KRS Dam: ಮಳೆ.. ಮಳೆ.. 2 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ?

ಕರ್ನಾಟಕದಲ್ಲಿ ಭಾರಿ ಮಳೆ ಬೀಳುತ್ತಿದ್ದು, ಕೆಆರ್‌ಎಸ್ & ಕಬಿನಿ, ಹೇಮಾವತಿ, ಹಾರಂಗಿ, ಲಿಂಗನಮಕ್ಕಿ, ತುಂಗಭದ್ರಾ, ಆಲಮಟ್ಟಿ ಹೀಗೆ ಕರ್ನಾಟಕದ ಬಹುತೇಕ ಜಲಾಶಯಗಳೆಲ್ಲಾ ತುಂಬಿ ತುಳುಕುತ್ತಿವೆ. ಪರಿಸ್ಥಿತಿ ಹೀಗಿದ್ದಾಗಲೇ ಕರ್ನಾಟಕದಲ್ಲಿ ಮತ್ತಷ್ಟು ಘೋರ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಭಾರಿ ಮಳೆ ಮುನ್ಸೂಚನೆ ಕಾರಣಕ್ಕೆ 2 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹಾಗಾದ್ರೆ ಯಾವ ಯಾವ ದಿನ ರಜೆಯನ್ನ ಘೋಷಣೆ ಮಾಡಬಹುದು? ಮುಂದೆ ಓದಿ.

ಎಲ್ಲೆಲ್ಲೂ ಮಳೆ ಅಬ್ಬರಿಸಿದ್ದು ಮಳೆ ಅಬ್ಬರಕ್ಕೆ ಜನರ ಜೀವನವೂ ಸಂಕಷ್ಟದ ಸುಳಿಗೆ ಸಿಲುಕಿದೆ. ಮಳೆ ನಿಂತರೆ ಸಾಕಪ್ಪಾ ಅಂತಾ ಜನ ಕೂಡ ಕಾಯುತ್ತಾ ಇದ್ದಾರೆ. ಪರಿಸ್ಥಿತಿ ಹಿಗಿದ್ದಾಗ ಮತ್ತಷ್ಟು ಜೋರಾಗಿ ಮುಂಗಾರು ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಎಲ್ಲಾ ಕಾರಣಕ್ಕೆ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ 1 ವಾರದಿಂದ ನಿರಂತರವಾಗಿ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗಿದ್ದಾಗ ಮಳೆ ಆರ್ಭಟ ಇನ್ನೇನು ಕಡಿಮೆ ಆಗುತ್ತೆ ಎಂಬ ನಿರೀಕ್ಷೆ ಇತ್ತು, ಆದರೆ ಸೋಮವಾರ ಕೂಡ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ!

Schools In Karnataka May Remain Closed On 22nd Of July After Heavy Rain Alert

ಸೋಮವಾರ ಕೂಡ ರಜೆ ಘೋಷಣೆ?

ಮುಂಗಾರು ಮಳೆ ಆರ್ಭಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಾ ಸಾಗಿದೆ. ಇದೇ ಕಾರಣಕ್ಕೆ ಮುಂದಿನ ಕೆಲವು ಗಂಟೆಗಳ ಕಾಲ ಮತ್ತಷ್ಟು ಮಳೆ ಅಬ್ಬರ ಹೆಚ್ಚಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ ಹವಾಮಾನ ಇಲಾಖೆ. ಈ ಎಲ್ಲಾ ಕಾರಣಗಳಿಂದ ನಾಳೆ ಭಾನುವಾರದ ಜೊತೆಗೆ ನಾಡಿದ್ದು ಅಂದ್ರೆ ಸೋಮವಾರ ಕೂಡ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಮಳೆ ಪರಿಸ್ಥಿತಿ ನಿಭಾಯಿಸಲು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಕರ್ನಾಟಕದ ಡ್ಯಾಂಗಳಿಗೆ ಭಾರಿ ನೀರು!

ಒಟ್ನಲ್ಲಿ ಮಳೆ ಎಲ್ಲೆಲ್ಲೂ ಆರ್ಭಟಿಸುತ್ತಿದ್ದು, ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರಕ್ಕೆ ಎಲ್ಲವೂ ಈಗ ಅಲ್ಲೋಲ & ಕಲ್ಲೋಲ ಎಬ್ಬಿಸುತ್ತಿದೆ. ಅದರಲ್ಲೂ, ಕಳೆದ ಕೆಲವು ವಾರಗಳಿಂದ ಹೀಗೆ ನಿರಂತರವಾಗಿ ಮಳೆ ಬೀಳುತ್ತಿರುವುದು ಜನರ ಚಿಂತೆಗೂ ಕಾರಣ ಆಗುತ್ತಿದೆ. ಆದರೆ ಇದೇ ಸಮಯದಲ್ಲಿ ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಈ ಕಾರಣಕ್ಕೆ ಕರ್ನಾಟಕದಲ್ಲಿ ಇದೀಗ ನೀರಿನ ಸಮಸ್ಯೆ ಬಗೆಹರಿದಿದ್ದು, ಕನ್ನಡ ನಾಡಿನಲ್ಲಿರುವ ಅನ್ನದಾತ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದು ಕಡೆ ಭಾರಿ ಪ್ರಮಾಣದಲ್ಲಿ ನೀರು ಡ್ಯಾಂಗಳಿಂದ ಹೊರಬಿಡುವ ಸಾಧ್ಯತೆ ಇದ್ದು, ನದಿ ಅಕ್ಕಪಕ್ಕದ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ನದಿಗೆ ಇಳಿಯದಂತೆ ಹಾಗೂ ನದಿಯ ಬಳಿ ಸುಳಿಯುವಾಗ ಎಚ್ಚರಿಕೆ ವಹಿಸಿ ಎಂದು ಮುನ್ಸೂಚನೆ ನೀಡಲಾಗಿದೆ.

ಮಂಡ್ಯ, ಮೈಸೂರಿನಲ್ಲಿ ಪ್ರವಾಹ?

ಕೆಆರ್‌ಎಸ್, ಕಬಿನಿ, ಹೇಮಾವತಿ & ಹಾರಂಗಿ ಸೇರಿ ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಇದೀಗ ಭಾರಿ ನೀರು ಹರಿದು ಬರುತ್ತಿದೆ. ಹೀಗಾಗಿ, ಈ ಎಲ್ಲಾ ಜಲಾಶಯಗಳ ನೀರಿನ ಮಟ್ಟವು ಭರ್ಜರಿ ಏರಿಕೆ ಕಾಣುತ್ತಿದೆ. ಇಂತಹ ಸ್ಥಿತಿಯಲ್ಲಿ ಈಗ ದಿಢೀರ್ ಎಚ್ಚೆತ್ತುಕೊಂಡ ಅಧಿಕಾರಿಗಳು, ಕಾವೇರಿ ನದಿಗೆ ಇನ್ನು ಕೆಲವೇ ಕೆಲ ಕ್ಷಣಗಳಲ್ಲಿ, ಸಾವಿರಾರು ಕ್ಯುಸೆಕ್ ನೀರು ರಿಲೀಸ್ ಮಾಡಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಮೈಸೂರು, ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಈಗ ಪ್ರವಾಹ ಭೀತಿ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+