Shivananda Patil : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದ ಜೆಡಿಎಸ್‌ ಅಭ್ಯರ್ಥಿ ಸಾವು

ವಿಜಯಪುರ, ಜನವರಿ 21: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇದೆ. ಮೂರು ಪಕ್ಷಗಳ ನಡುವೆ ಭಾರೀ ಸ್ಪರ್ಧೆ ಏರ್ಪಡುವ ಲಕ್ಷಣಗಳಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಬೇಕಿದೆ. ಜೆಡಿಎಸ್‌ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದಿಂದ ಶಿವಾನಂದ ಪಾಟೀಲ ಅವರು ಅಭ್ಯರ್ಥಿಯಾಗಿದ್ದರು. ಅವರು ಅಕಾಲಿಕ ಮರಣ ಹೊಂದಿದ್ದಾರೆ ಎಂಬ ಸುದ್ದಿ ಬಂದಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕುಮಾರಸ್ವಾಮಿ 'ಸಿಂದಗಿ ವಿಧಾನಸಭೆ ಕ್ಷೇತ್ರದ ಜನತಾದಳ ಪಕ್ಷದ ಅಭ್ಯರ್ಥಿ ಶ್ರೀ ಶಿವಾನಂದ ಪಾಟೀಲ ಅವರ ಅಕಾಲಿಕ ಮರಣ ನನಗೆ ತೀವ್ರ ಆಘಾತ ಉಂಟು ಮಾಡಿದೆ' ಎಂದು ತಿಳಿಸಿದ್ದಾರೆ.

'ಜ.18ರಂದು ಇಡೀ ದಿನ ಅವರು ನನ್ನೊಂದಿಗೆ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮರುದಿನ ಯಾತ್ರೆಯೊಂದಿಗೆ ನನ್ನನ್ನು ಆತ್ಮೀಯವಾಗಿ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು. ನಿನ್ನೆ ಮಧ್ಯಾಹ್ನವೂ ಮತ್ತೆ ನಾಗಠಾಣ ಕ್ಷೇತ್ರದ ಯಾತ್ರೆಯಲ್ಲಿ ಭಾಗವಹಿಸಿದ್ದರು' ಎಂದು ಹೇಳಿದ್ದಾರೆ.

Shivananda Patil Jds candidate for the next assembly elections from Sindagi passed away

'ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಶ್ರೀ ಪಾಟೀಲರು, ಸಮಾಜ ಸೇವೆಯ ಅದಮ್ಯ ಹಂಬಲ ಹೊಂದಿದ್ದರು. ಅತ್ಯುತ್ತಮ ಸಂಘಟನಾ ಶಕ್ತಿ, ಕ್ರಿಯಾಶೀಲತೆ ಹೊಂದಿದ್ದ ಅವರು ಪರಿಚಯವಾದ ಅಲ್ಪಕಾಲದಲ್ಲಿಯೇ ನನಗೆ ಅತ್ಯಂತ ಆತ್ಮೀಯರಾಗಿದ್ದರು' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

'ಶ್ರೀ ಶಿವಾನಂದ ಪಾಟೀಲರ ಅಗಲಿಕೆ ನನಗೆ ವೈಯಕ್ತಿಕವಾಗಿ ಅತೀವ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ' ಎಂದು ಮಾಜಿ ಸಿಎಂ ಟ್ವೀಟ್‌ ಮಾಡಿದ್ದಾರೆ.

ಶಿವಾನಂದ ಪಾಟೀಲ ಅವರ ನಿಧನದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಪಾಟೀಲರ ಹುಟ್ಟೂರು ಸೋಮಾಜಾಳಕ್ಕೆ ತೆರಳಲಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಸೋಮಾಜಾಳಕ್ಕೆ ತೆರಳಲಿರುವ ಕುಮಾರಸ್ವಾಮಿ, ಅಂತ್ಯಕ್ರಿಯೆ ಮುಗಿಯುವವರೆಗೆ ಸೋಮಾಜಾಳದಲ್ಲಿ ಉಳಿಯಲಿದ್ದಾರೆ. ಪಾಟೀಲರ ಅಂತ್ಯಕ್ರಿಯೆ ನಂತರ ಮುದ್ದೇಬಿಹಾಳ ಸಭೆಗೆ ಮಾತ್ರ ರಥಯಾತ್ರೆ ಸೀಮಿತಗೊಳಿಸಲಿದ್ದಾರೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ ಇಂದು ನಡೆಯಬೇಕಿದ್ದ ರಥಯಾತ್ರೆ ಸಭೆ ಮುಗಿಸಿ ನೇರವಾಗಿ ಬಾಲವಾಟ್ ಗ್ರಾಮಕ್ಕೆ ತೆರಳಿದ್ದಾರೆ. ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.

Shivananda Patil Jds candidate for the next assembly elections from Sindagi passed away

ಕರ್ನಾಟಕ ವಿಧಾನಸಭೆ ಚುನಾವಣೆಗೆ JDS ಅಭ್ಯರ್ಥಿಗಳ ಮೊದಲ ಪಟ್ಟಿ

ಚಾಮುಂಡೇಶ್ವರಿ ಕ್ಷೇತ್ರ- ಜಿ.ಟಿ.ದೇವೇಗೌಡ
ನಾಗಮಂಗಲ ಕ್ಷೇತ್ರ- ಸುರೇಶ್ ಗೌಡ
ಚನ್ನಪಟ್ಟಣ ಕ್ಷೇತ್ರ- ಎಚ್‌ಡಿ ಕುಮಾರಸ್ವಾಮಿ
ರಾಮನಗರ ಕ್ಷೇತ್ರ - ನಿಖಿಲ್ ಕುಮಾರಸ್ವಾಮಿ
ಹುಣಸೂರು ಕ್ಷೇತ್ರ- ಹರೀಶ್​ ಗೌಡ
ಜಿ.ಟಿ.ದೇವೇಗೌಡ ಮಗ ಹರೀಶ್ ಗೌಡಗೆ ಟಿಕೆಟ್
ಶೃಂಗೇರಿ ಕ್ಷೇತ್ರ- ಸುಧಾಕರ್ ಶೆಟ್ಟಿ
ವರುಣಾ ವಿಧಾನಸಭೆ ಕ್ಷೇತ್ರ- ಅಭಿಷೇಕ್
ಬೆಂಗಳೂರು ದಕ್ಷಿಣ- ಪ್ರಭಾಕರ್ ರೆಡ್ಡಿ
ದೇವನಹಳ್ಳಿ- ನಿಸರ್ಗ ನಾರಾಯಣಸ್ವಾಮಿ
ಖಾನಾಪುರ- ನಾಸಿರ್​ ಬಾಪುಲ್​ಸಾಬ ಭಗವಾನ
ಬೀದರ್ ದಕ್ಷಿಣ ಕ್ಷೇತ್ರ- ಬಂಡೆಪ್ಪ ಕಾಶೆಂಪೂರ
ದೇವರಹಿಪ್ಪರಗಿ ಕ್ಷೇತ್ರ - ರಾಜುಗೌಡ ಪಾಟೀಲ್
ಮಾನ್ವಿ ಕ್ಷೇತ್ರ - ರಾಜಾವೆಂಕಟಪ್ಪ ನಾಯಕ
ಬೈಲಹೊಂಗಲ ಕ್ಷೇತ್ರ- ಶಂಕರ ಮಾಡಲಗಿ
ಕೃಷ್ಣರಾಜ ವಿಧಾನಸಭೆ ಕ್ಷೇತ್ರ- ಮಲ್ಲೇಶ್
ಹನೂರು ಅಸೆಂಬ್ಲಿ ಕ್ಷೇತ್ರ- ಮಂಜುನಾಥ್
ಕೆ.ಆರ್.ನಗರ ಕ್ಷೇತ್ರ- ಸಾ.ರಾ.ಮಹೇಶ್
ಮದ್ದೂರು ಅಸೆಂಬ್ಲಿ ಕ್ಷೇತ್ರ- ಡಿ.ಸಿ.ತಮ್ಮಣ್ಣ
ಶ್ರೀರಂಗಪಟ್ಟಣ ಕ್ಷೇತ್ರ- ಡಾ.ರವೀಂದ್ರ ಶ್ರೀಕಂಠಯ್ಯ
ಮೇಲುಕೋಟೆ ಕ್ಷೇತ್ರ - ಸಿ.ಎಸ್.ಪುಟ್ಟರಾಜು
ಮಂಡ್ಯ ಅಸೆಂಬ್ಲಿ ಕ್ಷೇತ್ರ- ಎಂ.ಶ್ರೀನಿವಾಸ್
ರಾಜಾಜಿನಗರ ಕ್ಷೇತ್ರ- ಗಂಗಾಧರ್ ಮೂರ್ತಿ
ಮಳವಳ್ಳಿ ಕ್ಷೇತ್ರ- ಡಾ.ಕೆ.ಅನ್ನದಾನಿ
ಕೆ.ಆರ್.ಪೇಟೆ ಕ್ಷೇತ್ರ - ಹೆಚ್.ಟಿ.ಮಂಜುನಾಥ್
ಕೆಜಿಎಫ್​ ಅಸೆಂಬ್ಲಿ ಕ್ಷೇತ್ರ- ರಮೇಶ್​ಬಾಬು
ಮೂಡಿಗೆರೆ ಕ್ಷೇತ್ರ- ಬಿ.ಬಿ.ನಿಂಗಯ್ಯ
ಗಾಂಧಿನಗರ ಕ್ಷೇತ್ರ - ವಿ.ನಾರಾಯಣಸ್ವಾಮಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+