ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಭೂಪಟಕ್ಕೆ 43 ಹೊಸ ತಾಲೂಕುಗಳ ಸೇರ್ಪಡೆ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 9 :ಹೊಸದಾಗಿ 43 ತಾಲೂಕುಗಳು ರಾಜ್ಯದ ನಕ್ಷೆಗೆ ಸೇರ್ಪಡೆಯಾಗುತ್ತಿದೆ. 2013-14 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ 43 ಹೊಸ ತಾಲೂಕುಗಳನ್ನು ರಚಿಸುವುದಾಗಿ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.

ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜರಾಯರೆಡ್ಡಿ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರು ಹೊಸ ತಾಲೂಕುಗಳ ವಿವರ ನೀಡಿದರು.

'ತಾಲೂಕುಗಳನ್ನು ಘೋಷಣೆ ಮಾಡುವುದು ದೊಡ್ಡದಲ್ಲ. ಈ ತಾಲೂಕುಗಳಿಗೆ ಆರ್ಥಿಕ ನೆರವು, ವಿವಿಧ ಸೌಲಭ್ಯ ಒದಗಿಸಬೇಕಾಗುತ್ತದೆ. ಇದ್ಯಾವುದನ್ನೂ ನೋಡದೆಯೇ ಹಿಂದಿನ ಸರ್ಕಾರ 34 ತಾಲೂಕುಗಳನ್ನು ಘೋಷಿಸಿದೆ. ತಾಲೂಕುಗಳ ರಚನೆಗೂ ಕೋಟಿಗಟ್ಟಲೆ ಹಣ ರಾಜ್ಯ ಬೊಕ್ಕಸದಿಂದ ವ್ಯಯ ಮಾಡಬೇಕಾಗುತ್ತದೆ ಎಂದು ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Siddaramaiah cabinet okays 43 new taluks

ಘೋಷಿತ ಹೊಸ ತಾಲ್ಲೂಕುಗಳೆಂದರೆ
* ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ರಬಕವಿ-ಬನಹಟ್ಟಿ ಮತ್ತು ಇಳಕಲ್,
* ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಮೂಡಲಗಿ ಮತ್ತು ಕಾಗವಾಡ,
* ಚಾಮರಾಜನಗರ ಜಿಲ್ಲೆಯ ಹನೂರು,
* ದಾವಣಗೆರೆ ಜಿಲ್ಲೆಯ ನ್ಯಾಮತಿ,
* ಬೀದರ್ ಜಿಲ್ಲೆ ಚಿಟ್ಟಗುಪ್ಪ, ಹುಲಸೂರು ಮತ್ತು ಕಮಲನಗರ,
* ಬಳ್ಳಾರಿ ಜಿಲ್ಲೆ ಕುರುಗೋಡು, ಕೊಟ್ಟೂರು ಮತ್ತು ಕಂಪ್ಲಿ,
* ಧಾರವಾಡ ಜಿಲೆಯ ಅಣ್ಣಿಗೇರಿ, ಆಳ್ನಾವರ ಮತ್ತು ಹುಬ್ಬಳ್ಳಿ ನಗರ,
* ಗದಗ ಜಿಲ್ಲೆಯ ಗಜೇಂದ್ರ ಗಢ ಮತ್ತು ಲಕ್ಷ್ಮೇಶ್ವರ,
* ಕಲಬುರಗಿ ಜಿಲ್ಲೆಯ ಕಾಳಗಿ, ಕಮಲಾಪುರ ಮತ್ತು ಶಹಾಬಾದ್,
* ಯಾದಗಿರ್ ಜಿಲ್ಲೆಯ ಹುಣಸಗಿ, ಯಡ್ರಾವಿ, ವಡಗೆರ ಮತ್ತು ಗುರುಮಿಟ್ಕಲ್,
* ಕೊಪ್ಪಳ ಜಿಲ್ಲೆಯ ಕೂಕನೂರು, ಕನಕಗಿರಿ ಮತ್ತು ಕಾರಟಗಿ,
* ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಸಿರವಾರ,
* ಉಡುಪಿ ಜಿಲ್ಲೆಯ ಬ್ರಹ್ಮಾವರ ಮತ್ತು ಬೈಂದೂರು,
* ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಮತ್ತು ಕಡಬ,
* ಬೆಂಗಳೂರು ನಗರ ಜಿಲ್ಲೆಯ ಯಲಹಂಕ
* ವಿಜಯಪುರ ಜಿಲ್ಲೆಯ ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ ಮತ್ತು ಕೋಲ್ಹಾರ ಎಂದು ಸಚಿವರು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಒಂದು ಜಿಲ್ಲೆ ರಚನೆಗೆ ಸುಮಾರು 15 ರಿಂದ 20 ಕೋಟಿ ಖರ್ಚಾಗುತ್ತದೆ. ಜಗದೀಶ್ ಶೆಟ್ಟರ್ ಅವರ ಸರ್ಕಾರ ಬಜೆಟ್ ನಲ್ಲಿ ಸುಮಾರು 43 ಹೊಸ ತಾಲೂಕುಗಳನ್ನು ರಚನೆ ಮಾಡಲು 86 ಕೋಟಿ ರು ಘೋಷಿಸಿತ್ತು. ಈಗ ಇದೇ ತಂತ್ರ ಮುಂದುವರೆಸಿರುವ ಸಿದ್ದರಾಮಯ್ಯ ಸರ್ಕಾರ ಅಷ್ಟೇ ಸಂಖ್ಯೆಯ ತಾಲೂಕುಗಳ ಉದಯಕ್ಕೆ ನಾಂದಿ ಹಾಡಿದೆ. ಬಜೆಟ್ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ.

English summary
Siddaramiah led Congress government likely to pass the bill to form 43 new taluks in the state. Yelahanka in Bengaluru will be among the 43 new taluks proposed and total number of taluks will be more than 220.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X