ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ದಿನಪತ್ರಿಕೆಗಳು ಕಂಡಂತೆ 'ನಡೆದಾಡುವ ದೇವರ ನಿರ್ಗಮನ'

|
Google Oneindia Kannada News

ಬೆಂಗಳೂರು, ಜನವರಿ 22: ಕನ್ನಡ ದಿನಪತ್ರಿಕೆಗಳು ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರಿಗೆ ಅಕ್ಷರ ನಮನ ಸಲ್ಲಿಸಿವೆ.

ಕನ್ನಡ ಎಲ್ಲ ಮುಖ್ಯ ದಿನಪತ್ರಿಕೆಗಳು ಶಿವಕುಮಾರ ಸ್ವಾಮೀಜಿ ಅವರಿಗೆಂದು ವಿಶೇಷ ಪುಟಗಳನ್ನು ವಿನ್ಯಾಸಗೊಳಿಸಿ, ಭರಪೂರ ಮಾಹಿತಿ, ವಿಶೇಷ ಲೇಖನಗಳು, ಶ್ರೀಗಳ ಜೀವನದ ಹಿನ್ನೋಟ, ಸಾಧನೆಗಳು, ಸೇವೆಗಳ ಬಗ್ಗೆ ಇಂಚಿಂಚು ಮಾಹಿತಿ ನೀಡಿವೆ.

ದಿನಪತ್ರಿಕೆಗಳು ಕ್ರೀಯಾಶೀಲವಾಗಿ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿವೆ. ವಿವಿಧ ರೀತಿಯ ಪುಟ ವಿನ್ಯಾಸವನ್ನು, ಶ್ರೀಗಳ ಚಿತ್ರಪಟವನ್ನು ಓದುಗರಿಗೆ ನೀಡಿವೆ. ತಲೆ ಬರಹಗಳಲ್ಲೂ ಕ್ರಿಯಾಶೀಲತೆ ಮೆರೆದಿವೆ. ಒಂದಕ್ಕಿಂತ-ಒಂದು ಭಿನ್ನವಾದ, ಸೆಳೆಯುವ ತಲೆಬರಹಗಳನ್ನು ಪ್ರಕಟಿಸಲಾಗಿದೆ.

ತಮ್ಮ ಸಮಾಧಿಯ ನಿರ್ಮಾಣಕ್ಕೆ ತಾವೇ ಅಡಿಗಲ್ಲು ಹಾಕಿದ್ದ ಸಿದ್ದಗಂಗಾಶ್ರೀಗಳು! ತಮ್ಮ ಸಮಾಧಿಯ ನಿರ್ಮಾಣಕ್ಕೆ ತಾವೇ ಅಡಿಗಲ್ಲು ಹಾಕಿದ್ದ ಸಿದ್ದಗಂಗಾಶ್ರೀಗಳು!

ಟಿವಿಗಳಲ್ಲಿಯಂತೂ ನಿನ್ನೆ ಬೆಳಿಗ್ಗೆ ಶ್ರೀಗಳಿಗೆ ಆರೋಗ್ಯ ಗಂಭೀರವಾಗಿದೆ ಎಂದಾಗಿನಿಂದ ಹಿಡಿದು ಸತತವಾಗಿ ಶ್ರೀಗಳ ಹೊರತಾದ ಬೇರೆಯ ಸುದ್ದಿಗಳು ಪ್ರಸಾರವೇ ಆಗುತ್ತಿಲ್ಲ. ಮಠದಿಂದ ಕ್ಷಣ-ಕ್ಷಣದ ಮಾಹಿತಿಯನ್ನು ಅವು ನೀಡುತ್ತಿವೆ.

In Pics: ಕೈಲಾಸಕ್ಕೆ ಹೊರಟರು ಶಿವ ಶರಣ ಶಿವಕುಮಾರ ಸ್ವಾಮಿ

ಶ್ರೀಗಳ ಶಿವೈಕ್ಯ ಸುದ್ದಿಯನ್ನು ಯಾವ ದಿನಪತ್ರಿಕೆಗಳು ಹೇಗೆ ವರದಿ ಮಾಡಿವೆ ಎಂಬುದು ಮುಂದಿನ ಸ್ಲೈಡ್‌ಗಳಲ್ಲಿ ಇವೆ...

ಅನಂತದೆಡೆಗೆ ನಡೆದ 'ದೇವರು'

ಅನಂತದೆಡೆಗೆ ನಡೆದ 'ದೇವರು'

ಪ್ರಜಾವಾಣಿಯು 'ಅನಂತದೆಡೆಗೆ ನಡೆದ ದೇವರು' ತಲೆಬರಹ ನೀಡಿ ಎನ್.ಸಿದ್ದೇಗೌಡ ಅವರ ವಿಶೇಷ ವರದಿಯನ್ನು ಪ್ರಕಟಿಸಿದೆ. ವರದಿಯಲ್ಲಿ ಶ್ರೀಗಳ ಜೀವನ ಕುರಿತ ಅಂಶಗಳಿವೆ. ಮುಖಪುಟ ಹೊರತುಪಡಿಸಿ 4 ವಿಶೇಷ ಪುಟಗಳನ್ನು ಶ್ರೀಗಳ ಕುರಿತ ವರದಿಗಳಿಗಾಗಿ ಮೀಸಲಿಡಲಾಗಿದೆ. ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಮಲ್ಲೆಪುರಂ.ಜಿ.ವೆಂಕಟೇಶ, ಕುಂ.ವೀರಭದ್ರಪ್ಪ ಅವರು ಶ್ರೀಗಳ ಕುರಿತು ಬರೆದಿರುವ ವಿಶೇಷ ಲೇಖನಗಳ ಜೊತೆ ಇನ್ನೂ ಹಲವು ಲೇಖನಗಳು ಅಂದವಾದ ಚಿತ್ರಗಳು, ಶ್ರೀಗಳ ಹಳೆಯ ಚಿತ್ರಗಳನ್ನು ಮುದ್ರಿಸಲಾಗಿದೆ. ಪತ್ರಿಕೆಯ ಸಂಪಾದಕೀಯ ಸಹ ಶ್ರೀಗಳಿಗೆ ಅರ್ಪಿತವಾಗಿದೆ.

ಸಿದ್ದಗಂಗಾ ಶ್ರೀ ಅಸ್ತಂಗತ: ಅಂತಿಮ ದರ್ಶನಕ್ಕೆ 10 ಲಕ್ಷ ಜನರ ನಿರೀಕ್ಷೆ ಸಿದ್ದಗಂಗಾ ಶ್ರೀ ಅಸ್ತಂಗತ: ಅಂತಿಮ ದರ್ಶನಕ್ಕೆ 10 ಲಕ್ಷ ಜನರ ನಿರೀಕ್ಷೆ

'ಲೋಕವಂದಿನ ಲೀನ' ಸಂಯುಕ್ತಕರ್ನಾಟಕ

'ಲೋಕವಂದಿನ ಲೀನ' ಸಂಯುಕ್ತಕರ್ನಾಟಕ

ಸಂಯಕ್ತ ಕರ್ನಾಟಕವು ತನ್ನ ಮಾಸ್ಟರ್ ಹೆಡ್ ಸ್ಥಳವನ್ನು ಶ್ರೀಗಳಿಗಾಗಿ ಬದಲಾಯಿಸಿ ಗೌರವ ನೀಡಿದೆ. 'ಲೋಕವಂದಿತ ಲೀನ' ಎಂಬ ದೊಡ್ಡ ತಲೆಬರಹದೊಂದಿಗೆ ಶ್ರೀಗಳ ಅಂತಿಮ ಯಾತ್ರೆಯ ಚಿತ್ರವನ್ನು ಪ್ರಕಟಿಸಿದೆ. ಹಲವು ವಿಶೇಷ ಪುಟಗಳನ್ನು, ಶ್ರೀಗಳ ಕುರಿತ ವರದಿಗಳನ್ನು ಸಂಯುಕ್ತ ಕರ್ನಾಟಕ ಪ್ರಕಟಿಸಿದೆ. ಸತೀಶ್ ಆಚಾರ್ಯ ಅವರ ಕಾರ್ಟೂನು ಗಮನ ಸೆಳೆಯುತ್ತಿದೆ.

