ಭರ್ತಿಯಾದ ಆಲಮಟ್ಟಿಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯ

Subscribe to Oneindia Kannada

ವಿಜಯಪುರ, ಆಗಸ್ಟ್ 18: ಭರ್ತಿಯಾದ ದಕ್ಷಿಣ ಭಾರತದ ಏಕೈಕ ಜಲಾಶಯ ಆಲಮಟ್ಟಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದರು. ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ನಂತರ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಜತೆ ಬಾಗಿನ ಅರ್ಪಿಸಿದರು.

ಆಗಸ್ಟ್ 15ರಂದೇ 1704.81 ಅಡಿ ಎತ್ತರದ ಆಲಮಟ್ಟಿ ಅಣೆಕಟ್ಟು ಭರ್ತಿಯಾಗಿತ್ತು. ಬರದ ನಡುವೆಯೂ ಆಲಮಟ್ಟಿ ಭರ್ತಿಯಾದ ಹಿನ್ನಲೆಯಲ್ಲಿ ಬಾಗಿನ ಅರ್ಪಿಸಲಾಯಿತು.

Siddaramaiah dedicates Bagina to filled up Alamatti reservoir

ನಂತರ ಬರಮುಕ್ತ ಭಾರತಕ್ಕಾಗಿ ವಿಜಯಪುರದಲ್ಲಿ ಆಯೋಜಿಸಿದ್ದ 'ರಾಷ್ಟ್ರೀಯ ಜಲ ಸಮ್ಮೇಳನ'ದ ಸಮಾರೋಪ ಸಮಾರಂಭ ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದರು.

Siddaramaiah dedicates Bagina to filled up Alamatti reservoir

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲತಜ್ಞ ಡಾ. ರಾಜೇಂದ್ರಸಿಂಗ್ ಅವರೊಂದಿಗೆ ಮಾತುಕತೆಯನ್ನೂ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Today, Chief Minister Siddaramaiah dedicates the Bagina to Alamatti reservoir. Alamatti is the one and only filled up reservoir of the South India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