ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್: ರಾಹುಲ್ ಜೊತೆ ಚರ್ಚೆ

ಬೆಂಗಳೂರು, ಫೆಬ್ರವರಿ 08: ಬಿಜೆಪಿಯ ಕಡು ವಿರೋಧದ ನಡುವೆಯೂ ಕರ್ನಾಟಕ ಬಜೆಟ್ ಮಂಡನೆ ಆಗಿದೆ. ಆದರೆ ಇತ್ತ ಕಾಂಗ್ರೆಸ್‌ಗೆ ಅತೃಪ್ತ ಶಾಸಕರ ಆತಂಕ ಕಡಿಮೆ ಆಗಿಲ್ಲ. ಈ ನಡುವೆ ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಅವರನ್ನು ಹೈಕಮಾಂಡ್‌ ದೆಹಲಿಗೆ ಬುಲಾವ್ ನೀಡಿದೆ.

ನಾಳೆ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದು, ಬೆಳಿಗ್ಗೆ 10:30 ಕ್ಕೆ ನಡೆಯುವ ಶಾಸಕಾಂಗ ಪಕ್ಷದ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ಸಭೆಯ ಬಳಿಕ ರಾಹುಲ್ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಚರ್ಚೆ ನಡೆಸಲಿದ್ದು, ರಾಜ್ಯ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ, ಕಾಂಗ್ರೆಸ್ ಅತೃಪ್ತ ಶಾಸಕರನ್ನು ಕೆಪಿಸಿಸಿ ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಮಾತನಾಡಲಿದ್ದಾರೆ.

Siddaramaiah going to Delhi tomorrow to meet Rahul Gandhi

ಇದರ ಜೊತೆಗೆ ಲೋಕಸಭೆ ಚುನಾವಣೆ ತಯಾರಿ ಬಗ್ಗೆಯೂ ಸಹ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಹಲವು ಸಲಹೆಗಳನ್ನು ನೀಡಲಿದ್ದಾರೆ.

ರಾಜ್ಯ ಕಾಂಗ್ರೆಸ್‌ಗೆ ಪ್ರಸ್ತುತ ಅತೃಪ್ತ ಶಾಸಕರ ಕಾಟ ಕಾಡುತ್ತಿದೆ. ನಾಲ್ಕು ಜನ ಅತೃಪ್ತ ಶಾಸಕರ ಸದಸ್ಯತ್ವವನ್ನು ರದ್ದು ಮಾಡುವ ಸಾಧ್ಯತೆ ಇದೆ. ಹಾಗೊಂದು ವೇಳೆ ರದ್ದು ಮಾಡಿದರೆ ಮೈತ್ರಿ ಸರ್ಕಾರದ ಬೇರು ಅಲ್ಲಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+