• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಟೈಂ ಬಾಂಬ್ ಎಕ್ಸ್‌ಪರ್ಟ್' ಜಗದೀಶ್ ಶೆಟ್ಟರ್ ಬಗ್ಗೆ ಸಿದ್ದರಾಮಯ್ಯ ಅನುಕಂಪ!

|
   ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ರನ್ನ ಲೇವಡಿ ಮಾಡಿದ ಸಿದ್ದರಾಮಯ್ಯ | Oneindia Kannada

   ಬೆಂಗಳೂರು, ಮೇ 15: ಸಮ್ಮಿಶ್ರ ಸರ್ಕಾರದ ಪತನಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಟೈಂ ಬಾಂಬ್ ಇಟ್ಟಿದ್ದಾರೆ. ಈ ಬಾಂಬ್ ಮೇ 23ರ ಬಳಿಕ ಸ್ಫೋಟಗೊಳ್ಳಲಿದೆ ಎಂಬ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

   ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

   ಜಗದೀಶ್ ಶೆಟ್ಟರ್ ಒಬ್ಬ ಟೈಂ ಬಾಂಬ್ ಎಕ್ಸ್‌ಪರ್ಟ್ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಆದರೆ, ಅವರು ಪಕ್ಷದ ಒಳಗೆ ಇಡುತ್ತಿರು ಟೈಂ ಬಾಂಬ್‌ಗಳೆಲ್ಲವೂ ಠುಸ್ ಆಗುತ್ತಿವೆ. ಹೀಗಾಗಿ ಅವರು ಹತಾಶರಾಗಿದ್ದಾರೆ ಎಂದು ಅಣಕಿಸಿದ್ದಾರೆ.

   ಅಲ್ಲದೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಶೆಟ್ಟರ್ ಅವರನ್ನು ಒಂದು ವರ್ಷವೂ ಸಿಎಂ ಆಗಿರಲು ಸರಿಯಾಗಿ ಬಿಟ್ಟಿರಲಿಲ್ಲ. ಅವರೀಗ ಮೂಲೆ ಗುಂಪಾಗಿದ್ದಾರೆ. ಹಾಗಾಗಿ ಪಕ್ಷದಲ್ಲಿ ತಾವು ಇರುವುದನ್ನು ತೋರಿಸಿಕೊಳ್ಳಲು ಈ ರೀತಿ ಜೋಕುಗಳನ್ನು ಮಾಡುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

   ಸಿಎಂ ಕುರ್ಚಿ ಚರ್ಚೆ: ಟ್ವಿಟ್ಟರ್‌ನಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ

   ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಹೇಗಾದರೂ ಇಳಿಸಿ ತಾವು ಅಧಿಕಾರಕ್ಕೆ ಏರಬೇಕೆಂದು ಸಿದ್ದರಾಮಯ್ಯ ಹವಣಿಸುತ್ತಿದ್ದಾರೆ. ಅದಕ್ಕಾಗಿ ರಹಸ್ಯವಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಸುಮಲತಾ ಅವರ ಪರ ಕೆಲಸ ಮಾಡುವಂತೆಯೂ ಚಲುವರಾಯಸ್ವಾಮಿ ಅವರನ್ನು ಸ್ವತಃ ಸಿದ್ದರಾಮಯ್ಯ ಅವರೇ ಮುಂದೆ ಬಿಟ್ಟಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದರು.

   ಶೆಟ್ಟರ್ ಅವರ ಹೇಳಿಕೆಗೆ ಟ್ವಿಟ್ಟರ್‌ನಲ್ಲಿ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.

   ಟೈಂ ಬಾಂಬ್ ಎಕ್ಸ್‌ಪರ್ಟ್

   ಜಗದೀಶ್ ಶೆಟ್ಟರ್ ಒಬ್ಬ ಟೈಬಾಂಬ್ Expert. ಪಕ್ಷದೊಳಗಿನ ತನ್ನ ರಾಜಕೀಯ ವಿರೋಧಿ ಬಿ.ಎಸ್.ಯಡಿಯೂರಪ್ಪನವರಿಗೆ ಅವರು ಇಡ್ತಾ ಇರುವ ಟೈಬಾಂಬ್‌ಗಳೆಲ್ಲ ಠುಸ್ ಆಗ್ತಾ ಇರೋದಕ್ಕೆ ಅವರು ಹತಾಶರಾಗಿದ್ದಾರೆ. ಅವರಿಗೆ ಸರಿಯಾಗಿ ಒಂದು ವರ್ಷ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಬಿಟ್ಟಿಲ್ಲ. ಪಾಪ ಅವರ ಬಗ್ಗೆ ನನಗೆ ಅನುಕಂಪ ಇದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

