ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯು ಮಧ್ಯ-ವಾರ್ಷಿಕ ಪರೀಕ್ಷೆ ಪ್ರಕಟ; ವೇಳಾಪಟ್ಟಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ನವೆಂಬರ್ 12: ಪದವಿ ಪೂರ್ವ ಶಿಕ್ಷಣ ಇಲಾಖೆಯ 2021-22ನೇ ಸಾಲಿನ ದ್ವಿತೀಯ ಪಿಯುಸಿಯ ಮಧ್ಯ ವಾರ್ಷಿಕ ಪರೀಕ್ಷೆಯನ್ನು ರಾಜ್ಯದಾದ್ಯಂತ ಏಕಕಾಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ನವೆಂಬರ್ 29, 2021 ರಿಂದ ಡಿಸೆಂಬರ್ 10, 2021ರವರೆಗೆ ನಡೆಸಲು ತೀರ್ಮಾನಿಸಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಎಲ್ಲಾ ಪೋಷಕರು ಹಾಗೂ ವಿದ್ಯಾರ್ಥಿಗಳು ಇಲಾಖಾ ಅಂತರ್ಜಾಲದಲ್ಲಿ ಅಳವಡಿಸಿರುವ ವೇಳಾಪಟ್ಟಿಯನ್ನು ವೀಕ್ಷಿಸಬಹುದಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

ಪರೀಕ್ಷಾ ವೇಳಾಪಟ್ಟಿ

* ನವೆಂಬರ್ 29ರ ಸೋಮವಾರ: ಬೆಳಗಿನ ಅವಧಿಯಲ್ಲಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆದರೆ, ಮಧ್ಯಾಹ್ನದ ಅವಧಿಯಲ್ಲಿ ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್ ಮತ್ತು ಪ್ರೆಂಚ್ ಭಾಷೆಯ ಪರೀಕ್ಷೆ ನಡೆಯಲಿದೆ.

karnataka second puc mid-term exams announced; Time Table is Here

* ನವೆಂಬರ್ 30ರ ಮಂಗಳವಾರ: ದ್ವಿತೀಯ ಭಾಷೆ ಇಂಗ್ಲೀಷ್ ಭಾಷಾ ಪರೀಕ್ಷೆ ನಡೆಯಲಿದೆ.

* ಡಿಸೆಂಬರ್ 1ರ ಬುಧವಾರ: ಇತಿಹಾಸ ಮತ್ತು ಭೌತಶಾಸ್ತ್ರ ಪರೀಕ್ಷೆ ನಡೆಯಲಿದೆ.

* ಡಿಸೆಂಬರ್ 2ರ ಗುರುವಾರ: ಅರ್ಥಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.

* ಡಿಸೆಂಬರ್ 3ರ ಶುಕ್ರವಾರ: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್‍, ಕಂಪ್ಯೂಟರ್ ವಿಜ್ಞಾನ ಮತ್ತು ಭೂವಿಜ್ಞಾನ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನದ ಅವಧಿಯಲ್ಲಿ ಹಿಂದೂಸ್ತಾನಿ ಸಂಗೀತ, ಅಂಕಿ ಅಂಶಗಳು ಪರೀಕ್ಷೆ ನಡೆಯಲಿದೆ.

karnataka second puc mid-term exams announced; Time Table is Here

* ಡಿಸೆಂಬರ್ 6ರ ಸೋಮವಾರ: ಸಮಾಜಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆಯಲಿದೆ.

* ಡಿಸೆಂಬರ್ 7ರ ಮಂಗಳವಾರ: ಅಕೌಂಟೆನ್ಸಿ, ಶಿಕ್ಷಣ ಮತ್ತು ಮನೆ ವಿಜ್ಞಾನ ಪರೀಕ್ಷೆ ನಡೆಯಲಿದೆ.

* ಡಿಸೆಂಬರ್ 8ರ ಬುಧವಾರ: ಬೆಳಗಿನ ಅವಧಿಯಲ್ಲಿ ವ್ಯವಹಾರ ಅಧ್ಯಯನ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಐಚ್ಛಿಕ ಕನ್ನಡ ಪರೀಕ್ಷೆ ನಡೆಯಲಿದೆ.

karnataka second puc mid-term exams announced; Time Table is Here

* ಡಿಸೆಂಬರ್ 9ರ ಗುರುವಾರ: ಬೆಳಗಿನ ಅವಧಿಯಲ್ಲಿ ಭೂಗೋಳಶಾಸ್ತ್ರ, ಮನಃಶಾಸ್ತ್ರ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಆರೋಗ್ಯ ಸಲಹೆ ಪರೀಕ್ಷೆ ನಡೆಯಲಿದೆ.

* ಡಿಸೆಂಬರ್ 10ರ ಶುಕ್ರವಾರ: ಬೆಳಗಿನ ಅವಧಿಯಲ್ಲಿ ಹಿಂದಿ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಉರ್ದು, ಸಂಸ್ಕೃತ ಪರೀಕ್ಷೆ ನಡೆಯಲಿದೆ.

Recommended Video

ಬಿಟ್ ಕಾಯಿನ್ ಧಂದೆ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿಕೆ | Oneindia Kannada

English summary
Department of Pre Education Announced Second PUC exams time table. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X