ತುಮಕೂರಿಗೆ ಜ.22ರಂದು ಮೋದಿ ಆಗಮಿಸುವುದು ಅನುಮಾನತುಮಕೂರಿಗೆ ಜ.22ರಂದು ಮೋದಿ ಆಗಮಿಸುವುದು ಅನುಮಾನ

ಉದಯವಾಣಿಯ ಸಾಧಾರಣ ತಲೆಬರಹ

ಉದಯವಾಣಿಯ ಸಾಧಾರಣ ತಲೆಬರಹ

ಉದಯವಾಣಿ ಪತ್ರಿಕೆಯು ಮುಖಪುಟದಲ್ಲಿ ಸಿದ್ದಗಂಗಾ ಶ್ರೀಗಳ ವರದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತೆ ಕಾಣುವುದಿಲ್ಲ. ಮುಖಪುಟದ ಬಲಭಾಗದಲ್ಲಿ 'ಸಿದ್ದಗಂಗಾ ಶ್ರೀ ಇನ್ನಿಲ್ಲ' ಎಂಬ ಅತಿ ಸಾಮಾನ್ಯ ತಲೆಬರಹದೊಂದಿಗೆ ವರದಿ ಪ್ರಕಟಿಸಿದೆ. ಶ್ರೀಗಳ ಸಣ್ಣ ಚಿತ್ರ ಬಳಸಿದೆ. ಆದರೆ ಒಳ ಪುಟದಲ್ಲಿ ಮೂರು ಪುಟಗಳನ್ನು ಶ್ರೀಗಳ ಕುರಿತ ವರದಿಗಳಿಗಾಗಿ ಮೀಸಲಿಟ್ಟಿದೆ.

ವಿಜಯ ಕರ್ನಾಟಕ

ವಿಜಯ ಕರ್ನಾಟಕ

ವಿಜಯ ಕರ್ನಾಟಕವು 'ಶತಮಾನದ ಸಂತನಿಗೆ ಸಾಷ್ಟಾಂಗ ನಮಸ್ಕಾರ' ಎಂಬ ತಲೆಬರಹದೊಂದಿಗೆ ಶ್ರೀಗಳಿಗೆ ನಮಿಸಿದೆ. ಅಂದವಾದ ವಿನ್ಯಾಸ ಗಮನ ಸೆಳೆಯುತ್ತಿದೆ. ನಾಲ್ಕು ವಿಶೇಷ ಪುಟಗಳನ್ನು ಶ್ರೀಗಳಿಗೆ ಮೀಸಲಿಟ್ಟಿದೆ. ಹಳೆಯ ಚಿತ್ರಗಳ ಜೊತೆಗೆ ವಿಶೇಷ ವರದಿಗಳನ್ನು ವಿಕೆ ಪ್ರಕಟಿಸಿದೆ.

ವಿಜಯವಾಣಿ

ವಿಜಯವಾಣಿ

'ಮತ್ತೆ ಅವತರಿಸು ದೇವ' ತಲೆಬರಹ ನೀಡಿ ತುಣುಕುಗಳನ್ನು ಪೂರ್ಣ ವರದಿ ನೀಡಿದೆ ವಿಜಯವಾಣಿ. ಏಳು ಪುಟಗಳನ್ನು ಸಿದ್ದಗಂಗಾ ಶ್ರೀಗಳ ವಿಶೇಷ ವರದಿಗಳಿಗಾಗಿ ಮೀಸಲಿಟ್ಟಿದೆ ಪತ್ರಿಕೆ. ಅಪರೂಪದ ಚಿತ್ರಗಳು, ವಿಶೇಷ ವರದಿಗಳನ್ನು ಪ್ರಕಟಿಸಿದೆ.