   ಕನಕಪುರದ ಆಟ ಇಲ್ಲಿ ನಡೆಯೊಲ್ಲ: ಡಿಕೆಶಿಗೆ ಶೆಟ್ಟರ್ ವಾರ್ನಿಂಗ್

   ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ

   ಮಾಜಿ ಸಿಎಂ ಯಡಿಯೂರಪ್ಪ ಅವರಿಂದಾಗಿ ಪಕ್ಷದೊಳಗೆ ಮೂಲೆಗುಂಪಾಗಿರುವ Timebomb Expert ಜಗದೀಶ ಶೆಟ್ಟರ್ ಅವರು ತನ್ನ ರಾಜಕೀಯ ಅಸ್ತಿತ್ವ ತೋರಿಸಿಕೊಳ್ಳಲು ಆಗಾಗ‌ ಇಂತಹ ಜೋಕುಗಳನ್ನು ಮಾಡ್ತಾ ಇರ್ತಾರೆ. ಅವರನ್ನು ಪಕ್ಷದ ಒಳಗೆ-ಹೊರಗೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದೇ ಅವರ ಕೊರಗು ಎಂದು ಲೇವಡಿ ಮಾಡಿದ್ದಾರೆ.

   ಜಿ,ಟಿ. ದೇವೇಗೌಡರು ಆ 'ಸತ್ಯ' ಹೇಳಬಾರದಿತ್ತು ಎಂದ ಸಿದ್ದರಾಮಯ್ಯ

   ಸರ್ಕಾರದ ಪತನಕ್ಕೆ ಮುಹೂರ್ತ ಫಿಕ್ಸ್

   ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯನವರೇ ಕಂಟಕವಾಗಿದ್ದಾರೆ. ಈಗಾಗಲೇ ಮೈತ್ರಿ ಸರ್ಕಾರದ ಪತನಕ್ಕೆ ಸಮಯ ಫಿಕ್ಸ್ ಆಗಿದೆ. ನೇರವಾಗಿ ಹೇಳದೇ ತಮ್ಮ ಶಾಸಕರ ಬಾಯಿಯಿಂದ ಮುನ್ಸೂಚನೆ ನೀಡುತ್ತಿದ್ದಾರೆ. ಮೇ 23ರ ನಂತರ ಮೈತ್ರಿ ಸರ್ಕಾರದಲ್ಲಾಗುವ ಬದಲಾವಣೆಗಳಿಂದ ಯಾರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಶೆಟ್ಟರ್ ಹೇಳಿದ್ದರು.

   ಸೀಟಿನ ಮೇಲೆ ಸಿದ್ದರಾಮಯ್ಯ ಕಣ್ಣು

   ಸೀಟಿನ ಮೇಲೆ ಸಿದ್ದರಾಮಯ್ಯ ಕಣ್ಣು

   ಮುಖ್ಯಮಂತ್ರಿ ಬಲಾಗಬೇಕು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳ ಹಿಂದೆ ಇರುವುದು ಸಿದ್ದರಾಮಯ್ಯ. ಎಚ್ ಡಿ ಕುಮಾರಸ್ವಾಮಿ ಅವರನ್ನು ಹೇಗಾದರೂ ಕುರ್ಚಿಯಿಂದ ಕೆಳಕ್ಕಿಳಿಸಿ ತಾವು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಅಗಬೇಕೆಂದು ಅವರು ಬಯಸುತ್ತಿದ್ದಾರೆ. ಅದಕ್ಕಾಗಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸುಮಲತಾ ಅವರಿಗೆ ಸಲಹೆ ನೀಡಿದ್ದು ಸಿದ್ದರಾಮಯ್ಯ ಎಂದು ಶೆಟ್ಟರ್ ಆರೋಪಿಸಿದ್ದರು.

   English summary
   Congress leader in Twitter criticised BJP leader Jagadish Shettar as a time bomb expert. No one taking him seriously in his party. Thats how he is making these kind of jokes, Siddaramaiah said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X