• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುದ್ದಿಗೋಷ್ಠಿಯಲ್ಲಿ ಮೌನ: ಮೋದಿಯನ್ನು ಅಣಕಿಸಿದ ಕಾಂಗ್ರೆಸ್

|
   ಮೋದಿಯವನ್ನು ನೋಡಿ ನಕ್ಕ ಸಿದ್ದರಾಮಯ್ಯ | ONEINDIA KANNADA

   ಬೆಂಗಳೂರು, ಮೇ 18: ಕೇಂದ್ರದಲ್ಲಿ ಸರ್ಕಾರ ರಚಿಸಿದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೋಗದೆ ಎಲ್ಲವನ್ನೂ ಅಮಿತ್ ಶಾ ಅವರಿಗೆ ಬಿಟ್ಟುಕೊಟ್ಟು ಮೌನ ವಹಿಸಿದ್ದು, ಅವರ ವಿರೋಧಿಗಳ ಬಾಯಿಗೆ ಆಹಾರವಾಗಿದೆ.

   ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುದ್ದಿಗೋಷ್ಠಿಯಲ್ಲಿ ಮಾತನಾಡದ ಮೋದಿ ಅವರ ಕಾಲೆಳೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಮಾತ್ರ ಮಾತನಾಡಬೇಕು ಎಂದು ಮೋದಿ ಭಾವಿಸಿದ್ದಂತಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಮನೆಯಲ್ಲಿ ಕುಳಿತಾಗ ಅದರ ಬಗ್ಗೆ ಆಲೋಚನೆ ಮಾಡಲು ಸಾಕಷ್ಟು ಸಮಯ ಸಿಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

   ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ. ಮುಂದಿನ ಬಾರಿ ಒಂದೆರಡು ಪ್ರಶ್ನೆಗಳಿಗೆ ಉತ್ತರ ನೀಡಲು ಅಮಿತ್ ಶಾ ನಿಮಗೆ ಅವಕಾಶ ಕೊಟ್ಟರೂ ಕೊಡಬಹುದು ಎಂದು ರಾಹುಲ್ ಹೇಳಿದ್ದಾರೆ.

   ಪ್ರಧಾನಿಯಾದ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೂ ಭಾಷಣವೇ ಮಾಡಿದ ಮೋದಿ!

   ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮೊದಲ ಬಾರಿಗೆ ಜಂಟಿಯಾಗಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದರು. ತಮ್ಮ ಸರ್ಕಾರದ ಬಗ್ಗೆ ಸ್ವಲ್ಪ ಹೊತ್ತು ಮೋದಿ ಮಾತನಾಡಿದ್ದರು. ಆದರೆ, ಬಳಿಕ ಪತ್ರಕರ್ತರು ಕೇಳಿದ ಯಾವ ಪ್ರಶ್ನೆಗೂ ಅವರು ಉತ್ತರ ನೀಡಿರಲಿಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಮಿತ್ ಶಾ ಅವರಿಗೇ ಬಿಟ್ಟಿದ್ದರು.

   ಮೇ 23ರ ಬಳಿಕ ತಿಳಿಯಬಹುದು

   ಮನಮೋಹನ್ ಸಿಂಗ್ ಅವರಿಗೆ ಏನು ಮಾತನಾಡಬೇಕು ಮತ್ತು ಏನು ಮಾತನಾಡಬಾರದು ಎನ್ನುವುದು ತಿಳಿದಿತ್ತು. ಆದರೆ, ನಮ್ಮ 56 ಇಂಚಿನ ನರೇಂದ್ರ ಮೋದಿ ಅವರು ಏನನ್ನು ಮಾತನಾಡಬಾರದು ಎಂಬುದನ್ನಷ್ಟೇ ತಿಳಿದಿದ್ದಾರೆ.

   ಸುದ್ದಿಗೋಷ್ಠಿಯ ಕುರಿತು ಮೋದಿ ಗೊಂದಲಕ್ಕೀಡಾಗಿದ್ದರು. ಅಲ್ಲಿ ಪತ್ರಕರ್ತರು ಮಾತ್ರ ಮಾತನಾಡಬೇಕು ಎಂದು ಅವರು ಭಾವಿಸಿದ್ದರು. ಪರವಾಗಿಲ್ಲ. ಮೇ 23ರ ಬಳಿಕ ಮನೆಯಲ್ಲಿ ಕುಳಿತು ತಿಳಿದುಕೊಳ್ಳಲು ಅವರಿಗೆ ತುಂಬಾ ಸಮಯ ಸಿಗುತ್ತದೆ ಎಂದು ಸಿದ್ದರಾಮಯ್ಯ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ.

   ಫಲಿತಾಂಶದ ದಿನ ಇತಿಹಾಸ ನಿರ್ಮಾಣವಾಗಲಿದೆ: ಮೋದಿ

   ಮುಂದೆ ಅವಕಾಶ ಕೊಡಬಹುದು

   ಶುಭಾಶಯಗಳು ಮೋದಿಜಿ. ಅದ್ಭುತವಾದ ಸುದ್ದಿಗೋಷ್ಠಿ! ಭರ್ಜರಿಯಾದ ಆರಂಭ ಪಡೆದುಕೊಂಡಿದ್ದೀರಿ. ಮುಂದಿನ ಸಂದರ್ಭದಲ್ಲಿ ಮಿ. ಶಾ ಅವರು ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ ಅವಕಾಶ ನೀಡಬಹುದು. ಚೆನ್ನಾಗಿ ನಿರ್ವಹಿಸಿದ್ದೀರಿ! ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

   ಬಾಪುಗೆ ಅವಮಾನ ಮಾಡಿದ ಪ್ರಗ್ಯಾಳನ್ನು ಕ್ಷಮಿಸಲಾರೆ: ಮೋದಿ

   ಅಮಿತ್ ಶಾ ಮರೆಯುವುದಿಲ್ಲ

   ಪತ್ರಕರ್ತರ ಸೋಗಿನಲ್ಲಿ ಇರುವ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಅಮಿತ್ ಶಾ ಮರೆಯುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.

   ಉತ್ತರ ಪತ್ರಿಕೆ ಬದಲಾಗಿದೆ

   ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ್ದ ಪ್ರಶ್ನೆ/ಉತ್ತರ ಪತ್ರಿಕೆಯನ್ನು ಯಾರೋ ಬದಲಿಸಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿರಲಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ದೇಶ್ ಭಕ್ತ್ ಎಂಬ ಟ್ವಿಟ್ಟರ್ ಖಾತೆ ವ್ಯಂಗ್ಯಮಾಡಿದೆ.

   ಟ್ಯೂಷನ್ ಕೊಡಬೇಕು

   ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷದಲ್ಲಿ ಮೊದಲ ಸುದ್ದಿಗೋಷ್ಠಿಯ ಪ್ರಶ್ನೋತ್ತರ ಅವಧಿಯಲ್ಲಿ ಸಮಯ ಕಳೆಯುವ ವಿಡಿಯೋ ನೋಡಿ. ಅವರು 17 ನಿಮಿಷ ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡದೆ ಕುಳಿತಿದ್ದರು. ಬರೆದು ಅಭ್ಯಾಸ ಮಾಡಿಸದೆ ಇದ್ದರೆ ಅವರು ನಿಜಕ್ಕೂ ಉತ್ತರ ನೀಡಲಾರರು! ಎಂದು ಗೌರವ್ ಪಂಧಿ ಟ್ವೀಟ್ ಮಾಡಿದ್ದಾರೆ.

   English summary
   Congress leader Siddaramaiah pulled legs of Prime Minister Narendra Modi over his silence in Friday's Press Conference.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X