ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ-ಶೋಭಾ ಕೆಜೆಪಿಯಿಂದ ಉಚ್ಛಾಟನೆ!

By Srinath
|
Google Oneindia Kannada News

shobha-karandlaje-yeddyurappa-expelled-from-kjp-padmanabha-prasanna
ಬೆಂಗಳೂರು, ಮಾರ್ಚ್6- ಭರಪೂರ್ ಕಾಮಿಡಿ ಅಂದರೆ ಇದೇನಾ? ಗೊತ್ತಿಲ್ಲ ಜನಾನೇ ಹೇಳಬೇಕು. ವಿಷಯ ಏನಪ್ಪಾ ಅಂದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕಾನೇಕ ಮಹಿಮರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಅದೂ ನಿನ್ನೆಯಷ್ಟೇ ಲೋಕಸಭೆಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿರುವುದಾಗ ಬಿಎಸ್ವೈ, ಶೋಭಾ ವಗೈರೆಗಳನ್ನು ಹೀಗೆ ಸಾರಾಸಗಟಾಗಿ ಪಕ್ಷದಿಂದ ಒಗಾಯಿಸಿಬಿಟ್ಟರೆ ಹೇಗೆ? ಪಾಪ ಮೋದಿಯನ್ನು ಪ್ರಧಾನಿಯಾಗಿಸಬೇಕೆಂಬ ಧಾವಂತದಲ್ಲಿರುವ ಈ ನಾಯಕರ ಮುಂದಿನ ಗತಿಯೇನು?

ಏನೂ ಇಲ್ಲ. ಅವರೆಲ್ಲಾ ಆರಾಮವಾಗಿಯೇ ಇದ್ದಾರೆ. ಏಕೆಂದರೆ ಅವರನ್ನೆಲ್ಲ ಯಾವ ಪಕ್ಷದಿಂದ ಹೊರಹಾಕಲಾಗಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಹೌದು ಕರ್ನಾಟಕ ಜನತಾ ಪಕ್ಷದ ಪದ್ಮನಾಭ ಪ್ರಸನ್ನ ಎಂಬ ಅರೆಕಾಲಿಕ ರಾಜಕಾರಣಿ ತಮ್ಮ ಕೆಜೆಪಿ ಪಕ್ಷದಿಂದ ಇವರನ್ನೆಲ್ಲಾ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಇತರ ಪಕ್ಷಗಳೊಡನೆ ಸಂಬಂಧ ಹೊಂದಿರುವ ಆರೋಪ/ಆಧಾರದ ಮೇಲೆ ಹೊರಹಾಕಿದ್ದಾರೆ.

ಕರ್ನಾಟಕ ಜನತಾ ಪಕ್ಷದಲ್ಲಿ ಇದ್ದುಕೊಂಡು ಬೇರೆ ಪಕ್ಷಗಳೊಂದಿಗೆ ಸಂಬಂಧ ಹೊಂದಿರುವ ಹಲವು ಪದಾಧಿಕಾರಿಗಳು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಪದ್ಮನಾಭ ಪ್ರಸನ್ನಕುಮಾರ್ ಕಿಡಿಕಾರಿದ್ದಾರೆ.

ಯಾರೆಲ್ಲಾ ಉಚ್ಚಾಟಿತರು!: ತಕ್ಷಣದಿಂದಲೇ ಜಾರಿಗೆ ಬರುವಂತೆ KJP ಪಕ್ಷದಿಂದ ಉಚ್ಛಾಟಿತಗೊಂಡಿರುವ ಪ್ರಮುಖ ನಾಯಕರೆಂದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಶ್ವನಾಥ ಪಾಟೀಲ್, ಗುರುಪಾದಪ್ಪ ನಾಗಮಾರಪಲ್ಲಿ, ಯುಬಿ ಬಣಕಾರ್, ಶೋಭಾ ಕರಂದ್ಲಾಜೆ, ಸಿಎಂ ಉದಾಸಿ, ಎಂಪಿ ರೇಣುಕಾಚಾರ್ಯ, ಎಂಡಿ ಲಕ್ಷ್ಮೀನಾರಾಯಣ, ಶಂಕರಗೌಡ ಪಾಟೀಲ್, ಮಂಜುನಾಥ ಗೌಡ, ಬಿವೈ ವಿಜಯೇಂದ್ರ, ಗೋಕುಲೆ ಹಾಗೂ ಮಂಜುಳಾ.

English summary
Lok Sabha polls 2014- Karnataka Janata Paksha (KJP) founder Padmanabha Prasanna on Thursday has expelled Shobha Karandlaje, BS Yeddyurappa and others from KJP citing anti-party activities by them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X