ಶಾಸಕರಿಗೆ ಗುಡ್ ನ್ಯೂಸ್: ಶಿವಲಿಂಗೇಗೌಡ್ರು ನೂರಕ್ಕೆ ನೂರರಷ್ಟು ಸಚಿವರಾಗುತ್ತಾರೆ: ರಾಜಣ್ಣ
ಹಾಸನ, ಫೆಬ್ರವರಿ 12: ಲೋಕಸಭಾ ಚುಣಾವಣೆಯ ಬಳಿಕ ಸಿದ್ದರಾಮಯ್ಯ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಹಿರಿಯ ಶಾಸಕರಾದ ಶಿವಲಿಂಗೇಗೌಡ ಅವರಿಗೆ ಮುಂದೆ ನೂರಕ್ಕೆ ನೂರರಷ್ಟು ಸಚಿವರಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಂದೆ ನಡೆಯಲಿರುವ ಲೋಕಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತವಾಗಿದ್ದು, ಸಚಿವ ಸ್ಥಾನ ವಂಚಿತರಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ಒಬ್ಬರು, ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದರು.

ಶಿವಲಿಂಗೇಗೌಡ ಸಚಿವ ಸ್ಥಾನ ವಂಚಿತ ಶಾಸಕರಲ್ಲಿ ಅವರೂ ಒಬ್ಬರು. ಅವರ ಹೆಸರು ಕೂಡ ಪಟ್ಟಿಯಲ್ಲಿ ಇತ್ತು. ಕೊನೆಗಳಿಗೆಯಲ್ಲಿ ಅವರ ಹೆಸರು ಹೋಯ್ತು. ಆದರೆ ಮುಂದೆ ನೂರಕ್ಕೆ ನೂರರಷ್ಟು ಅವರು ಸಚಿವರಾಗ್ತಾರೆ. ತಮ್ಮ ಕ್ಷೇತ್ರಕ್ಕೆ ಯಾವಾವ ಹೆಡ್ ನಲ್ಲಿ ಅನುದಾನ ಏನಿದೆ ಎಂದು ಸಚಿವರಿಗೆ ಗೊತ್ತಿರಲ್ಲ. ಆದರೆ ಶಿವಲಿಂಗೇಗೌಡ ಅವರಿಗೆ ಗೊತ್ತಿರುತ್ತದೆ. ಅವರಿಗೆ ಮುಂದೆ ಇನ್ನೂ ಹೆಚ್ಚಿನ ಅವಕಾಶ ಸಿಕ್ಕೇ ಸಿಗುತ್ತೆ ಎಂದ ಸಚಿವ ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನದಲ್ಲಿ ಸಂಸತ್ ಚುನಾವಣೆ ಗೆಲ್ಲೋ ವಾತಾವರಣ ಇದೆ. ಎಲ್ಲೆಡೆ ವಿಚಾರ ಬೇದ ಇದ್ದೇ ಇರುತ್ತೆ. ಅದು ಹಿಂದಿನಿಂದಲೂ ಇದೆ. ಆದರೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಈಬಾರಿ ನಾವು ಹಾಸನದಲ್ಲಿ ಗೆಲ್ಲದೆ ಹೋದರೆ ಮತ್ತೆ ಯಾವತ್ತೂ ಗೆಲ್ಲೋದಿಲ್ಲ ತಿಳಿದುಕೊಳ್ಳಿ.
ಈ ಕಾರ್ಯಕ್ರಮದಲ್ಲಿ ಶಪತ ಮಾಡಿ ಹೋಗಬೇಕು. ಎಲ್ಲಾ ಮುಖಂಡರ ಭವಿಷ್ಯ ಈ ಚುನಾವಣೆಯಲ್ಲಿ ಇದೆ. ಈ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನ ಗೆಲ್ಲದೇ ಹೋದರೆ ಹೇಗೆ ಮುಖ ತೋರಿಸೋದು ಹೇಳಿ? ಮತದಾರ ಎಂದೂ ನಮಗೆ ಮೋಸ ಮಾಡಲ್ಲ. ನಾವು ಇಷ್ಟೆಲ್ಲಾ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ.
ಇನ್ನೂ ಈ ವೇಳೆ ಶಿವಲಿಂಗೇಗೌಡ ಅವರು ಉದ್ದೇಶಿಸಿ ಮಾತನಾಡಿ, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ನಮ್ಮ ರಾಜ್ಯ 4. 30 ಲಕ್ಷ ಕೋಟಿ ಟ್ಯಾಕ್ಸ್ ಕಟ್ಟುತ್ತದೆ. ನಮಗೆ ನೀವು ಕೊಡ್ತಾ ಇರೋದು ಕೇವಲ 53 ಸಾವಿರ ಕೋಟಿ ಮಾತ್ರ. ನೂರಕ್ಕೆ 13 ಪರ್ಸೇಂಟ್ ವಾಪಸ್ ನೀಡಿ ಉಳಿದ ಹಣ ಕೊಡುತ್ತಿಲ್ಲ. ನಮ್ಮ ರಾಜ್ಯದ ಜನ ನಿಮಗೆ ಏನು ಅನ್ಯಾಯ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ನಿಮ್ಮ ಸರ್ಕಾರ ರಾಜ್ಯದಲ್ಲಿ ಇದ್ದಾಗ ಕೂಡ ನಮ್ಮ ರಾಜ್ಯದ ಬಗ್ಗೆ ನೀವು ಅಭಿಮಾನ ತೋರಿರುವುದಿಲ್ಲ. ರಾಜ್ಯದಲ್ಲಿ ನೀವು ಅದಕಾರ ನಡೆಸಿದ್ದು ಆಪರೇಷನ್ ಕಮಲದ ಮೂಲಕ. ಈ ರಾಜ್ಯದ ಜನ ಯಾವತ್ತೂ ನಿಮಗೆ ಅದಿಕಾರ ನಡೆಸಲು ನೇರವಾಗಿ ಆಯ್ಕೆ ಮಾಡಿಲ್ಲ. ಬರೀ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿದ್ದೀರಾ! ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ದೊಡ್ಡ ಮೊತ್ತದ ಹಣ ಬಾಕಿ ಉಳಿಸಿ ಹೋಗಿದ್ದಾರೆ. ಲೋಕೋಪಯೋಗಿ ಇಲಾಖೆ ಒಂದರಲ್ಲೇ 30 ಸಾವಿರ ಕೋಟಿ ಬಾಕಿ ಇದೆ.
ಹೀಗೆ ಉಳಿದಿರೊ ಬಾಕಿ ತೀರಿಸೋದು ಯಾರು? ನೀವು ಕೇಂದ್ರದಲ್ಲಿ ದೊಡ್ಡ ಶ್ರೀಮಂತರ ಸಾಲಾ ಮನ್ನ ಮಾಡಿದ್ರಿ. ಜನರಿಗೆ ನೀವು ಕೊಟ್ಟಿರೊ ಕೊಡುಗೆ ಏನು? ನಮ್ಮ ರಾಜ್ಯಕ್ಕೆ ೧.೮೭ ಲಕ್ಷ ಕೋಟಿ ತೆರಿಗೆ ಅನ್ಯಾಯ ಆಗಿದೆ. ಸಿದ್ದರಾಮಯ್ಯ ಅವರಿಗೆ ಡಿ.ಕೆ. ಶಿವಕುಮಾರ್ ಅವರಿಗೆ ಧೈರ್ಯ ಇರೋದಕ್ಕೆ ನಿಮ್ಮ ಮನೆ ಬಾಗಿಲಿಗೆ ಬಂದು ಹೇಳಿದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ನೀವು ಒಟ್ಟಿಗೆ ಹೋಗಬೇಕು ಎಂದು ಹೇಳಿದರು.












Click it and Unblock the Notifications