ಶಿವಸಿಂಪಿ ಜನಾಂಗದ ಮೀಸಲಾತಿಗೆ ಬಿಎಸ್ ವೈ ಆಗ್ರಹ

ದಾವಣಗೆರೆ, ಏ.4: ಹಿಂದುಳಿದಿರುವ ಶಿವಸಿಂಪಿ ಜನಾಂಗ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿದ್ದು, ಕೇಂದ್ರ ಸರ್ಕಾರದ ಮಂಡಲ್ ಆಯೋಗ ಶಿವಸಿಂಪಿ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳಿಗೆ ಸೇರಿಸಿದೆ. ಆದರೆ, ರಾಜ್ಯ ಸರ್ಕಾರ ಶಿವಸಿಂಪಿ ಜನಾಂಗವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸದೇ ಅನ್ಯಾಯ ಮಾಡಿದೆ. ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಗಮನ ಹರಿಸಬೇಕು ಎಂದು ಸಂಸದ ಬಿಎಸ್ ಯಡಿಯೂರಪ್ಪ ಅವರು ಆಗ್ರಹಿಸಿದ್ದಾರೆ.

ಸಿಂಪಿ (ದರ್ಜಿ ವೃತ್ತಿಯವರು), ಸಿಂಪಿಗ ಮುಂತಾದ ಹೆಸರುಗಳನ್ನು '2ಎ'ಗೆ ಸೇರಿಸಿದ್ದರೂ ಸಹ ಶಿವಸಿಂಪಿ ಸಮುದಾಯವನ್ನು ಮಾತ್ರ ಮೀಸಲಾತಿಯಿಂದ ಹೊರಗಿಡಲಾಗಿದೆ. ಶಿವಸಿಂಪಿ ಸಮುದಾಯವನ್ನೂ ಸಹ '2ಎ' ಗೆ ಸೇರಿಸಬೇಕು ಎಂದು ಆಗ್ರಹಿಸಲು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.[ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]

ಶಿವಸಿಂಪಿ ಸಮಾಜದ ಅಧ್ಯಕ್ಷ ಗಂಗಾಧರ ಯಾವಗಲ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಶಿವಸಿಂಪಿ ಸಮುದಾಯವನ್ನು 2ಎಗೆ ಸೇರಿಸಲಾಗಿದೆ. ರಾಜ್ಯದಲ್ಲೂ ಸಹ ಮೀಸಲಾತಿ ಕಲ್ಪಿಸಬೇಕೆಂದು ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದೇವೆ ಎಂದರು.

Shiva Simpi community demands reservation and grants from Siddaramaiah Government

ಜಾತಿ ಗಣತಿ : ಮುಂಬರುವ ಜಾತಿ ಗಣತಿ ಕಾಲಂನಲ್ಲಿ ಶಿವಸಿಂಪಿ ಸಮುದಾಯದವರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು. ಜಾತಿ ಕಾಲಂನಲ್ಲಿ ಶಿವಸಿಂಪಿ ಎಂದು (ಕೋಡ್ ನಂ. - 1148), ಉಪಜಾತಿ ಕಾಲಂನಲ್ಲಿ ಶಿವಸಿಂಪಿ ಲಿಂಗಾಯತ (ಕೋಡ್ ನಂ. 1149) ಎಂದು ದಾಖಲಿಸಬೇಕು ಎಂದು ಗಂಗಾಧರ ಯಾವಗಲ್ ಮನವಿ ಮಾಡಿಕೊಂಡರು. [ಜಾತಿ ಜನಗಣತಿ ವಿರೋಧಿಸಿ ವೀರಶೈವರ ಜಾಥಾ]

ಬೃಹತ್ ಸಮಾವೇಶ : ಶಿವಸಿಂಪಿ ಸಮುದಾಯದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಏ.5ರಂದು ಬೆಳಿಗ್ಗೆ 11.30ಕ್ಕೆ ದಾವಣಗೆರೆಯ ಶ್ರೀ ಶಿವಯೋಗಾಶ್ರಮದಲ್ಲಿ ನಡೆಯಲಿದೆ.ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್. ಯಡಿಯೂರಪ್ಪ ಸಮಾವೇಶ ಉದ್ಘಾಟಿಸಲಿದ್ದಾರೆ. [ಬ್ರಾಹ್ಮಣ, ವೈಶ್ಯರಿಗೂ ಮೀಸಲಾತಿ: ಆಂಜನೇಯ]

ಸಮಾವೇಶದ ದಿವ್ಯ ಸಾನ್ನಿಧ್ಯವನ್ನು ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮೀಜಿ ವಹಿಸಲಿದ್ದಾರೆ. ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಉಪಸ್ಥಿತರಿರುವರು, ಗೌರವಾಧ್ಯಕ್ಷ ಚಿಂದೋಡಿ ಚಂದ್ರಧರ ಅಧ್ಯಕ್ಷತೆ ವಹಿಸಲಿದ್ದಾರೆ.[ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ?]

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್, ಮಾಜಿ ಸಚಿವ ಸಿ.ಎಂ. ಉದಾಸಿ, ಶಾಸಕರುಗಳಾದ ಎಸ್.ಎಸ್. ಮಲ್ಲಿಕಾರ್ಜುನ್, ಹೆಚ್.ಎಸ್ ಶಿವಶಂಕರ್, ಎಂ.ಪಿ. ರವೀಂದ್ರ, ಡಿ.ಜಿ. ಶಾಂತನಗೌಡ, ವಡ್ನಾಳ್ ರಾಜಣ್ಣ, ಹೆಚ್.ಪಿ. ರಾಜೇಶ್, ಎಸ್. ಶಿವಮೂರ್ತಿ ನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಶಿವಸಿಂಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ|| ಮಲ್ಲಿಕಾರ್ಜುನ್ ಜವಳಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+