ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಡ್ನವೀಸ್, ಬಿಎಸ್‌ವೈ; ಅಕ್ಕಪಕ್ಕ ರಾಜ್ಯಗಳ ನಾಯಕರ ಕಥೆ!

|
Google Oneindia Kannada News

ಬೆಂಗಳೂರು, ನವೆಂಬರ್ 27 : ಕಡಿಮೆ ಅವಧಿಯ ಮುಖ್ಯಮಂತ್ರಿಗಳ ಪಟ್ಟಿಗೆ ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಸೇರಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ. ಎಸ್.‌ ಯಡಿಯೂರಪ್ಪ ಈ ಪಟ್ಟಿ ಸೇರಿ ವರ್ಷಗಳೇ ಕಳೆದಿವೆ.

ಕರ್ನಾಟಕ ಬಿಜೆಪಿಯ ಪ್ರಭಾವಿ ನಾಯಕ ಯಡಿಯೂರಪ್ಪ. ಮಹಾರಾಷ್ಟ್ರ ರಾಜ್ಯದ ಪ್ರಭಾವಿ ನಾಯಕ ದೇವೇಂದ್ರ ಫಡ್ನವೀಸ್. ತಮ್ಮ-ತಮ್ಮ ರಾಜ್ಯದಲ್ಲಿ ಇಬ್ಬರೂ ನಾಯಕರ ಜನಪ್ರಿಯತೆ ಸಾಕಷ್ಟಿದೆ. ಈಗ ಇಬ್ಬರೂ ನಾಯಕರ ಮುಖ್ಯಮಂತ್ರಿ ಹುದ್ದೆ, ರಾಜೀನಾಮೆ ವಿಚಾರದಲ್ಲಿ ಸಾಮ್ಯತೆ ಬಂದಿದೆ.

ದೇಶದಲ್ಲಿ ಕಡಿಮೆ ದಿನ ಮುಖ್ಯಮಂತ್ರಿಯಾದವರ ಪಟ್ಟಿದೇಶದಲ್ಲಿ ಕಡಿಮೆ ದಿನ ಮುಖ್ಯಮಂತ್ರಿಯಾದವರ ಪಟ್ಟಿ

ಎನ್‌ಸಿಪಿಯ ಅಜಿತ್ ಪವಾರ್ ಜೊತೆ ಸೇರಿ ನವೆಂಬರ್ 23ರಂದು 2ನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ನವೆಂಬರ್ 26ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಕರ್ನಾಟಕದಲ್ಲಿಯೂ 2018ರ ವಿಧಾನಸಭೆ ಚುನಾವಣೆ ಬಳಿಕ ಯಡಿಯೂರಪ್ಪ ಇದೇ ಪರಿಸ್ಥಿತಿ ಎದುರಿಸಿದ್ದರು.

ಉಳಿಯಲಿದೆಯೇ ಮಹಾರಾಷ್ಟ್ರ ಸರ್ಕಾರ? ಯಾರ ಬಳಿ ಎಷ್ಟು ಶಾಸಕರಿದ್ದಾರೆ?ಉಳಿಯಲಿದೆಯೇ ಮಹಾರಾಷ್ಟ್ರ ಸರ್ಕಾರ? ಯಾರ ಬಳಿ ಎಷ್ಟು ಶಾಸಕರಿದ್ದಾರೆ?

ಬಹುಮತ ಇಲ್ಲದೇ ಪ್ರಮಾಣ ವಚನ ಸ್ವೀಕಾರ, ಸುಪ್ರೀಂಕೋರ್ಟ್ ಮೊರೆ, ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಬಗ್ಗೆ ಚರ್ಚೆ, ಬಹುಮತವಿಲ್ಲದೆ ರಾಜೀನಾಮೆ ಕರ್ನಾಟಕದ ಕನ್ನಡ ಸಿನಿಮಾವನ್ನು ಮರಾಠಿಯಲ್ಲಿ ರಿಮೇಕ್ ಮಾಡಿದಂತೆ ಮಹಾರಾಷ್ಟ್ರ ರಾಜಕೀಯವಿತ್ತು.

