Siddaramaiah: ಸಿದ್ದು ನೇತೃತ್ವದಲ್ಲಿ ಸರ್ಕಾರ ರಚನೆ?: ಮೇ 18 ರಂದು ಪ್ರಮಾಣ ವಚನ? ಎಲ್ಲಿ ಎಂಬ ವಿವರ ಇಲ್ಲಿದೆ ನೋಡಿ!?

ಸಿಎಂ ಸಿದ್ದರಾಮಯ್ಯ: ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆ ಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್​ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. 135 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ನಡುವೆ ಹಗ್ಗಜಗ್ಗಾಟ ಜೋರಾಗಿದೆ.

ಈಗಾಗಲೇ ಹೈಕಮಾಂಡ್‌ ನಾಯಕರ ಭೇಟಿಗೆ ಸಿದ್ದರಾಮಯ್ಯ ತಮ್ಮ ಆಪ್ತ ಶಾಸಕರೊಂದಿಗೆ ದೆಹಲಿ ತಲುಪಿದ್ರೆ, ಇತ್ತ ಡಿ ಕೆ ಶಿವಕುಮಾರ್‌ ಹೈಕಮಾಂಡ್‌ ಮೇಲಿನ ಬೇಸರಿದಿಂದ ಬೆಂಗಳೂರಿನಲ್ಲೇ ಉಳಿದಿದ್ದಾರೆ ಎನ್ನಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಮಾಡಲು ಹೈಕಮಾಂಡ್‌ ನಿರ್ಧಾರಿಸಿದ್ದಾರೆ ಎನ್ನಲಾಗಿದೆ. ಇತ್ತ ಡಿ ಕೆ ಶಿವಕುಮಾರ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.

karnataka assembly elections 2023

ಪ್ರಮಾಣ ವಚನ ಸಮಾರಂಭ ಎಲ್ಲಿ ಮತ್ತು ಯಾವಾಗ?

ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು, ಆ ವೇಳೆ ಅಪಾರ ಜನಸ್ತೋಮ ಮತ್ತು ತಮ್ಮ ಕಟ್ಟಾ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್‌ ನಲ್ಲಿ ಅಪಾರ ಜನ ಬೆಂಬಲ ವ್ಯಕ್ತವಾಗಲಿದ್ದು, ಮೇ 18 ರಂದು ಪ್ರಮಾಣ ವಚನ ಕಾರ್ಯಕ್ರಮವನ್ನ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಬಾರಿ ಪ್ರಮಾಣ ವಚನ ಕಾರ್ಯಕ್ರಮವನ್ನ ರಾಜ್ಯಭವನದಲ್ಲಿ ನಡೆಸಿದರೇ ಹೆಚ್ಚಿನ ಜನರು ಸೇರಲು ಸಾಧ್ಯವಾಗಲ್ಲ, ಹೀಗಾಗಿ ವಿಧಾನಸೌಧ ಬೃಹತ್‌ ಮೆಟ್ಟಿಲ ಮೇಲೆ ಪ್ರಮಾಣ ವಚನ ಕಾರ್ಯಕ್ರಮವನ್ನ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಯಾರಿಗೆ ಯಾವ ಹುದ್ದೆ?

ಮುಖ್ಯಮಂತ್ರಿ: ಸಿದ್ದರಾಮಯ್ಯ

ಉಪ ಮುಖ್ಯಮಂತ್ರಿ: ಡಿ.ಕೆ. ಶಿವಕುಮಾರ್

ಕಾಂಗ್ರೆಸ್‌ ಸಂಪುಟದಲ್ಲಿರುವ ಸಂಭಾವ್ಯ ಸಚಿವರ ಪಟ್ಟಿ?

ಬಿ.ಕೆ. ಹರಿಪ್ರಸಾದ್

ಕೆ.ಎಚ್. ಮುನಿಯಪ್ಪ

ಆರ್.ವಿ. ದೇಶಪಾಂಡೆ

ಯು.ಟಿ. ಖಾದರ್

ಎಂ.ಬಿ.ಪಾಟೀಲ್

ರಾಮಲಿಂಗಾರೆಡ್ಡಿ

ಕೃಷ್ಣ ಬೈರೇಗೌಡ

ಕೆ.ಜೆ. ಜಾರ್ಜ್

karnataka assembly elections 2023

ಎಚ್.ಸಿ. ಮಹದೇವಪ್ಪ

ಲಕ್ಷ್ಮಣ ಸವದಿ

ಶಿವಲಿಂಗೇಗೌಡ

ಚಲುವರಾಯಸ್ವಾಮಿ

ಡಾ. ಜಿ. ಪರಮೇಶ್ವರ್

ಪ್ರಿಯಾಂಕ್ ಖರ್ಗೆ

ಸತೀಶ್ ಜಾರಕಿಹೊಳಿ

ಎಚ್.ಕೆ. ಪಾಟೀಲ್

ಲಕ್ಷ್ಮೀ ಹೆಬ್ಬಾಳ್ಕರ್

ಎಚ್.ವೈ, ಮೇಟಿ

ಅಬ್ಬಯ್ಯ ಪ್ರಸಾದ್

ನಾಗೇಂದ್ರ

ಎಸ್.ಎಸ್. ಮಲ್ಲಿಕಾರ್ಜುನ್

ಕೊತ್ತೂರು ಮಂಜುನಾಥ್

ನರೇಂದ್ರ ಸ್ವಾಮಿ

ಆರ್‌ ವಿ ತಿಮ್ಮಾಪುರ.

ಈಶ್ವರ್‌ ಖಂಡ್ರೆ

ದಿನೇಶ್‌ ಗುಂಡೂರಾವ್‌

ತನ್ವೀರ್‌ ಸೇಠ್‌

ಅಜಯ್‌ ಸಿಂಗ್‌

ಪುಟ್ಟರಂಗ ಶೆಟ್ಟಿ

ಜಮೀರ್‌ ಅಹಮ್ಮದ್‌ ಖಾನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+