"ಖದೀಮರಿಗೂ ಪ್ರೇರಣೆಯಾದ ಸಿದ್ದರಾಮಯ್ಯ, ಖರ್ಗೆ": ಯಾವ ವಿಚಾರಕ್ಕೆ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರು ಇದೀಗ ಕಳ್ಳರಿಗೂ ಪ್ರೇರಣೆಯಾಗುತ್ತಿದ್ದಾರಂತೆ. ಈ ಇಬ್ಬರು ನಾಯಕರ ಮಾದರಿಯಾಗಿರುವುದು ಕಳ್ಳರಿಗೆ ಎಂದು ಬಿಜೆಪಿ - ಜೆಡಿಎಸ್ ಸರಣಿ ಟ್ವೀಟ್ ಮಾಡಿದೆ. ಅಲ್ಲದೇ ಇದಕ್ಕೆ ದೆಹಲಿಯ ಲ್ಲಿ ನಡೆದಿರುವ ಘಟನೆಯೊಂದನ್ನು ಉದಾಹರಣೆಯಾಗಿ ನೀಡಲಾಗಿದೆ.
ರಾಜ್ಯದಲ್ಲಿ ಮುಡಾ ಹಗರಣದ ವಿಷಯ ಭಾರೀ ಸದ್ದು ಮಾಡುತ್ತಲ್ಲೇ ಇದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲಾಗಿದ್ದ. 14 ಸೈಟುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹಿಂದಿರುಗಿಸಿದ್ದಾರೆ. ಆದರೆ, ಸೈಟು ಹಿಂದಿರುಗಿಸಿದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಹಾಗೂ ಜೆಡಿಎಸ್ ಟೀಕೆ ಮಾಡುವುದು ನಿಂತಿಲ್ಲ.

ಸೈಟು ಹಿಂದಿರುಗಿಸಿದ ಮೇಲೂ ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷಗಳು "ಕಳ್ಳಕದ್ದ ಮಾಲು ವಾಪಸ್ ಕೊಟ್ಟರೆ ಕಳ್ಳ ಅಲ್ವಾ" ಎಂದು ಟೀಕೆ ಮಾಡುತ್ತಿವೆ. ಇದೀಗ ದೆಹಲಿಯ ಒಂದು ಘಟನೆಯನ್ನು ಇಟ್ಟುಕೊಂಡು ಸಿದ್ದರಾಮಯ್ಯ ಹಾಗೂ ಖರ್ಗೆ ಕಾಲೆಳೆಯಲಾಗಿದೆ.
ಕದ್ದ ಕಾರು ವಾಪಸ್ ಮಾಡಿದ ಕಳ್ಳ: ದೆಹಲಿಯಲ್ಲಿ ಕಳ್ಳನೊಬ್ಬ ಕದ್ದ ಕಾರನ್ನು ವಾಪಸ್ ಮಾಡಿದ್ದಾನೆ. ಈ ಘಟನೆಯನ್ನೇ ಇಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳೇರಡೂ ಏಕಕಾಲಕ್ಕೆ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿವೆ.

ಬಿಜೆಪಿ ಟ್ವೀಟ್: ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನ ಬಿಜೆಪಿ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. ದೆಹಲಿಯ ಕಳ್ಳರಿಗೂ ಮಾದರಿಯಾಯಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಎಂದು ಬಿಜೆಪಿ ಹೇಳಿದೆ. ಸಿದ್ದರಾಮಯ್ಯ, ಖರ್ಗೆ ಅವರು ಅಕ್ರಮವಾಗಿ ಪಡೆದ ಸೈಟ್ ವಾಪಸ್ ನೀಡಿದ ಮಾದರಿಯಲ್ಲಿಯೇ, ಕಳ್ಳತನದಿಂದ ಕದ್ದ ಕಾರನ್ನು ಅರ್ಧದಲ್ಲೇ ಬಿಟ್ಟು ಕ್ಷಮಾಪಣಾ ಪತ್ರ ಅಂಟಿಸಿದ್ದಾನೆ. ಕಳ್ಳರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದರಿಯನ್ನು ಅನುಸರಿಸಿದ ಅಪರೂಪದ ಘಟನೆ ನಡೆದಿದೆ ಎಂದು ವ್ಯಂಗ್ಯವಾಡಿದೆ.
ಈ ರೀತಿ ಕದ್ದ ಮಾಲನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿ ಕಾಂಗ್ರೆಸ್ ಮಾದರಿಯನ್ನು ಅನುಸರಿಸುವ ಕಳ್ಳರಿಗೆ ಪ್ರಾಮಾಣಿಕ ಕಳ್ಳ ಎಂಬ ರಾಜ್ಯ ಪ್ರಶಸ್ತಿ ಘೋಷಿಸಿದರೂ ಅಚ್ಚರಿಯಿಲ್ಲ ಎಂದೂ ಬಿಜೆಪಿ ಹೇಳಿದೆ.
ಜೆಡಿಎಸ್‌ನಿಂದಲೂ ಟ್ವೀಟ್: ಬಿಜೆಪಿ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಜೆಡಿಎಸ್ ಸಹ ಇದೇ ಮಾದರಿಯ ಟ್ವೀಟ್ ಮಾಡಿದೆ.
ಕದ್ದ ಕಾರು ವಾಪಸ್ ಮಾಡಿದ ಕಳ್ಳ !
— Janata Dal Secular (@JanataDal_S) October 15, 2024
ಖದೀಮರಿಗೂ ಪ್ರೇರಣೆಯಾದ @siddaramaiah ಮತ್ತು @kharge
ಮೊದಲು ಕಳ್ಳತನ ಮಾಡುವುದು, ಸಿಕ್ಕಿಬೀಳುವಾಗ ಕದ್ದ ಮಾಲು ಹಿಂತಿರುಗಿಸುವುದು. ಮುಡಾರಾಮಯ್ಯನ ವಾಪಸ್ ಮಾದರಿ ಈಗ ಡೆಲ್ಲಿಗೂ ತಲುಪಿದೆ. ಕಳ್ಳನೊಬ್ಬ ಕದ್ದ ಕಾರನ್ನು ರಸ್ತೆ ಬದಿ ಬಿಟ್ಟು ಕ್ಷಮಾಪಣೆ ಪತ್ರ ಬರೆದಿಟ್ಟು ಹೋಗಿದ್ದಾನೆ.… pic.twitter.com/t3VkoQjF4L
ಕದ್ದ ಕಾರು ವಾಪಸ್ ಮಾಡಿದ ಕಳ್ಳ ಎನ್ನುವ ಹೆಡ್‌ಲೈನ್‌ನೊಂದಿಗೆ ಟ್ವೀಟ್ ಮಾಡಿರುವ ಜೆಡಿಎಸ್ ಖದೀಮರಿಗೂ ಪ್ರೇರಣೆಯಾದ ಸಿದ್ದರಾಮಯ್ಯ & ಖರ್ಗೆ ಎಂದು ವ್ಯಂಗ್ಯವಾಡಿದೆ.
ಮೊದಲು ಕಳ್ಳತನ ಮಾಡುವುದು, ಸಿಕ್ಕಿಬೀಳುವಾಗ ಕದ್ದ ಮಾಲು ಹಿಂತಿರುಗಿಸುವುದು. ಮುಡಾರಾಮಯ್ಯನ ವಾಪಸ್ ಮಾದರಿ ಈಗ ಡೆಲ್ಲಿಗೂ ತಲುಪಿದೆ. ಕಳ್ಳನೊಬ್ಬ ಕದ್ದ ಕಾರನ್ನು ರಸ್ತೆ ಬದಿ ಬಿಟ್ಟು ಕ್ಷಮಾಪಣೆ ಪತ್ರ ಬರೆದಿಟ್ಟು ಹೋಗಿದ್ದಾನೆ ಎಂದು ತೀಕ್ಷ್ಣವಾಗಿ ಟೀಕೆ ಮಾಡಿದೆ.
ಕದ್ದ ಮಾಲು ಟ್ವೀಟ್ ವಾರ್: ಕರ್ನಾಟಕದಲ್ಲಿ ಕದ್ದ ಮಾಲು ಎನ್ನುವ ವಿಚಾರ ಬಿಜೆಪಿ - ಜೆಡಿಎಸ್ ಹಾಗೂ ಕಾಂಗ್ರೆಸ್‌ನ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕಳ್ಳ ತಾನು ಕದ್ದಿರುವ ಮಾಲ್ ವಾಪಸ್ ಕೊಟ್ಟರೆ ಕಳ್ಳತನ ಆಗುವುದಿಲ್ಲವೇ ಎಂದು ವಿರೋಧ ಪಕ್ಷಗಳು ಪ್ರಶ್ನೆ ಮಾಡುತ್ತಿದ್ದರೆ, ಮೂರ್ಖರು ಯಾರು ಎಂದರೆ, ಈ ಬಿಜೆಪಿಯವರು ಓಡೋಡಿ ಬರ್ತಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.












Click it and Unblock the Notifications