ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು: ಇಂದು ಸಿದ್ದು, ಡಿಕೆಶಿ ದಿಲ್ಲಿಗೆ: ಸಿದ್ದರಾಮಯ್ಯ ಕೈಯಲ್ಲಿದೆ 20 ಜನರ ಸಂಭಾವ್ಯ ಪಟ್ಟಿ!?
ಬೆಂಗಳೂರು, ಮೇ 24: ಸಿದ್ದರಾಮಯ್ಯ ಸರ್ಕಾರಲ್ಲಿ ಸಚಿವ ಸ್ಥಾನಕ್ಕಾಗಿ ಹಲವು ಸಚಿವಾಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗಿದ್ದು, ಇಂದು(ಬುಧವಾರ) ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ನೊಂದಿಗೆ ಚರ್ಚಿಸಲು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಈಗಾಗಲೇ ಸಿಎಂ ಹಾಗೂ ಡಿಸಿಎಂ ಪ್ರಮಾಣ ವಚನದ ಸಂದರ್ಭದಲ್ಲೇ 8 ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಉಳಿದ ಸಚಿವ ಸ್ಥಾನಕ್ಕಾಗಿ ಯಾರನ್ನ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವ ಸಂಕಷ್ಟದಲ್ಲಿ ಸಿಎಂ ಸಿದ್ದರಾಮಯ್ಯ ಅವರಿದ್ದು, ಈ ಬಾರಿ ಕನಿಷ್ಠ 20 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಚರ್ಚಿಸಲು ಉಭಯ ನಾಯಕರು ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಇನ್ನೂ ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದ ಮೇಲೆ ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರವೂ ಚರ್ಚೆ ನಡೆಯಲಿದ್ದು, ಕಳೆದ ಬಾರೀ ತಮ್ಮ ತಮ್ಮ ಬಣದವರಿಗೆ ಸಚಿವ ಸ್ಥಾನ ನೀಡು ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಪಟ್ಟು ಹಿಡಿದಿದ್ದರಿಂದ 28 ಜನರ ಬದಲಾಗಿ 8 ಜನರನ್ನ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ತಿರ್ಮಾನಕ್ಕೆ ಹೈಕಮಾಂಡ್ ಬಂದಿತ್ತು.
ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಉಭಯ ನಾಯಕರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದು, ಕೊನೆಯವಾಗಿ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿ, ಬಾಕಿ ಉಳಿದಿರುವ 20 ಜನರ ಆಯ್ಕೆ ಹೈಕಮಾಂಡ್ ನಾಯಕರ ಮಟ್ಟದಲ್ಲಿ ಅಂತಿಮಗೊಳ್ಳಲಿದೆ.

ಸಂಭವನೀಯ ಸಚಿವರ ಪಟ್ಟಿ ಇಲ್ಲಿದೆ?
ಬಿ.ಕೆ.ಹರಿಪ್ರಸಾದ್
ಆರ್.ವಿ.ದೇಶಪಾಂಡೆ
ಎಂ.ಕೃಷ್ಣಪ್ಪ
ಕೃಷ್ಣ ಬೈರೇಗೌಡ
ಬೈರತಿ ಸುರೇಶ್
ದಿನೇಶ್ ಗುಂಡೂರಾವ್
ಮಧು ಬಂಗಾರಪ್ಪ
ಶಿವಾನಂದ ಪಾಟೀಲ್
ಶಿವರಾಜ ತಂಗಡಗಿ
ಕೆ.ಎನ್.ರಾಜಣ್ಣ
ಬಸವರಾಜ ರಾಯರೆಡ್ಡಿ
ಲಕ್ಷ್ಮೀ ಹೆಬ್ಬಾಳಕರ್
ಲಕ್ಷ್ಮಣ ಸವದಿ
ರಾಘವೇಂದ್ರ ಹಿಟ್ನಾಳ್
ಎಚ್.ಕೆ.ಪಾಟೀಲ್
ರಹೀಂ ಖಾನ್
ಎಚ್.ಸಿ.ಮಹದೇವಪ್ಪ
ಈಶ್ವರ್ ಖಂಡ್ರೆ
ಚೆಲುವರಾಯಸ್ವಾಮಿ
ಎಸ್.ಎಸ್.ಮಲ್ಲಿಕಾರ್ಜುನ್
ವಿನಯ್ ಕುಲಕರ್ಣಿ
ಸಂತೋಷ್ ಲಾಡ್
ಸಲೀಂ ಅಹಮದ್












Click it and Unblock the Notifications