ಛೀ ಥೂ ಎನಿಸಿಕೊಳ್ಳುತ್ತಿರುವ ಸಿದ್ದರಾಮಯ್ಯಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳು!
ಬೆಂಗಳೂರು, ನವೆಂಬರ್ 27: ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಛೀ ಥೂ ಎನಿಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಮುಖ್ಯಮಂತ್ರಿ ಅವರಿಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳನ್ನ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಮುಂದಿಟ್ಟು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಛೀ ಥೂ ಎನಿಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ @siddaramaiah ಅವರಿಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳು:
— BJP Karnataka (@BJP4Karnataka) November 27, 2023
▪ ಮೋದಿ ಸರ್ಕಾರದ 5 ಕೆಜಿ ಅಕ್ಕಿ ನೀವು ಕೊಡುತ್ತಿಲ್ಲ ಏಕೆ?
▪ ನೀವೇ ಹೇಳಿದ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ ಏಕೆ?
▪ ಗೃಹ ಲಕ್ಷ್ಮಿ ಹೆಸರಲ್ಲಿ ಸ್ವಾಭಿಮಾನಿ ಮಹಿಳೆಯರನ್ನು…
ಸಿದ್ದರಾಮಯ್ಯಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳು ಇಲ್ಲಿವೆ
▪ ಮೋದಿ ಸರ್ಕಾರದ 5 ಕೆಜಿ ಅಕ್ಕಿ ನೀವು ಕೊಡುತ್ತಿಲ್ಲ ಏಕೆ?
▪ ನೀವೇ ಹೇಳಿದ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ ಏಕೆ?
▪ ಗೃಹ ಲಕ್ಷ್ಮಿ ಹೆಸರಲ್ಲಿ ಸ್ವಾಭಿಮಾನಿ ಮಹಿಳೆಯರನ್ನು ವಂಚಿಸಿದ್ದು ಏಕೆ?

▪ ಕನ್ನಡಿಗರ ಹಣವನ್ನು ಲೂಟಿ ಮಾಡಿ ಹೈಕಮಾಂಡ್ ಹೊಟ್ಟೆ ತುಂಬಿಸುತ್ತಿರುವುದು ಸರಿಯೇ?
▪ ಬರಗಾಲವನ್ನು ನಿರ್ವಹಣೆ ಮಾಡಲಿಲ್ಲ, ಪರಿಹಾರವೂ ಕೊಟ್ಟಿಲ್ಲ ಏಕೆ?
▪ ನಾಡಿನ ಜನತೆ ಸಂಕಷ್ಟದಲ್ಲಿರುವಾಗ ನಿಮಗೆ ಪಂಚ ರಾಜ್ಯ ಚುನಾವಣೆ ಮುಖ್ಯವೇ?
▪ ನಮ್ಮನ್ನು ಉದ್ಧಾರ ಮಾಡುತ್ತೇವೆಂದು ಬಂದು ಬೆಲೆ ಏರಿಕೆ ಮೂಲಕ ತುಳಿದಿದ್ದು ಸರಿಯೇ?
▪ ಕಾವೇರಿಯನ್ನು ಕಳ್ಳತನದಿಂದ ಬಿಟ್ಟು ನಮಗೆ ವಂಚಿಸಿದ್ದೇಕೆ?
▪ತೆಲಂಗಾಣ ಚುನಾವಣೆ ಹಣವನ್ನು ಮಂಚದ ಕೆಳಗೆ ಬಚ್ಚಿಟ್ಟಿದ್ದು ಅಲ್ಲದೆ ಮೋಜು ಮಾಡಲು ಸರ್ಕಾರ ಅಲ್ಲಿಗೆ ಟೂರ್ ಹೋಗಿದ್ದೇಕೆ?
ಸ್ವಯಂಘೋಷಿತ ಆರ್ಥಿಕ ತಜ್ಞ ಮಜವಾದಿ ಸಿದ್ದರಾಮಯ್ಯ ಅವರ ಬಳಿ ಜನರ ಈ ಪ್ರಶ್ನೆಗಳಿಗೆ ಒಂದಕ್ಕಾದರೂ ಉತ್ತರವಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದ್ದು, ಅಕ್ಕಿ ಹೆಸರಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮೋಸದ ರಾಜಕಾರಣ ಮಾತ್ರ ಮಾಡುತ್ತಿಲ್ಲ, ಕಳ್ಳತನಕ್ಕೇ ಇಳಿದುಬಿಟ್ಟಿದೆ. ಜಾರ್ಜ್ ಅವರ ಇಂಧನ ಇಲಾಖೆ ಮಾತ್ರವಲ್ಲ, ಕೆ ಹೆಚ್ ಮುನಿಯಪ್ಪ ಅವರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲೂ ಹೆಗ್ಗಣಗಳ ಕಾಟ ಜೋರಾಗಿದೆ. ಲಂಚ ಕೊಡುವುದಕ್ಕಾಗಿಯೇ ಅಕ್ರಮ ಅಕ್ಕಿ ಮಾರಾಟ ಮಾಡುತ್ತಿರುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ತನ್ನಿಂದ ಕೊಡಲು ಅಕ್ಕಿಯೇ ಇಲ್ಲ ಎನ್ನುತ್ತಿರುವ ಕಾಂಗ್ರೆಸ್ ಕಲೆಕ್ಷನ್ ಆಸೆಗೆ ಟನ್‌ಗಟ್ಟಲೆ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಹಂತಕ್ಕೆ ತಲುಪಿದೆ.
ಹಲೋ ಅಪ್ಪಾ ಪ್ರಕರಣವನ್ನು ಈಗಾಗಲೇ ಕಣ್ತುಂಬಿಕೊಂಡಿರುವ ಕನ್ನಡದ ಜನತೆಗೆ ಈಗ ವರ್ಗಾವಣೆ ದಂಧೆಗೆ ಸಂಬಂಧಿಸಿದ ಮತ್ತೊಂದು ಸವಿವರ ಆಡಿಯೋ ಕೇಳುವ ದುರಾದೃಷ್ಟ ಒದಗಿಬಂದಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಉಮಾಪತಿಯವರು ಗೃಹ ಸಚಿವರಿಗೆ ಕೊಟ್ಟ ಹಣ ಮತ್ತು ಕೈ ಹಾಕಿದ ವರ್ಗಾವಣೆ ವ್ಯವಹಾರ ಈ ಸಂಭಾಷಣೆಯಲ್ಲಿ ಜಗಜ್ಜಾಹೀರಾಗಿದೆ.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಕ್ಲೀನ್‌ಚಿಟ್ ನೀಡಿದಂತೆಯೇ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ಈ ಪ್ರಕರಣದಲ್ಲೂ ಕ್ಲೀನ್‌ಚಿಟ್ ನೀಡಿದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ಹೇಳಿದೆ.












Click it and Unblock the Notifications