ಮೂರು ದಿನದ ಮುಖ್ಯಮಂತ್ರಿ

ಮೂರು ದಿನದ ಮುಖ್ಯಮಂತ್ರಿ

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿಗೆ ಸ್ಪಷ್ಟಬಹುತವಿಲ್ಲದಿದ್ದರೂ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಕಾಂಗ್ರೆಸ್-ಜೆಡಿಎಸ್ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದರು. ಬಹುಮತ ಸಾಬೀತು ಮಾಡಲು ನ್ಯಾಯಾಲಯ ಸೂಚನೆ ನೀಡಿತು. ವಿಶ್ವಾಸಮತಗಳಿಸುವುದಿಲ್ಲ ಎಂದು ಖಾತ್ರಿಯಾದ ಯಡಿಯೂರಪ್ಪ ಮೇ19ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ದೇವೇಂದ್ರ ಫಡ್ನವೀಸ್ ರಾಜಕೀಯ

ದೇವೇಂದ್ರ ಫಡ್ನವೀಸ್ ರಾಜಕೀಯ

2019ರ ವಿಧಾನಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ 105 ಸ್ಥಾನಗಳಲ್ಲಿ ಜಯಗಳಿಸಿತ್ತು. ಎನ್‌ಸಿಪಿಯನ್ನು ನಂಬಿ ದೇವೇಂದ್ರ ಫಡ್ನವೀಸ್ ನವೆಂಬರ್ 23ರ ಶನಿವಾರ ಮುಂಜಾನೆಯೇ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅಜಿತ್ ಪವಾರ್‌ಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಿದರು. ಆದರೆ, ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಸುಪ್ರೀಂಕೋರ್ಟ್ ಬಾಗಿಲು ಬಡಿದರು. ಬಹುಮತ ಸಾಬೀತು ಮಾಡಿ ಎಂದು ನ್ಯಾಯಾಲಯ ಸೂಚನೆ ನೀಡಿತು. ವಿಧಾನಸಭೆ ಕಲಾಪ ಆರಂಭವಾಗುವುದಕ್ಕೂ ಮುನ್ನವೇ ದೇವೇಂದ್ರ ಫಡ್ನವೀಸ್ ರಾಜೀನಾಮೆ ಕೊಟ್ಟರು.

ಎರಡು ರಾಜ್ಯದ ಪ್ರಭಾವಿ ನಾಯಕರು

ಎರಡು ರಾಜ್ಯದ ಪ್ರಭಾವಿ ನಾಯಕರು

ದೇವೇಂದ್ರ ಫಡ್ನವೀಸ್ ಮತ್ತು ಯಡಿಯೂರಪ್ಪ ಅವರವರ ರಾಜ್ಯದಲ್ಲಿ ಪ್ರಭಾವಿ ನಾಯಕರು. ಹೈಕಮಾಂಡ್ ನಾಯಕರಿಗೂ ಇಬ್ಬರು ನಾಯಕರ ಪ್ರಭಾವ ಏನು ಎಂಬುದು ಗೊತ್ತು. ಇಬ್ಬರು ನಾಯಕರನ್ನು ಕಡೆಗಣಿಸಿ ಚುನಾವಣೆಗೆ ಹೋದರೆ ಹಿನ್ನಡೆ ಖಂಡಿತ. ಆದರೆ, ಇಬ್ಬರೂ ನಾಯಕರು ಮುಖ್ಯಮಂತ್ರಿ ಆಗುವ ವಿಚಾರದಲ್ಲಿ ತೋರಿದ ಆತುರ ಕಡಿಮೆ ಅವಧಿಯ ಮುಖ್ಯಮಂತ್ರಿಗಳ ಪಟ್ಟಿಯನ್ನು ಸೇರುವಂತೆ ಮಾಡಿತು.

ಮುಂದೇನು ಎಂಬ ಪ್ರಶ್ನೆ?

ಮುಂದೇನು ಎಂಬ ಪ್ರಶ್ನೆ?

ದೇವೇಂದ್ರ ಫಡ್ನವೀಸ್ ಅವರಿಗೆ ಇನ್ನೂ ವಯಸ್ಸು ಇದೆ. ಇನ್ನೊಮ್ಮೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಬಹುದು. ಯಡಿಯೂರಪ್ಪಗೆ 76 ವರ್ಷ ವಯಸ್ಸಾಗಿದೆ ಅವರ ರಾಜಕೀಯ ಜೀವನ ಬಹುತೇಕ ಮುಗಿದಂತೆಯೇ ಸರಿ. ದೇವೇಂದ್ರ ಫಡ್ನವೀಸ್ ರಾಷ್ಟ್ರ ರಾಜಕೀಯಕ್ಕೆ ಹೋಗಲಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹರಿದಾಡುತ್ತಿವೆ.

English summary
Devendra Fadnavis joined the short term Chief Minister list after he submit resignation on November 26, 2019. Karnataka's B. S. Yediyurappa in the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X