ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ಬ್ಲಾಕ್ ಮೇಲ್ ಪ್ರಕರಣಕ್ಕೆ ಹೊಸ ತಿರುವು

ಬೆಂಗಳೂರು, ಫೆ. 09: ಸೇಡಂ ಶಾಸಕ ರಾಜಕುಮರ್ ಪಾಟೀಲ್ ತೇಲ್ಕೂರ್ ಬ್ಲಾಕ್ ಮೇಲ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನನ್ನ ಮಗನಿಗೆ ತೇಲ್ಕೂರ್ ತಂದೆ ಎಂದು ಗಂಭೀರ ಆರೋಪ ಮಾಡಿದ್ದ ಮಹಿಳೆಯನ್ನು ವಿಧಾನಸೌಧ ಪೊಲೀಸರು ಸತತ ನಾಲ್ಕು ತಾಸು ವಿಚಾರಣೆ ನಡೆಸಿದ್ದಾರೆ.

ಶಾಸಕ ನೀಡಿರುವ ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಮಹಿಳೆಗೆ ಸತತ ಪ್ರಶ್ನೆಗಳನ್ನು ಕೇಳಿದ್ದಾರೆ. ಶಾಸಕರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೆಲ ಸಾಕ್ಷಧಾರ ಕಲೆ ಹಾಕುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ನನಗೆ ಹದಿಮೂರು ವರ್ಷದಿಂದ ತೇಲ್ಕೂರ್ ಪರಿಚಯ. ನನ್ನ ಊರಿನವರೇ ಆದ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರಿಗೆ ಮಗು ಜನಿಸಿದೆ. ಆ ಮಗುವಿಗೆ ಜೀವನಾಧಾರ ಕೇಳಿದ್ದೇನೆ ವಿನಃ, ನಾನು ಬ್ಲಾಕ್ ಮೇಲ್ ಮಾಡಿಲ್ಲ ಎಂದು ಸಂತ್ರಸ್ತ ಮಹಿಳೆ ಹೇಳಿಕೆ ದಾಖಲಿಸಿದ್ದಾಳೆ. ಇನ್ನು ಇಷ್ಟು ವರ್ಷ ದೂರು ನೀಡದೇ ಈಗ ನೀಡುತ್ತಿರುವ ಕಾರಣ ಬಗ್ಗೆ ಮಹಿಳೆಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಮಹಿಳೆ ಹೇಳಿಕೆ ಬೆನ್ನಲ್ಲೇ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

Sedam BJP MLA Rajkumar Patil Sexual Harassment Case: Vidhana Soudha Police Enquired Woman

ಸಂತ್ರಸ್ತ ಮಹಿಳೆ ಪರ ವಕೀಲ ಆರೋಪ:

ಸಂತ್ರಸ್ತ ಮಹಿಳೆಗೆ ಪೊಲೀಸ್ ಅಧಿಕಾರಿಯೊಬ್ಬರು ಎರಡು ಕೋಟಿ ರೂ. ನೀಡುವ ಅಮಿಷ ಒಡ್ಡಿದ್ದಾರೆ ಎಂದು ಸಂತ್ರಸ್ತ ಪರ ವಕೀಲ ಆರೋಪ ಮಾಡಿದ್ದಾರೆ. ಬೆಳಗ್ಗೆಯಿಂದ ರಾತ್ರಿ ವರೆಗೂ ನನ್ನ ಕಕ್ಷಿದಾರರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎರಡು ಕೋಟಿ ಕೊಡ್ತೀವಿ, ಪ್ರಕರಣ ಕೈ ಬಿಡು ಎಂದು ಆಫರ್ ಕೊಟ್ಟಿದ್ದಾರೆ. ಎಸಿಪಿ ಅವರಿಗೆ ಎರಡು ಕೋಟಿ ರೂ. ಎಲ್ಲಿಂದ ಬಂತು. ಇದರ ಹಿಂದೆ ರಾಜಕೀಯ ವ್ಯಕ್ತಿಗಳ ಬೆಂಬಲ ಇರುವುದು ಗೊತ್ತಾಗುತ್ತದೆ. ಈ ಕುರಿತು ತನಿಖೆಯಾಗಬೇಕು ಎಂದು ವಕೀಲ ಆಗ್ರಹಿಸಿದ್ದಾರೆ.

Sedam BJP MLA Rajkumar Patil Sexual Harassment Case: Vidhana Soudha Police Enquired Woman

ಶಾಸಕ ರಾಜಕುಮಾರ್ ತೇಲ್ಕೂರ್ ವಿರುದ್ಧ ಸಿಬಿಐನಲ್ಲಿ ವಂಚನೆ ಪ್ರಕರಣವಿದೆ. ಶಾಸಕರ ಒತ್ತಡಕ್ಕೆ ಮಣಿದು ಎಸಿಪಿ ನಮ್ಮ ಕಕ್ಷಿದಾರರಿಗೆ ತೊಂದರೆ ನೀಡುತ್ತಿದ್ದಾರೆ. ಅವರ ನಡವಳಿ ಬಗ್ಗೆ ಸಮಾಧಾನವಿಲ್ಲ. ಈ ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಸಂತ್ರಸ್ತ ಪರ ವಕೀಲ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+