Shakti Scheme: ಶಕ್ತಿ ಯೋಜನೆಯಡಿ ಅಂತರರಾಜ್ಯ ಬಸ್ ಪ್ರಯಾಣ: ತೆರಳುವಾಗ ಜಿರೋ, ಮರಳುವಾಗ ಶುಲ್ಕ- ಮಹಿಳೆಯರಲ್ಲಿ ಗೊಂದಲ
ಬೆಂಗಳೂರು, ಆಗಸ್ಟ್ 12: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ 'ಶಕ್ತಿ' ಯೋಜನೆಯು ಕೆಲವರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಬೆಳಗಾವಿಯಿಂದ ನಿಪ್ಪಾಣಿಗೆ ಅಂತರರಾಜ್ಯ ಬಸ್‌ನಲ್ಲಿ ಪ್ರಯಾಣಿಸಿದ ಮಹಿಳೆಗೆ ತೆರಳುವಾಗ ಶುಲ್ಕ ವಿಧಿಸಿರಲಿಲ್ಲ. ಆದರೆ, ವಾಪಸ್ ಮರಳುವಾಗ ಶುಲ್ಕ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ.
ಬೆಳಗಾವಿಯಿಂದ ನಿಪ್ಪಾಣಿಗೆ ಪ್ರಯಾಣಿಸಿದ ಮಹಿಳೆಯ ತೆರಳುವ ಬಸ್ ಟಿಕೆಟ್‌ಗಳು ಮತ್ತು ಹಿಂದಿರುಗಿದ ಟಿಕೆಟ್‌ಗಳ ಎರಡು ಪ್ರತ್ಯೇಕ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಜುಲೈ 21 ರಂದು ನೀಡಲಾದ ಅಂತರರಾಜ್ಯ ಬಸ್ ಟಿಕೆಟ್‌ನಲ್ಲಿ ಶೂನ್ಯ ದರವಿದೆ. ಮಹಿಳೆ ಬೆಳಗಾವಿಯಿಂದ ನಿಪ್ಪಾಣಿಗೆ ತೆರಳುತ್ತಿದ್ದಾಗ ಈ ಟಿಕೆಟ್ ನೀಡಲಾಗಿದೆ. ಇನ್ನೊಂದು ಫೋಟೊದಲ್ಲಿ, ಅದೇ ಅಂತರರಾಜ್ಯ ಬಸ್ ಮಾರ್ಗದಲ್ಲಿ ನೀಡಲಾದ ಬಸ್ ಟಿಕೆಟ್‌ಗೆ 74 ರೂಪಾಯಿಯನ್ನು ವಿಧಿಸಲಾಗಿದೆ. ಇದು ಗೊಂದಲವನ್ನು ಸೃಷ್ಟಿಸಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಸ್ಪಷ್ಟೀಕರಣವನ್ನು ಕೇಳಿದ್ದಾರೆ. ಸಂಬಂಧ ಪಟ್ಟ ವಿಭಾಗಗಕ್ಕೆ ಈ ಆರೋಪದ ಕುರಿತು ಮಾಹಿತಿ ನೀಡಲಾಗಿದೆ ಎಂದು ಸಾರಿಗೆ ನಿಗಮವು ತಿಳಿಸಿದೆ.
A Lady shared this.She Took the Belagavi Kolhapur bus up to Nippani. Earlier she was not charged under Shakti but now she was charged see the return tickets as well. @nw_krtc any clarification She had a valid Aadhar card which she had shown the last time pic.twitter.com/cf7KjXJpdM
— All About Belgaum | Belagavi News (@allaboutbelgaum) August 11, 2023
ಇಂಟರ್‌ಸ್ಟೇಟ್ ಬಸ್‌ಗಳಲ್ಲಿ ಕಂಡಕ್ಟರ್‌ಗಳು ಇದನ್ನು ಸ್ಪಷ್ಟಪಡಿಸುತ್ತಾರೆ ಎಂದು ಮತ್ತೊಬ್ಬ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ಉತ್ತರಿಸಿದ್ದಾರೆ.
ಜೂನ್ 11 ರಂದು ಸರ್ಕಾರ ಪ್ರಾರಂಭಿಸಿದ ಶಕ್ತಿ ಯೋಜನೆಯು 36 ಕೋಟಿಗೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಒದಗಿಸಿದೆ. ಇದು ಕರ್ನಾಟಕದಲ್ಲಿ ವಾಸಿಸುವ ಮಹಿಳೆಯರಿಗೆ ಅನ್ವಯಿಸುತ್ತದೆ.

ರಾಜ್ಯದಲ್ಲಿ ಪ್ರಯಾಣಿಸುವ ಕನ್ನಡಿಗ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ ಎಂದು ನಿಯಮ ಹೇಳುತ್ತದೆ.
ನೆರೆಯ ರಾಜ್ಯಗಳಲ್ಲಿ ಮಹಿಳಾ ಪ್ರಯಾಣಿಕರು ಕರ್ನಾಟಕದ ಗಡಿಯಿಂದ ಗರಿಷ್ಠ 20 ಕಿ.ಮೀ ವರೆಗೆ ಉಚಿತವಾಗಿ ಪ್ರಯಾಣಿಸಬಹುದು ಎಂದು ಸರ್ಕಾರ ಹೇಳಿದೆ.
If it's inter-state bus like Chikkodi Pune, then Stree Shakti scheme is not applicable to ladies passangers. Before onboarding to bus also conductors of the bus inform this
— Omkar (@omkardiwan922) August 11, 2023
ಐಷಾರಾಮಿ ಬಸ್‌ಗಳಲ್ಲಿ ಶಕ್ತಿ ಯೋಜನೆಗೆ ಅವಕಾಶವಿಲ್ಲ
ಉಚಿತ ಬಸ್ ಪ್ರಯಾಣ ಯೋಜನೆಯು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ನಿಗಮ (NWRTC), ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಗೆ ಮಾತ್ರ ಸೀಮಿತವಾಗಿದೆ.
ಎಸಿ ಮತ್ತು ನಾನ್ ಎಸಿ, ವಾಯು ವಜ್ರ, ಇವಿ ಪವರ್ ಪ್ಲಸ್ (ಎಸಿ), ಅಂಬಾರಿ, ಐರಾವತ್ ಮತ್ತು ಫ್ಲೈಬಸ್ ಸೇರಿದಂತೆ ಸ್ಲೀಪರ್ ಬಸ್‌ಗಳು ಸೇರಿದಂತೆ ಐಷಾರಾಮಿ ಬಸ್‌ಗಳಿಗೆ ಯೋಜನೆಯಿಂದ ವಿನಾಯಿತಿ ನೀಡಲಾಗಿದೆ.












Click it and Unblock the Notifications