Siddaramaiah New Car: ಸಿಎಂ ಪಟ್ಟ ಸಿಕ್ಕ ಬೆನ್ನಲ್ಲೇ ಬರೋಬ್ಬರಿ 1 ಕೋಟಿ ರೂಪಾಯಿ ಕಾರು ಖರೀದಿಸಿದ ಸಿದ್ದರಾಮಯ್ಯ!

ಬೆಂಗಳೂರು, ಮೇ 19: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿದ ಗೆಲುವು ಸಾಧಿಸಿರು ಕಾಂಗ್ರೆಸ್‌ ಶನಿವಾರ ಹೊಸ ಸರ್ಕಾರ ರಚನೆ ಮಾಡಲಿದೆ. ಈಗಾಗಲೇ ಚುನಾವಣ ಫಲಿತಾಂಶ ಪ್ರಕಟಗೊಂಡು ಐದು ದಿನಗಳ ನಂತರ ಕಾಂಗ್ರೆಸ್‌ ಹೈಕಮಾಂಡ್‌ ಅಧಿಕೃತವಾಗಿ ಸಿದ್ದರಾಮಯ್ಯ ಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಎಂದು ಘೋಷಿಸಿದೆ.

ಇನ್ನೂ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇತ್ತ ಮುಖ್ಯಮಂತ್ರಿ ಪಟ್ಟ ಸಿಗುತ್ತಿದ್ದಂತೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಟೋಯೋಟಾ ವೆಲ್‌ಫೈರ್ ಕಾರನ್ನ ಸಿದ್ದರಾಮಯ್ಯ ಖರೀದಿಸಿದ್ದಾರೆ.

Siddaramaiah Purchase Rs 1 Crore Value Toyota Velfire Luxury Car Before Sworn As Karnataka CM

ಟೋಯೋಟಾ ವೆಲ್‌ಫೈರ್ ಕಾರು ಅಂದ್ರೆ ಪ್ರತಿಷ್ಠೆ ಹಾಗೂ ಅತ್ಯಂತ ಜನಪ್ರಿಯ ಕಾರಾಗಿದೆ. ಈಗಾಗಲೇ ಹಲವು ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ಹೆಚ್ಚಾಗಿ ಈ ಕಾರನ್ನು ಖರೀದಿಸಿದ್ದಾರೆ. ಇನ್ನೂ ಈ ಟೋಯೋಟಾ ವೆಲ್‌ಫೈರ್ ನ ಬೆಲೆ ಬರೋಬ್ಬರಿ 96.55 ಲಕ್ಷ ರೂಪಾಯಿ. ವಿಮೆ, ರಿಜಿಸ್ಟ್ರೇಶನ್ ಸೇರಿದಂತೆ ಆನ್ ರೋಡ್ ಬೆಲೆ ಸರಿ ಸುಮಾರು 1.20 ಕೋಟಿ ರೂಪಾಯಿ ಆಗಲಿದೆ.

ಇನ್ನೂ ಈ ನೂತನ ಟೋಯೋಟಾ ವೆಲ್‌ಫೈರ್ ಕಾರು ಸರ್ಕಾರದ ಕಾರಲ್ಲ. ಈ ಕಾರನ್ನು ಸಿದ್ದರಾಮಯ್ಯ ಖರೀದಿಸಿದ್ದಾರೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಸಿದ್ದರಾಮಯ್ಯನವರಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸರ್ಕಾರಿ ಕಾರು ಸಿಗಲಿದೆ. ಆದರೆ, ತಮ್ಮ ದೂರ ಪ್ರಯಾಣದ ಅನುಕೂಲತೆ, ಆರೋಗ್ಯ ದೃಷ್ಟಿಯಿಂದ ಟೋಯೋಟಾ ವೆಲ್‌ಫೈರ್ ಕಾರು ಬಳಸುವ ಈ ಕಾರನ್ನ ಖರೀದಿಸಿದ್ದಾರೆ ಎನ್ನಲಾಗಿದೆ. ಇತ್ತ ಹೊಸ ಕಾರು ಓಕೆ, ಇಷ್ಟೊಂದು ದುಬಾರಿ ಕಾರು ಯಾಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+