ಗೃಹ ಸಚಿವ ಶಿಂದೆ ಫರ್ಮಾನಿಗೆ ಸಿಟಿ ರವಿ ಕಿಡಿಕಿಡಿ

'ಕೇಂದ್ರ ಗೃಹ ಸಚಿವ ಶಿಂದೆ ಪತ್ರ ಬರೆದಿರುವುದು ಅಸಂವಿಧಾನಿಕ ಮತ್ತು ಖಂಡನೀಯ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಶಿಂದೆ ಇಂಥ ಪತ್ರ ಬರೆದಿದ್ದಾರೆ' ಎಂದು ಇಬ್ಬರೂ ನಾಯಕರು ಅಭಿಪ್ರಾಪಟ್ಟಿದ್ದಾರೆ.
'ಮತೀಯ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಪ್ರಯತ್ನ ಇದಾಗಿದೆ. ನಾವು ಜಾತ್ಯತೀತವಾದಿಗಳು ಎಂದು ಹೇಳುವ ಕಾಂಗ್ರೆಸ್ ನಾಯಕರು ಕೇವಲ ಒಂದು ಧರ್ಮದ ಯುವಕರ ಕುರಿತು ಕಾಳಜಿ ತೋರಿಸುವುದು ಸರಿಯಲ್ಲ. ನಿರಪರಾಧಿಗಳನ್ನು ಬಂಧಿಸಬಾರದು ಎಂದು ಸೂಚನೆ ನೀಡಿದ್ದರೆ ಒಪ್ಪಬಹುದಿತ್ತು. ಕೇಂದ್ರ ಗೃಹ ಸಚಿವರು ತಮ್ಮ ಹುದ್ದೆಗೆ ಘನತೆ ತರುವಂತೆ ನಡೆದುಕೊಂಡಿಲ್ಲ. ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು' ಎಂದೂ ಅವರು ಒತ್ತಾಯಿಸಿದ್ದಾರೆ.
'ದೇವಸ್ಥಾನದ ಚಿನ್ನದ ಮೇಲೆ ಆರ್ ಬಿಐ ಕಣ್ಣು ಹಾಕಿದೆ. ಭಕ್ತರು ಕೊಟ್ಟಿರುವ ಕಾಣಿಕೆಯನ್ನು ಯಾವ ಸರಕಾರಗಳೂ ವಾಪಸ್ ಪಡೆಯಬಾರದು. ಒಂದು ವೇಳೆ ವಶಕ್ಕೆ ಪಡೆದರೆ ಸರಕಾರ ಅಧಿಕಾರದಲ್ಲಿ ಉಳಿಯುವುದಿಲ್ಲ. ಕೇಂದ್ರದ ಯುಪಿಎ ಸರಕಾರದ ಮಂತ್ರಿಗಳು ಕೋಟಿ ಕೋಟಿ ಲೂಟಿ ಹೊಡೆದು ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡಿ ಈಗ ಪರಿಸ್ಥಿತಿ ನಿಭಾಯಿಸಲು ದೇವಸ್ಥಾನಗಳ ಚಿನ್ನದ ಮೇಲೆ ಕಣ್ಣು ಹಾಕಿದ್ದಾರೆ' ಎಂದು ಸಿಟಿ ರವಿ ಕಟಕಿಯಾಡಿದರು.
ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ:
'ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಿ ಹಲ್ಲೆ ನಡೆಸಿ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸುತ್ತಿದ್ದಾರೆ. ಗದಗದ ಲಕ್ಷ್ಮೇಶ್ವರದಲ್ಲಿ ಮತ್ತು ಚಿಕ್ಕಮಗಳೂರಿನ ಹಲ್ದೂರಿನಲ್ಲಿ ಗಣಪತಿ ಮೆರವಣಿಗೆ ನಡೆಸುತ್ತಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿ ಹಲ್ಲೆ ನಡೆಸಲಾಗಿದೆ. ಶಿರಾದಲ್ಲೂ ಹೀಗೇ ಆಗಿದೆ. ಅನ್ಯ ಧರ್ಮೀಯರ ಭಾವನೆಗೆ ಯಾವುದೇ ಧಕ್ಕೆಯಾಗದಂತೆ ಮೆರವಣಿಗೆ ನಡೆಸಿದರೂ ಕಾರ್ಯಕರ್ತರನ್ನು ಬಂಧಿಸಿರುವುದು ಸರಿಯಲ್ಲ' ಎಂದು ರವಿ ಟೀಕಿಸಿದ್ದಾರೆ.
'ದೇಶದ ಎಲ್ಲ ಮುಸ್ಲಿಮರನ್ನು ಅನುಮಾನದಿಂದ ನೋಡುವುದು ಸರಿಯಲ್ಲ. ಭಾರತ ವಿಭಜನೆಯಾದ ಕಾಲಕ್ಕೆ ಕೋಟ್ಯಂತರ ಮುಸ್ಲಿಮರು ಇಲ್ಲೇ ಉಳಿದರು. ಅವರನ್ನೂ ಅನುಮಾನದಿಂದ ನೋಡಲಾದೀತೆ? ಎಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಶ್ನಿಸಿದ್ದಾರೆ.












Click it and Unblock the Notifications