ವಾರ್ತಾಭಾರತಿ

ವಾರ್ತಾಭಾರತಿ

ವಾರ್ತಾ ಭಾರತಿ ಪತ್ರಿಕೆಯು 'ಮಹಾಶರಣನ ನಿರ್ಗಮನ' ಹೆಸರಿನ ತಲೆ ಬರಹ ನೀದಿ ದೀರ್ಘ ವರದಿಯನ್ನು, ಅಂತ್ಯಕ್ರಿಯೆ ಮಾಹಿತಿ, ಇನ್ನಿತರ ಮಾಹಿತಿಗಳನ್ನು ಮುಖಪುಟದಲ್ಲಿ ಪ್ರಕಟಿಸಿದೆ. ಮೂರು ವಿಶೇಷ ಪುಟಗಳನ್ನು ಸ್ವಾಮಿ ಅವರ ವರದಿಗಳಿಗೆ ಮೀಸಲಿಟ್ಟಿದೆ. ಸಂದಾಪಕೀಯದಲ್ಲೂ ಶ್ರೀಗಳ ಗುಣಗಾನ ಮಾಡಲಾಗಿದೆ.

ಹೊಸ ದಿಗಂತ

ಹೊಸ ದಿಗಂತ

ಹೊಸ ದಿಗಂತ ಪತ್ರಿಕೆಯು ಮುಖಪುಟವನ್ನು ಶ್ರೀಗಳಿಗಾಗಿ ಮೀಸಲಿಟ್ಟಿದೆ. ಬಳಸಿರುವ ಚಿತ್ರ ಅದ್ಭುತವಾಗಿದೆ. ಮುಕ್ಕಾಲು ಪುಟವನ್ನು ಶ್ರೀಗಳ ಚಿತ್ರವೊಂದನ್ನೇ ನೀಡಿರುವುದು ಸುದ್ದಿಗೆ ನೀಡಿರುವ ಮಹತ್ವ ತೋರುತ್ತಿದೆ. ಮುಖಪುಟದ ಚಿತ್ರದ ಮತ್ತೆ-ಮತ್ತೆ ನೋಡುವಂತಿದೆ. ಜೊತೆಗೆ ಶತಮಾನದ ಸಂತ ಹೆಸರಿನಲ್ಲಿ ಹಲವು ಪುಟಗಳನ್ನು ಶ್ರೀಗಳ ವಿಶೇಷ ವರದಿಗಾಗಿ ಮೀಸಲಿಡಲಾಗಿದೆ. ಹಲವು ಅಪರೂಪದ ಚಿತ್ರಗಳನ್ನು ಪತ್ರಿಕೆ ಪ್ರಕಟಿಸಿದೆ.

ಪೂರ್ಣ ಪತ್ರಿಕೆಯನ್ನು ಮೀಸಲಿಟ್ಟಿದೆ ವಿಶ್ವವಾಣಿ

ಪೂರ್ಣ ಪತ್ರಿಕೆಯನ್ನು ಮೀಸಲಿಟ್ಟಿದೆ ವಿಶ್ವವಾಣಿ

ವಿಶ್ವವಾಣಿ ಪತ್ರಿಕೆಯು ಇಡೀಯ ಸಂಚಿಕೆಯನ್ನು ಸಿದ್ದಗಂಗಾ ಶ್ರೀಗಳಿಗೆ ಸಮರ್ಪಿಸಿದೆ. ಪೂರ್ಣ ಪತ್ರಿಕೆಯಲ್ಲಿ ಕೇವಲ ಶ್ರೀಗಳ ವರದಿಗಳು, ವಿಶೇಷ ವರದಿಗಳು, ಬರಹಗಳು, ಚಿತ್ರಗಳನ್ನು ಪ್ರಕಟಿಸಿದೆ.

English summary
Siddaganga Seer demise news in Kannada news papers. All news papers given first prefrence to the Seer's demise news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X