Shakit Scheme: ಮಹಿಳಾ ಪ್ರಯಾಣಿಕರಿಗೆ ಶೀಘ್ರವೇ 'ಸ್ಮಾರ್ಟ್ ಕಾರ್ಡ್' ವಿತರಣೆ, ಏನೆಲ್ಲ ಬೇಕು
ಬೆಂಗಳೂರು, ಜನವರಿ 03: ಕರ್ನಾಟಕ ರಾಜ್ಯ ಸರ್ಕಾರ ಬಂದ ನಂತರ ಜಾರಿಯಾದ ಐದು ಗ್ಯಾರಂಟಿಗಳ ಪೈಕಿ ಮೊದಲನೆಯದ್ದು ಶಕ್ತಿ ಯೋಜನೆ. ಈ ಯೋಜನೆಯಡಿ ಕೋಟ್ಯಂತರ ಮಹಿಳೆಯರು ಸಾರ್ವಜನಿಕ ಸಾರಿಗೆಯಲ್ಲಿ ಉಚಿತವಾಗಿ ಸಂಚರಿಸುವ ಅವಕಾಶ ಪಡೆದಿದ್ದಾರೆ. ಇವರೆಲ್ಲರು ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡುತ್ತಿದ್ದು, ಇವರೆಲ್ಲರಿಗೂ ಸಾರಿಗೆ ಇಲಾಖೆಯಿಂದ ಶೀಘ್ರವೇ 'ಸ್ಮಾರ್ಟ್ ಕಾರ್ಡ್' ವಿತರಿಸಲಾಗುತ್ತದೆ.
ಹೌದು, ಈ ಬಗ್ಗೆ ರಾಜ್ಯ ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ. ಸ್ಮಾರ್ಟ್ ಕಾರ್ಡ್ ನೀಡುವ ಮೂಲಕ ಶಕ್ತಿ ಯೋಜನೆಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗುತ್ತದೆ. ಯಾರೆಲ್ಲ ಶಕ್ತಿ ಯೋಜನೆಯ ಫಲಾನುಭವಿಗಳಿದ್ದಾರೋ ಅವರಿಗೆಲ್ಲ 'ಶಕ್ತಿ ಸ್ಮಾರ್ಟ್ ಕಾರ್ಡ್' ನೀಡಲಾಗುತ್ತದೆ ಎಂದು TNIE ವರದಿ ಮಾಡಿದೆ.

ಶಕ್ತಿ ಯೋಜನೆ ಕರ್ನಾಟಕದ ಮಹಿಳಾ ಫಲಾನುಭವಿಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ಅವರೆಲ್ಲರು ಆಧಾರ್ ಕಾರ್ಡ್ ತೋರಿಸಿದರೆ ಅವೆಲ್ಲ ಪರಿಶೀಲಿಸಬೇಕಾಗುತ್ತದೆ. ಇದೇ ರಾಜ್ಯದವರಾ? ಹೌದಾ, ಅಲ್ಲವಾ? ಎಂದು ನೋಡಬೇಕಾಗುತ್ತದೆ. ಇದಕ್ಕಾಗಿ ನಿರ್ವಾಹಕರಿಗೆ ಕೊಂಚ ಸಮಸ್ಯೆಯು ಆಗುತ್ತಿದೆ. ಆಗಾಗ ಕೆಲವೆಡೆ ಬಸ್ ನಿರ್ವಾಹಕರ ಜೊತೆಗೆ ಮಹಿಳೆಯರು ಜಗಳ ಆಡಿದ್ದು ಇದೆ.
ಇನ್ನು ರಾಜ್ಯದಲ್ಲದವರು ಉಚಿತವಾಗಿ ಸಂಚರಿಸಲು, ಆಧಾರ್ ಮಾಡಿಕೊಂಡು ಬಸ್ ಹತ್ತುವ ಬಗ್ಗೆ ದೂರುಗಳು ಬಂದಿವೆ. ಆದ್ದರಿಂದಲೇ ಕರ್ನಾಟಕದ ಮಹಿಳೆಯರಿಗೆ ಮಾತ್ರವೇ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ನೀಡಿದರೆ ಸಾಕು, ಅದೊಂದನ್ನು ತೋರಿಸಿ ಬಸ್ ನಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ.
ಸ್ಮಾರ್ಟ್ ಕಾರ್ಡ್‌ಗೆ ಏನೆಲ್ಲ ಬೇಕು?
ಸದ್ಯ ಸ್ಮಾರ್ಟ್ ಕಾರ್ಡ್ ನೀಡಲು ಶುರು ಮಾಡಿಲ್ಲ. ವಿತರಣೆ ವೇಳೆ ರಾಜ್ಯ ಮಹಿಳೆಯರು ಎಂಬುದಕ್ಕೆ ಇಲ್ಲಿನ ವಿಳಾಸ, ಆಧಾರ್ ಅಥವಾ ಇನ್ನಿತರ ಗುರುತಿಸಿನ ಚೀಟಿ ಸೇರಿದಂತೆ ಅಗತ್ಯ ಮಾಹಿತಿ ಪಡೆದು ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಸಿದ್ಧಪಡಿಸಿ ನೀಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ.
