ದೊಡ್ಡವರ ಸಾವು ರೋಚಕ ತಿರುವನ್ನೇ ಪಡೆಯುವುದೇಕೆ?
ಶೀರೂರು ಮಠದ ಲಕ್ಷ್ಮೀವರತೀರ್ಥ ಶ್ರೀಗಳು ದೈವಾಧೀನರಾಗಿದ್ದಾರೆ. ಅಷ್ಠಮಠದ ಶ್ರೀಗಳಲ್ಲಿ ಭಿನ್ನವಾದ ಸ್ವಭಾವದ, ಅಷ್ಠಮಠಗಳ ಇತರ ಸ್ವಾಮಿಗಳ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದ ಶ್ರೀಗಳು ಸದಾ ನೇರವಾದಿ.
ನಿಷ್ಠುರ ನಡೆಯ ಶ್ರೀಗಳು ನಿಧನ ಹೊಂದಿದ ಬೆನ್ನಲ್ಲೆ ಸುದ್ದಿಯೊಂದು ಹರಿದಾಡುತ್ತಿದೆ. ಶ್ರೀಗಳಿಗೆ ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ. ಅವರನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನಗಳನ್ನು ಕೆಲವು ಸ್ವಾಮಿಗಳು ಮತ್ತು ಭಕ್ತಾಧಿಗಳು ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಇದಕ್ಕೆ ತುಪ್ಪ ಸುರಿಯುತ್ತಿವೆ.
ಸುದ್ದಿ ನಿಜವಿದ್ದರೂ ಇರಬಹುದೇನೋ ಆದರೆ ವಿಷಯ ಅದಲ್ಲ. ಸಾಮಾನ್ಯವಾಗಿ ನೇರ ನುಡಿಯವರೋ, ಪ್ರಾಮಾಣಿಕರು ಎಂದು ಕರೆಸಿಕೊಂಡು ಸುದ್ದಿಯಾದವರೋ, ದೊಡ್ಡವರನ್ನು ಎದುರುಹಾಕಿಕೊಂಡು ಸುದ್ದಿಯಾದವರು ಸತ್ತಾಗ ಹೀಗೊಂದು ಸುದ್ದಿ ಸಾಮಾನ್ಯವಾಗಿ ಹರಡುತ್ತದೆ.

ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರು ನಿಧನರಾದಾಗಲಂತೂ ಇಂತಹಾ ಸುದ್ದಿಗಳು ಪುಂಖಾನುಪುಂಕವಾಗಿ ಹರದಾಡಿದ್ದವು. ಈಗಲೂ ಅದು ನಿಂತಿಲ್ಲ.
ಡಿ.ಕೆ.ರವಿ ಅವರಿಗೆ ವಿಷನೀಡಿ ಕೊಂದು ಆ ನಂತರ ನೇಣು ಹಾಕಲಾಗಿದೆ, ಅವರ ಮರಣೋತ್ತರ ಪರೀಕ್ಷೆ ವೇಳೆ ಆಗಿನ ಮುಖ್ಯಮಂತ್ರಿಗಳು ಹಿಂದಿನ ಬಾಗಿಲಿನಿಂದ ಪರೀಕ್ಷಾ ಕೊಠಡಿಗೆ ಹೋಗಿದ್ದರು. ರವಿ ಅವರ ಉಗುರಿನಲ್ಲಿ ವಿಷದ ಅಂಶ ಪತ್ತೆಯಾಗಿದೆ. ಕತ್ತಿನ ಬಾಗದಲ್ಲಿ ಸೂಜಿ ಚುಚ್ಚಿದ ಗುರುತಿದೆ ಹೀಗೆ ಹಲವು ಊಹಾಪೋಹಗಳು ವಿಪರೀತ ಎನಿಸುವಷ್ಟರ ಮಟ್ಟಿಗೆ ಹರಿದಾಡಿದ್ದವು.
