Shakati Scheme: ಈ ವಾರಂತ್ಯವು ರಾಜ್ಯದ ಪ್ರವಾಸಿ ತಾಣಗಳು ಮಹಿಳೆಯರಿಂದ ಭರ್ತಿಯಾಗಲಿವೆ: ಭರ್ಜರಿ ಹಣ ಸಂಗ್ರಹ

ಬೆಂಗಳೂರು, ಜೂನ್ 29: ಕರ್ನಾಟಕದಲ್ಲಿ ಕಳೆದ ಜೂನ್ 11ರಂದು ಜಾರಿಯಾಗಿರುವ ಉಚಿತ ಬಸ್ ಪ್ರಯಾಣದ 'ಶಕ್ತಿ' ಯೋಜನೆಗೆ ಮಹಿಳೆಯರು ಫುಲ್ ಫಿದಾ ಆಗಿದ್ದಾರೆ. ಮಹಿಳೆಯರಿಗೆ ರಾಜ್ಯಾದ್ಯಂತ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣವಾಗಿದ್ದರಿಂದ ಅವರೆಲ್ಲ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಈ ವಾರಾಂತ್ಯಕ್ಕೆ ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಪ್ರವಾಸಿ ತಾಣಗಳು ತುಂಬಿ ತುಳುಕಲಿವೆ.

ಕೆಲವು ದಿನಗಳ ಹಿಂದಷ್ಟೇ ಮಹಿಳೆಯರು ಸರ್ಕಾರಿ ಉಚಿತ ಬಸ್‌ಗಳಲ್ಲಿ ಕರಾವಳಿ ಮತ್ತು ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ತಂಡೋಪ ತಂಡವಾಗಿ ಭೇಟಿ ನೀಡಿದ್ದರು. ಕಳೆದೊಂದು ವಾರದಿಂದ ಮಹಿಳೆಯರು ಮಕ್ಕಳ ಸಮೇತರಾಗಿ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.

Women free bus shakti scheme

ಈ ವಾರಾಂತ್ಯವು ಉತ್ತರ ಕರ್ನಾಟಕದ ವಿಜಯಪುರ ಸೇರಿದಂತೆ ಬಾದಾಮಿ, ಹಂಪೆ, ಐಹೊಳೆ, ಬೆಳಗಾವಿ, ಗೋಕಾಕ್ ಫಾಲ್ಸ್ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಆಗುಂಬೆ, ಪುಣ್ಯ ಕ್ಷೇತ್ರಗಳಾದ ಸಿಗಂಧೂರು, ಉಡಪಿ, ಧರ್ಮಸ್ಥಳ, ಹೊರನಾಡು, ಹಾಸನ ಜಿಲ್ಲೆಗಳು ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳು ಮುಂದಿನ ಶನಿವಾರ ಮತ್ತು ಭಾನುವಾರ ಮಹಿಳೆಯರಿಂದಲೇ ರಾರಾಜಿಸಲಿವೆ.

ಪ್ರವಾಸಿ ತಾಣಗಳಲ್ಲಿ ಮಹಿಳೆಯರು ಗುಂಪು

ವಿಜಯಪುರದ ಗೋಳಗುಮ್ಮಟ, ಇಬ್ರಾಹಿಂ ರೋಜಾ ವೀಕ್ಷಣೆಗೆ ಬರೋ ಮಹಿಳೆಯರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸರ್ಕಾರಿ ಬಸ್​ನಲ್ಲಿ ಬರೋ ಮಹಿಳೆಯರು ದಿನವಿಡೀ ಪ್ರವಾಸಿ ತಾಣಗಳಲ್ಲಿ ಸುತ್ತಾಡಿಕೊಂಡು ಖುಷಿ ಪಡುತ್ತಿದ್ದಾರೆ. ಅದರಲ್ಲೂ ವಾರಾಂತ್ಯ ದಿನಗಳಲ್ಲಂತೂ ಮಹಿಳಾ ಪ್ರವಾಸಿಗರ ದಂಡೇ ಎಲ್ಲೆಲ್ಲೂ ಕಂಡು ಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಸ್ ಪ್ರಯಾಣ ಉಚಿತ ಇರುವುದರಿಂದ ಸಮಯದ ಒತ್ತಡವಿಲ್ಲದೇ ಮಹಿಳೆಯರು ನಾಲ್ಕೈದು ದಿನಗಳ ಕಾಲ ಪ್ರವಾಸ ಮಾಡುತ್ತಿದ್ದಾರೆ. ಕೆಲವೆಡೆ ಪುಣ್ಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿಸುವ ಜೊತೆಗೆ ದೇವರ ದರ್ಶನಕ್ಕೆ ಪಡೆದು ಪುನೀತರಾಗಿದ್ದಾರೆ.

