Property: ಕರ್ನಾಟಕ ಸರ್ಕಾರದಿಂದ ಆಸ್ತಿದಾರರಿಗೆ ಬಿಗ್ ಶಾಕ್!
ಕರ್ನಾಟಕ ಸರ್ಕಾರವು ರಾಜ್ಯದ ಆಸ್ತಿದಾರರಿಗೆ ಆಸ್ತಿ ತೆರಿಗೆ ಶಾಕ್ ನೀಡಿದೆ. ರಾಜ್ಯದಲ್ಲಿ ಈಚೆಗಷ್ಟೇ ಆಸ್ತಿ ತೆರಿಗೆ ಪಾವತಿಯ ಮೇಲೆ ಶೇ 5ರಷ್ಟು ಆಸ್ತಿ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಅದು ಮುಕ್ತಾಯವಾಗುತ್ತಿದ್ದಂತೆಯೇ ಆಸ್ತಿದಾರರಿಗೆ ದೊಡ್ಡ ಶಾಕ್ ಕೊಡಲಾಗಿದೆ. ರಾಜ್ಯದ ನಗರ ಭಾಗದಲ್ಲಿ ಆಸ್ತಿ ತೆರಿಗೆ ಈಗಾಗಲೇ ದುಬಾರಿಯಾಗಿದೆ. ಇದೀಗ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು. ಇದು ಕರ್ನಾಟಕ ಗ್ರಾಮೀಣ ಭಾಗದ ಆಸ್ತಿದಾರರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಆಸ್ತಿದಾರರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.
ಕರ್ನಾಟಕದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್‌ಮೆಂಟ್, ವಿಲ್ಲಾ, ವಾಣಿಜ್ಯ ಕಟ್ಟಡಗಳು, ಮಾಲ್‌ಗಳು, ವಸತಿಯೇತರ ಬಿಲ್ಡಿಂಗ್‌ಗಳು ಹಾಗೂ ಮಲ್ಟಿ ಕಟ್ಟಡಗಳ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ, ಫೀಜುಗಳ) ನಿಯಮಗಳು-2025 ಕರಡು ಅಧಿಸೂಚನೆಯನ್ನು ಹೊರಡಿಸಿದ್ದು. ಪರಿಷ್ಕೃತ ಆಸ್ತಿ ತೆರಿಗೆ ಅಪ್ಡೇಟ್ಸ್ ನೀಡಲಾಗಿದೆ. ಈ ಹೊಸ ನಿಯಮ ಜಾರಿಯಾದ ಮೇಲೆ ಗ್ರಾಮೀಣ ಭಾಗದ ಎಲ್ಲಾ ಆಸ್ತಿದಾರರ ಮೇಲೂ ದುಬಾರಿ ಆಸ್ತಿ ತೆರಿಗೆ ಬೀಳಲಿದೆ. ಈಗಾಗಲೇ ವಿವಿಧ ಸೇವೆಗಳು ಹಾಗೂ ಬೆಲೆ ಏರಿಕೆಯಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಈಗಾಗಲೇ ಆಸ್ತಿ ತೆರಿಗೆ ದುಬಾರಿ ಇದೆ. ಮಹಾನಗರ ಪಾಲಿಕೆಗಳು ಆಸ್ತಿದಾರರಿಂದ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸುವ ಉದ್ದೇಶದಿಂದ ಹಾಗೂ ಆಸ್ತಿದಾರರಿಗೆ ಅನುಕೂಲ ಮಾಡಿಕೊಡಲು ಪ್ರತಿ ವರ್ಷವು ಆಸ್ತಿ ತೆರಿಗೆಯ ಮೇಲೆ ಶೇ 5% ಆಸ್ತಿ ತೆರಿಗೆ ವಿನಾಯಿತಿಯನ್ನು ಘೋಷಿಸುತ್ತಿದೆ. ಆಸ್ತಿದಾರರಿಗೆ ಇದರಿಂದ ಲಾಭವೂ ಆಗಿದೆ. ಇದೀಗ ಬೆಂಗಳೂರು ಮಹಾನಗರ ಪಾಲಿಕೆ, ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಹಲವು ಮಹಾನಗರ ಪಾಲಿಕೆಗಳು ಆಸ್ತಿ ತೆರಿಗೆಯ ಮೇಲೆ ಶೇ 5% ಆಸ್ತಿ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಗ್ರಾಮೀಣ ಭಾಗದಲ್ಲೂ ವಿನಾಯಿತಿ ನೀಡಲಾಗಿತ್ತು. ಇದು ಮುಕ್ತಾಯವಾಗುತ್ತಿದ್ದಂತೆಯೇ ಬೆಲೆ ಏರಿಕೆಯ ಶಾಕ್ ನೀಡಲಾಗಿದೆ.
ಗ್ರಾಮೀಣ ಭಾಗದಲ್ಲಿನ ಆಸ್ತಿಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತಿದ್ದು. ಇದರಲ್ಲಿ ಪ್ರದೇಶ 1 ಹಾಗೂ ಪ್ರದೇಶ 4ರಲ್ಲಿ ಗರಿಷ್ಠ ಹಾಗೂ ಕನಿಷ್ಠ ಆಸ್ತಿ ತೆರಿಗೆ ಇರಲಿದೆ ಎಂದು ಹೇಳಲಾಗಿದೆ. ಅಂದರೆ ಪ್ರದೇಶ ಒಂದರಲ್ಲಿ ಗುರುತಿಸುವ ಆಸ್ತಿಗಳ ಆಸ್ತಿ ತೆರಿಗೆಯು ದುಬಾರಿ ಆಗಲಿದೆ. ಪ್ರದೇಶ 4ರ ಆಸ್ತಿ ತೆರಿಗೆ ಪ್ರಮಾಣವು ಕನಿಷ್ಠ ಮಟ್ಟದಲ್ಲಿ ಆಗಲಿದೆ ಎಂದು ಹೇಳಲಾಗಿದೆ. ಮಾರುಕಟ್ಟೆ ಮೌಲ್ಯವು 50,001 ಹಾಗೂ ಅದಕ್ಕಿಂತ ಹೆಚ್ಚು ಇರುವ ಕಟ್ಟಡಗಳ ಮೇಲೆ 0.10ರಷ್ಟು ಆಸ್ತಿ ತೆರಿಗೆ ಬೀಳಲಿದೆ. ಅಪಾರ್ಟ್‌ಮೆಂಟ್, ಕಮರ್ಶಿಯಲ್ ಕಾಂಪ್ಲೆಕ್ಸ್, ಮಾಲ್ ಹಾಗೂ ಕೆಲವು ಆಸ್ತಿಗಳ ಆಸ್ತಿ ತೆರಿಗೆ ದುಬಾರಿ ಆಗಲಿದೆ ಎಂದು ಅಂದಾಜಿಸಲಾಗಿದೆ.
ಸಾವಿರಾರು ಕೋಟಿ ರೂಪಾಯಿ ಆದಾಯ: ಇನ್ನು ಗ್ರಾಮೀಣ ಭಾಗದ ಆಸ್ತಿಗಳ ಮೇಲೆ ಆಸ್ತಿ ತೆರಿಗೆ ವಿಧಿಸುವುದರಿಂದ ಸಾವಿರಾರು ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರವು ಆದಾಯ ಹಾಗೂ ಆಸ್ತಿ ತೆರಿಗೆ ಹೆಚ್ಚಳ ಮಾಡಿಕೊಳ್ಳುವುದಕ್ಕೆ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ಇದರ ಭಾಗವಾಗಿ ಬಿ ಖಾತಾ ನೀಡುವುದು ಹಾಗೂ ದುಪ್ಪಟ್ಟು ತೆರಿಗೆಯನ್ನೂ ಸಹ ಹೆಚ್ಚಿಸಲಾಗಿತ್ತು. ಇದೀಗ ಗ್ರಾಮೀಣ ಭಾಗದ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಕ್ಕೆ ಮುಂದಾಗಿದೆ. ಇದರಿಂದ ಗ್ರಾಮೀಣ ಭಾಗದ ಆಸ್ತಿದಾರರಿಗೆ ಹೊಸ ಆಸ್ತಿ ತೆರಿಗೆ ಬೀಳಲಿದೆ.












Click it and Unblock the Notifications