇರಿಸುತ್ತೇವೆ. /ನುಡಿದಂತೆ ನಡೆಯುತ್ತೇವೆ, ಮುಂದೆಯೂ ನುಡಿದಂತೆ ನಡೆಯುತ್ತೇವೆ ಎಂದು ಭರವಸೆಯನ್ನ ನೀಡಿದರು.












Click it and Unblock the Notifications