ಶಕ್ತಿ ಯೋಜನೆಯಡಿ ಶೂನ್ಯ ಟಿಕೆಟ್ ನೀಡುವಾಗ ಆಧಾರ್, ಮಹಿಳಾ ಪ್ರಯಾಣಿಕರ ಅಡ್ರೆಸ್, ಇತರ ಪುರಾವೆ ನೋಡಬೇಕು. ಇದಕ್ಕೆ ಸಮಯ ಹಿಡಿಯುತ್ತದೆ. ಪರಿಶೀಲಿಸದಿದ್ದರೆ ಕರ್ನಾಟಕದವರಲ್ಲದ ಮಹಿಳೆಯರು ಉಚಿತ ಬಸ್ ಸಂಚಾರ ಮಾಡುವ ಸಾಧ್ಯತೆ ಇರುತ್ತದೆ ಎಂದು ನಿಗಮದ ಮೂಲಗಳು ದೂರಿವೆ.
ಸ್ಮಾರ್ಟ್ ಕಾರ್ಡ್ ನೀಡಿದರೆ ಸಂಚಾರ ವಿಳಂಬ ತಪ್ಪಲಿದೆ
ಪೀಕ್ ಹವರ್‌ಗಳಲ್ಲಿ ಬಸ್ ಮುಂದಿನ ಸ್ಟಾಪ್ ಒಳಗೆ ಎಲ್ಲರ ಆಧಾರ್, ಪುರಾವೆ ಪರಿಶೀಲಿಸಲು ಆಗಲ್ಲ. ಈ ವೇಳೆ ಬಸ್ ನಿಲ್ಲಿಸಬೇಕಾಗುತ್ತದೆ. ಇದರಿಂದ ಬಸ್ ಕಾರ್ಯಾಚರಣೆ ಸಹ ವಿಳಂಬವಾಗುತ್ತಿದೆ. ಆದ್ದರಿಂದ ನಿರ್ವಾಹಕರ ಕೆಲಸ ಸುಲಭ ಮಾಡಲು ರಾಜ್ಯದ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಿದರೆ ಅನುಕೂಲವಾಗಲಿದೆ ಎಂದು ಸರ್ಕಾರ ಭಾವಿಸಿದೆ.
ಸ್ಮಾರ್ಟ್ ಕಾರ್ಡ್ ವಿತರಣೆ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾ ರೆಡ್ಡಿ, ಮಹಿಳೆಯರು ಶಕ್ತಿ ಯೋಜನೆ ಮೆಚ್ಚಿಕೊಂಡಿದ್ದಾರೆ. ಯೋಜನೆ ಜಾರಿ ಬಳಿಕ ಎಲ್ಲ ನಾಲ್ಕು ನಿಗಮಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ.
ಯೋಜನೆ ಜಾರಿ ಅದ ಬಳಿಕ ಬಸ್ ನಿರ್ವಾಹಕರು ಶೂನ್ಯ ಟಿಕೆಟ್ ನೀಡುವ ಮೊದಲು ಮಹಿಳೆಯರು ಗುರುತಿನ ಚೀಟಿ ನೋಡಿ ಪರಿಶೀಲಿಸಬೇಕು. ಆಗ ಪುರಾವೆ ನೋಡಬೇಕಾಗುತ್ತದೆ. ನಾವು ಸ್ಮಾರ್ಟ್ ಕಾರ್ಡ್ ಕೊಡುವಾಗಲೇ ಎಲ್ಲ ಪುರಾವೆ ನೋಡಿಕೊಂಡು ಕಾರ್ಡ್ ವಿತರಿಸಿದರೆ, ಬಸ್ ಸಂಚಾರದ ವೇಳೆ ಪುರಾವೆ ನೋಡುವು ಅಗತ್ಯ ಬೀಳುವುದಿಲ್ಲ.ಹೀಗಾಗಿ ಸರ್ಕಾರ ಆದಷ್ಟು ಶೀಘ್ರವೇ ಶಕ್ತಿ ಫಲಾನುಭವಿಗಳಿಗೆ ಸ್ಮಾಟ್ ಕಾರ್ಡ್ ನೀಡಲಿದೆ ಎಂದು ತಿಳಿಸಿದರು.
356 ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣ
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜೂನ್ 11 (2023) ರಂದು ಮೊದಲ ಗ್ಯಾರೆಂಟಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಿತು. ಈವರೆಗೆ ಶಕ್ತಿ ಯೋಜನೆಯಡಿ 356 ಕೋಟಿಗೂ ಅಧಿಕ ಮಹಿಳೆಯರು ಸಂಚಾರ ನಡೆಸಿದ್ದಾರೆ ಎಂದು ಸಾರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications