91 ನಿಗಮ, ಮಂಡಳಿಗೆ ಹೊಸ ಅಧ್ಯಕ್ಷರ ಪಟ್ಟಿ ಪ್ರಕಟ
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಗೂ ನಿಗಮ-ಮಂಡಳಿಗೆ ಅಧ್ಯಕ್ಷರ ನೇಮಕಾತಿ ಪೂರ್ಣಗೊಳಿಸಿದೆ. 21 ಶಾಸಕರು ಹಾಗೂ 70 ಕಾರ್ಯಕರ್ತರನ್ನುಳ್ಳ 91 ಮಂದಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಪಟ್ಟಿಯನ್ನು ಬುಧವಾರ ಸಂಜೆ ಪ್ರಕಟಿಸಲಾಗಿದೆ
ಬೆಂಗಳೂರು, ನವೆಂಬರ್ 02: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಗೂ ನಿಗಮ-ಮಂಡಳಿಗೆ ಅಧ್ಯಕ್ಷರ ನೇಮಕಾತಿ ಪೂರ್ಣಗೊಳಿಸಿದೆ. 21 ಶಾಸಕರು ಹಾಗೂ 70 ಕಾರ್ಯಕರ್ತರನ್ನುಳ್ಳ 91 ಮಂದಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಪಟ್ಟಿಯನ್ನು ಬುಧವಾರ ಸಂಜೆ ಪ್ರಕಟಿಸಲಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಿರಿಯ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಕೆ.ವೆಂಕಟೇಶ್, ರಾಜಶೇಖರ್ ಪಾಟೀಲ್, ಎಂ.ಟಿ.ಬಿ.ನಾಗರಾಜ್ ಸೇರಿದಂತೆ 21 ಮಂದಿ ಶಾಸಕರಿಗೆ ಮಾತ್ರ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಕೆಲ ದಿನಗಳ ಹಿಂದೆ ನವದೆಹಲಿಗೆ ತೆರಳಿ ಪಟ್ಟಿಯನ್ನು ಅಂತಿಮಗೊಳಿಸಿದ್ದರು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಮೇರೆಗೆ ನಿಗಮ ಮಂಡಳಿ ಸ್ಥಾನಕ್ಕೆ ಶಾಸಕರನ್ನು ಆಯ್ಕೆ ಮಾಡಲಾಗಿದೆ.
* ಮಾಲೀಕಯ್ಯ ಗುತ್ತೇದಾರ್- ಕರ್ನಾಟಕ ಗೃಹ ಮಂಡಳಿ
* ಆರ್.ವಿ.ದೇವರಾಜ್- ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
* ಕೆ.ವೆಂಕಟೇಶ್- ಬಿಡಿಎ
* ರಾಜಶೇಖರ್ ಬಿ.ಪಾಟೀಲ್- ಕರ್ನಾಟಕ ಭೂ ಸೇನಾ ನಿಗಮ
* ಎನ್.ನಾಗರಾಜ್ (ಎಂಟಿಬಿ)- ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
* ಫಿರೋಜ್ ಸೇಠ್- ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

* ಕೆ.ಗೋಪಾಲ್ ಪೂಜಾರಿ- ಅರಣ್ಯಾಭಿವೃದ್ಧಿ ನಿಗಮ
* ಪುಟ್ಟರಂಗಶೆಟ್ಟಿ- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
* ರಹೀಂ ಖಾನ್- ರಾಜ್ಯ ಉಗ್ರಾಣ ನಿಗಮ
* ಕೆ.ವಸಂತ ಬಂಗೇರ- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ
* ಬಿ.ಆರ್.ಯಾವಗಲ್- ಹಟ್ಟಿ ಚಿನ್ನದ ಗಣಿ
* ಎಂ.ಕೆ.ಸೋಮಶೇಖರ್- ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮ
* ಜಿ.ಎಸ್.ಪಾಟೀಲ- ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
* ಶಿವಾನಂದ ಎಸ್.ಪಾಟೀಲ್- ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ


* ಎಚ್.ಆರ್.ಹಲಗೂರ್- ಸಾಬೂನು ಮತ್ತು ಮಾರ್ಜಕ ನಿಗಮ
* ಡಿ.ಸುಧಾಕರ್- ಕಿಯೋನಿಕ್ಸ್

* ಬಾಬುರಾವ್ ಚಿಂಚನಸೂರ್- ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
* ಶಾರದಾ ಮೋಹನಶೆಟ್ಟಿ- ಕರಾವಳಿ ಅಭಿವೃದ್ಧಿ ಪ್ರಾಧಿಕಾರ
* ಎನ್.ವೈ.ಗೋಪಾಲಕೃಷ್ಣ- ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ
* ಹಂಪ ನಾಯಕ್- ಕಾಡಾ ಅಧ್ಯಕ್ಷರು, ತುಂಗಭದ್ರ ಯೋಜನೆ
(ಒನ್ಇಂಡಿಯಾ ಸುದ್ದಿ)












Click it and Unblock the Notifications