Women free bus shakti scheme

ಕೆಲವು ದಿನಗಳ ಹಿಂದಷ್ಟೇ ಧರ್ಮಸ್ಥಳ, ಸಿಗಂಧೂರಿನಲ್ಲಿ ಮಹಿಳೆಯು ತುಂಬಿ ತುಳುಕಿದ್ದರು. ಬಸ್ ಹತ್ತಿ ಹೊರಡುವುದರಿಂದ ಹಿಡಿದು ದರ್ಶನ ಪಡೆದು ಮರಳಿ ತಮ್ಮೂರಿಗೆ ಹೊರಡುವವರಿಗೆ ಬಸ್‌ಗಳಲ್ಲಿ, ನಿಲ್ದಾಣಗಳಲ್ಲಿ, ದೇವಸ್ಥಾನಗಳಲ್ಲಿ ಜನದಟ್ಟಣೆ ಕಂಡು ಬಂತು. ಈ ವಾರಂತ್ಯವು ಸಹ ಮಹಿಳೆಯರು ಓಡಾಟ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ.

ಭರ್ಜರಿ ಹಣ ಸಂಗ್ರಹ

ಪ್ರವಾಸಿ ತಾಣಗಳಿಗೆ ನಿರಂತರ ಭೇಟಿ ಹಿನ್ನೆಲೆಯಲ್ಲಿ ಇಲ್ಲಿ ವ್ಯಾಪರಾ ವಹೀವಾಟು ಹೆಚ್ಚಾಗುತ್ತಿದೆ. ದೇಗುಲ, ಪ್ರವಾಸಿ ಸ್ಥಳ ವೀಕ್ಷಣೆಯ ಪ್ರವೇಶಕ್ಕೆ ಇಂತಿಷ್ಟು ಹಣ ನಿಗದಿಯಾಗಿರುತ್ತದೆ. ಅದರಿಂದಲೇ ಇತ್ತೀಚೆಗೆ ಲಕ್ಷಾಂತರ ಹಣ ಸಂಗ್ರಹವಾಗುತ್ತಿದೆ. ಅಲ್ಲದೇ ಹೂ, ಹಣ್ಣು, ಹೋಟೆಲ್, ತಿಂಡಿ ತಿನಿಸು ವ್ಯಾಪಾರಸ್ಥರು ಸಹ ಉತ್ತಮ ವ್ಯಾಪಾರದಿಂದ ಸಂತಸಗೊಂಡಿದ್ದಾರೆ.

9.46 ಕೋಟಿ ಮಹಿಳೆಯರು ಸಂಚಾರ

ಶಕ್ತಿ ಯೋಜನೆ ಜಾರಿಯಾದ ಬಳಿಕ ಇದುವರೆಗೆ 9.46 ಕೋಟಿ ಮಂದಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಿದ್ದಾರೆ. ಇಷ್ಟು ಮಂದಿಯ ಟಿಕೆಟ್ ಹಣ 222ಕೋಟಿ ರೂಪಾಯಿ ಎಂದು KSRTC ಅಧಿಕಾರಿಗಳು ಅಂದಾಜಿಸಿದ್ದಾರೆ. ಇನ್ನೂ ನೆನ್ನೆ ಜೂನ್ 28 ರಂದು ಒಂದೇ ದಿನ 60.78 ಲಕ್ಷ ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇದರಿಂದ ಸಾರಿಗೆ ಇಲಾಖೆಯಿಂದ 13 ಕೋಟಿ 64 ಲಕ್ಷ ರೂಪಾಯಿ ಟಿಕೆಟ್ ಮೌಲ್ಯ ಭರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+