ಸಿಬಿಐ ತನಿಖೆ ನಡೆದು ರವಿ ಅವರದ್ದು ಆತ್ಮಹತ್ಯೆಯೇ ಎಂದು ವರದಿ ಕೊಟ್ಟ ಮೇಲೆಯೂ ಕೂಡ, ಈಗಲೂ ಎಷ್ಟೋ ಜನ ಅದು ಕೊಲೆಯಲ್ಲ ಆತ್ಮಹತ್ಯೆ ಎಂದು ನಂಬಲು ತಯಾರೇ ಇಲ್ಲ. ಸಿಬಿಐ ತನಿಖೆಯನ್ನೂ, ನ್ಯಾಯಾಲಯದ ತೀರ್ಪನ್ನು ಸುಳ್ಳೆಂದು ತಮ್ಮ ನಂಬಿಕೆಯೇ ಸತ್ಯವೆಂದು ಮೊಂಡು ವಾದ ಮಂಡಿಸುತ್ತಾರೆ. ಈ ವರ್ತನೆಗೆ ಕಾರಣವೇನು ಎಂಬುದು ಪ್ರಶ್ನೆ.

ಸಹಜ ಸಾವಿನ ಸುದ್ದಿಯಲ್ಲಿ ಅಥವಾ ಆತ್ಮಹತ್ಯೆ ಸುದ್ದಿಯಲ್ಲಿ ಸಿನಿಮೀಯ ಅಂಶ ಇರುವುದಿಲ್ಲ. ಅದೇ ಕೊಲೆಯ ಸುದ್ದಿಯಲ್ಲಿ ಆ ಅಂಶವಿದೆ. ಕೊಲೆಯ ಸುದ್ದಿಯನ್ನು ಕೇಳುಗ ಕಿವಿ ತೆರದು, ಕಣ್ಣರಳಸಿ ಕೇಳುತ್ತಾನೆ, ಹೇಳುವವನೂ ಸಹ ಹುಬ್ಬು ಏರಿಸಿ ಹೇಳುತ್ತಾನೆ. ಒಟ್ಟಿನಲ್ಲಿ ಕೊಲೆ ಸುದ್ದಿಯಲ್ಲಿರುವ 'ರುಚಿ' ಸಹಜ ಸಾವಿನ ಸುದ್ದಿಯಲ್ಲಿ ಇಲ್ಲ ಹಾಗಾಗಿ ಸಹಜ ಸಾವುಗಳೂ ಸಹ ಕೊಲೆಯ ರೂಪ ಪಡೆದುಕೊಳ್ಳುತ್ತವೆ.
ಈಗ ಶೀರೂರು ಶ್ರೀಗಳನ್ನು ವಿಷವಿಕ್ಕಿ ಕೊಲ್ಲಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಅವರು ತಿಂದ ಆಹಾರದಲ್ಲಿ ವಿಷ ಬೆರೆಸಲಾಗಿದೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಹಾಗಾಗಿದ್ದಲ್ಲಿ ಎಲ್ಲರಿಗೂ ಆರೋಗ್ಯ ವ್ಯತ್ಯವಾಗಬೇಕಿತ್ತಲ್ಲವೆ?.
ಇರಲಿ ಇದು ಕೊಲೆಯೋ, ಅಥವಾ ಅನಾರೋಗ್ಯದಿಂದ ಆದ ಸಾವೋ ವರದಿ ಬಂದ ತಿಳಿಯುತ್ತದೆ ಈಗಲೇ ಯಾವುದೇ ನಿರ್ದಿಷ್ಟವಾಗಿ ತೀರ್ಮಾನಕ್ಕೆ ಬರುವುದು ಬೇಡ. ಅಷ್ಟೆ ಅಲ್ಲ ಸುಖಾಸುಮ್ಮನೆ ವದಂತಿಗಳನ್ನು ಸುಳ್ಳು ಸುದ್ದಿಗಳನ್ನೂ ಹರಡುವುದು ಬೇಡ.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications