• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನಾಯಕನ ವಿರುದ್ದ ಸಾಹುಕಾರ್ ರಹಸ್ಯ ಕಾರ್ಯಾಚರಣೆ?

|
Google Oneindia Kannada News

ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸ್ಥಾನ ಪಡೆಯಲು ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸಚಿವ ಸ್ಥಾನದ ಆಸೆಯನ್ನು ಜಾರಕಿಹೊಳಿ ಬಿಟ್ಟ ಹಾಗೇ ಕಾಣಿಸುತ್ತದೆ.

ಆದರೂ, ದೆಹಲಿಗೆ ಆವಾಗಾವಾಗ ಪ್ರಯಾಣಿಸುತ್ತಿರುವುದಾದರೂ ಯಾಕೆ? ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ರಮೇಶ್ ಜಾರಕಿಹೊಳಿ ಬೇರೆನೇ ಉದ್ದೇಶವನ್ನು ಇಟ್ಟುಕೊಂಡು ರಾಜಧಾನಿಗೆ ಪ್ರಯಾಣಿಸುತ್ತಿದ್ದಾರೆ ಎಂದು ಅಲ್ಲಲ್ಲಿ ವರದಿಯಾಗುತ್ತಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆ ಜೂ.27ಕ್ಕೆ ಮುಂದೂಡಿಕೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆ ಜೂ.27ಕ್ಕೆ ಮುಂದೂಡಿಕೆ

ಚುನಾವಣಾ ವರ್ಷವಾಗಿರುವುದರಿಂದ ಮೂರೂ ಪಕ್ಷಗಳು ತೆರೆಮೆರೆಯಲ್ಲಿ ಕೆಲಸವನ್ನು ಆರಂಭಿಸಿದೆ. ಪ್ರಧಾನಿ ಮೋದಿಯವರು ಎರಡು ದಿನಗಳ ಕರ್ನಾಟಕ ಪ್ರವಾಸ ಹೆಚ್ಚುಕಮ್ಮಿ ಮುಂದಿನ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ನಡೆಸಿದ ಕಾರ್ಯಕ್ರಮಗಳಂತಿತ್ತು.

ಉತ್ತರ ಕರ್ನಾಟಕದ ಭಾಗದಲ್ಲಿ ಮತ್ತು ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾಗಿದ್ದ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣವೊಂದರಲ್ಲಿ ಹೆಸರನ್ನು ಹಾಳು ಮಾಡಿಕೊಂಡಿದ್ದರು. ಇದಕ್ಕೆಲ್ಲಾ ಮಹಾನಾಯಕನೇ ಕಾರಣ ಎಂದು ಜಾರಕಿಹೊಳಿ ಹೇಳಿದ್ದರು. ಈಗ, ಆ ಮಹಾನ್ ನಾಯಕನ ವಿರುದ್ದ ಸೇಡು ತೀರಿಸಿಕೊಳ್ಳಲು ಸಾಹುಕಾರ ತಂತ್ರಗಾರಿಕೆ ಹಣೆಯುತ್ತಿದ್ದಾರೆ ಎಂಬ ಸುದ್ದಿ ಇದೆ.

Breaking; ರಮೇಶ್ ಜಾರಕಿಹೊಳಿ ವಿರುದ್ಧ 600 ಕೋಟಿ ವಂಚನೆ ಆರೋಪ Breaking; ರಮೇಶ್ ಜಾರಕಿಹೊಳಿ ವಿರುದ್ಧ 600 ಕೋಟಿ ವಂಚನೆ ಆರೋಪ

 ಅಶ್ಲೀಲ ಸಿಡಿ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು

ಅಶ್ಲೀಲ ಸಿಡಿ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು

ಅಶ್ಲೀಲ ಸಿಡಿ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು, ರಾಜ್ಯ ಬಿಜೆಪಿ ಸರಕಾರ ತೀವ್ರ ಮುಜುಗರಕ್ಕೀಡಾಗಿ ಕೊನೆಗೆ ರಮೇಶ್ ಜಾರಕಿಹೊಳಿಯವರ ರಾಜೀನಾಮೆಯನ್ನು ಪಡೆಯಲಾಗಿತ್ತು. ನನ್ನ ವಿರುದ್ದದ ಷಡ್ಯಂತ್ರವಿದು, ಇದರ ಹಿಂದೆ ಮಹಾನ್ ನಾಯಕನ ಕೈವಾಡವಿದೆ. ಒಂದಲ್ಲಾ ಒಂದು ದಿನ ಬಯಲುಗೆಳೆಯುತ್ತೇನೆ ಎಂದು ಜಾರಕಿಹೊಳಿ ಚಾಲೆಂಜ್ ಮಾಡಿದ್ದರು. ಆ ಮಹಾನ್ ನಾಯಕನ ಹೆಸರನ್ನು ಯಾರೆಂದು ಜಾರಕಿಹೊಳಿ ಹೇಳದಿದ್ದರೂ, ಅದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರೇ ಎಂದು ಅರ್ಥೈಸಿಕೊಳ್ಳಲಾಗಿದೆ. ಈಗ, ಅವರ ವಿರುದ್ದ ಸೇಡು ತೀರಿಸಿಕೊಳ್ಳಲು ಜಾರಕಿಹೊಳಿ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದ್ದಾರೆ.

 ಇಡಿ, ಐಟಿ, ಸಿಬಿಐನಲ್ಲಿ ಇನ್ನೂ ಮುಗಿಯದ ಕೇಸುಗಳು

ಇಡಿ, ಐಟಿ, ಸಿಬಿಐನಲ್ಲಿ ಇನ್ನೂ ಮುಗಿಯದ ಕೇಸುಗಳು

ಡಿ. ಕೆ. ಶಿವಕುಮಾರ್ ವಿರುದ್ದ ಇಡಿ, ಐಟಿ, ಸಿಬಿಐನಲ್ಲಿ ಇನ್ನೂ ಮುಗಿಯದ ಕೇಸುಗಳಿವೆ, ಅದನ್ನೇ ದಾಳವಾಗಿಸಿಕೊಳ್ಳಲು ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸ ಮಾಡುತ್ತಿರುವುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಚಿವರು, ಅಧಿಕಾರಿಗಳನ್ನು ಜಾರಕಿಹೊಳಿ ಭೇಟಿಯಾಗುತ್ತಿದ್ದಾರೆ. ದೂರುಗಳ ಮೂಲಕ ಡಿಕೆಶಿಯವರನ್ನು ನಿಯಂತ್ರಿಸಲು ಕೇಂದ್ರದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

 ಸಿಡಿ ಪ್ರಕರಣ ಜಾರಕಿಹೊಳಿ ಕುಟುಂಬಕ್ಕೆ ಕಪ್ಪುಚುಕ್ಕೆ

ಸಿಡಿ ಪ್ರಕರಣ ಜಾರಕಿಹೊಳಿ ಕುಟುಂಬಕ್ಕೆ ಕಪ್ಪುಚುಕ್ಕೆ

ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಗಬೇಕು ಎನ್ನುವ ಒತ್ತಡವನ್ನು ಬದಿಗಿಟ್ಟು ರಮೇಶ್ ಜಾರಕಿಹೊಳಿ, ತಮ್ಮ ರಾಜಕೀಯ ವಿರೋಧಿಯನ್ನು ಮಟ್ಟಹಾಕಲು ದೆಹಲಿ ಮಟ್ಟದಲ್ಲಿ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಆ ಸಿಡಿ ಪ್ರಕರಣದಲ್ಲಿ ಜಾರಕಿಹೊಳಿ ಕುಟುಂಬಕ್ಕೂ ಕಪ್ಪುಚುಕ್ಕೆ ಅಂಟಿಕೊಂಡಿತ್ತು. ಈಗ, ಚುನಾವಣೆಯ ವರ್ಷವಾಗಿರುವುದರಿಂದ, ಕೇಂದ್ರೀಯ ತನಿಖಾ ದಳದ ಮೂಲಕ ಡಿ. ಕೆ. ಶಿವಕುಮಾರ್ ಕಟ್ಟಿಹಾಕಲು ಸಾಧ್ಯವಾಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ.

 ಡಿಕೆಶಿ ವಿರುದ್ದ ರಮೇಶ್ ಜಾರಕಿಹೊಳಿ ರಹಸ್ಯ ಕಾರ್ಯಾಚರಣೆ

ಡಿಕೆಶಿ ವಿರುದ್ದ ರಮೇಶ್ ಜಾರಕಿಹೊಳಿ ರಹಸ್ಯ ಕಾರ್ಯಾಚರಣೆ

ಡಿಕೆಶಿ ವಿರುದ್ದ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ನಡೆಸುತ್ತಿರುವ ರಹಸ್ಯ ಕಾರ್ಯಾಚರಣೆಯ ಬಗ್ಗೆ ರಾಜ್ಯದ ನಾಯಕರಿಗೂ ಮಾಹಿತಿಯಿದೆ. ಈ ಸಮಯದಲ್ಲಿ ಡಿಕೆಶಿಯನ್ನು ತನಿಖೆಯ ಹೆಸರಿನಲ್ಲಿ ಕಟ್ಟಿಹಾಕಿದರೆ, ಚುನಾವಣಾ ಪ್ರಚಾರದಲ್ಲಿ ಅವರು ಸಕ್ರಿಯರಾಗಿ ಭಾಗವಹಿಸದಂತೆಯೂ ಕೂಡಾ ಮಾಡಬಹುದು. ಹಾಗಾಗಿ, ಮುಂದಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ವಿರುದ್ದ ಮತ್ತೆ ವಿಚಾರಣೆ ಆರಂಭವಾದರೆ ಆಶ್ಚರ್ಯ ಪಡಬೇಕಾಗಿಲ್ಲ.

ರಮೇಶ ಜಿಗಜಿಣಗಿ
Know all about
ರಮೇಶ ಜಿಗಜಿಣಗಿ
English summary
Senior BJP Leader Ramesh Jarkiholi Silent Operation In Delhi Against Mahanayak. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X