School Holiday: ಶಾಮನೂರು ಶಿವಶಂಕರಪ್ಪ 94ನೇ ವಯಸ್ಸಿನಲ್ಲಿ ನಿಧನ, ನಾಳೆ ಶಾಲೆಗಳಿಗೆ ರಜೆ ಘೋಷಣೆ ಸಾಧ್ಯತೆ...
ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ಆಘಾತಕಾರಿ ಘಟನೆಗಳು ನಡೆದಿದ್ದು, ಇನ್ನೇನು ನಾವೆಲ್ಲಾ 2025 ವರ್ಷ ಮುಗಿಸಿ, 2026ನೇ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಹೀಗಾಗಿ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಕನ್ನಡಿಗರು ಸಕಲ ಸಿದ್ಧತೆ ನಡೆಸಿದ್ದರು. ಆದರೆ ಇಂತಹ ಸಮಯದಲ್ಲೇ ಈಗ ದಿಢೀರ್ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದ್ದು, ಕನ್ನಡ ನಾಡು ಕಂಡ ಹಿರಿಯ ನಾಯಕ & ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ ಅವರು 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ಅವರ ಅಸಂಖ್ಯಾತ ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ಭಾರಿ ನೋವು ತರಿಸಿದೆ. ಹೀಗಿದ್ದಾಗಲೇ, ನಾಳೆ ಶಾಲೆಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಮನೂರು ಶಿವಶಂಕರಪ್ಪ ಅವರು ಕರ್ನಾಟಕ ರಾಜಕೀಯದಲ್ಲಿ ಮಾತ್ರವಲ್ಲ, ದೇಶ ಮಟ್ಟದ ರಾಜಕೀಯದಲ್ಲಿ ಕೂಡ ದೊಡ್ಡ ಹೆಸರು ಮಾಡಿದ್ದರು. ಅಲ್ಲದೆ ಪ್ರಮುಖವಾಗಿ ಕರ್ನಾಟಕ ರಾಜ್ಯದ ಪ್ರಬಲ ಸಮುದಾಯ ಎಂದು ಕರೆಸಿಕೊಳ್ಳುವ ವೀರಶೈವ ಲಿಂಗಾಯತ ಸಮುದಾಯದಲ್ಲಿ ಅವರು ತಮ್ಮದೇ ಆದ ದೊಡ್ಡ ಹೆಸರು ಹೊಂದಿದ್ದರು. ಅಲ್ಲದೆ ವೀರಶೈವ ಲಿಂಗಾಯತ ಸಮುದಾಯದ ದೊಡ್ಡ ದೊಡ್ಡ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದರು. ಹೀಗಾಗಿ ಇಡೀ ಸಮುದಾಯ ಅವರನ್ನು ಪಕ್ಷಾತೀತವಾಗಿ ಬೆಂಬಲಿಸಿತ್ತು. ಆದರೆ, ಇಂದು ದಿಢೀರ್ ಶಾಮನೂರು ಶಿವಶಂಕರಪ್ಪ ಅವರ ನಿಧನ ಸುದ್ದಿ ಆಘಾತ ತರಿಸಿದೆ. ಇಂತಹ ಸಮಯದಲ್ಲೇ ನಾಳೆ ಶಾಲೆಗಳಿಗೆ ರಜೆ ಘೋಷಣೆ ಸಾಧ್ಯತೆ...

ನಾಳೆ ಶಾಲೆಗಳಿಗೆ ರಜೆ ಘೋಷಣೆ ಸಾಧ್ಯತೆ?
ಲಿಂಗಾಯತ ನಾಯಕರಲ್ಲೇ ಮುಂಚೂಣಿ ಹೋರಾಟಗಾರ ಹಾಗೂ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಮತ್ತು ವಿರಶೈವ ಸಮುದಾಯವನ್ನು ಒಗ್ಗೂಡಿಸಲು ಶ್ರಮ ವಹಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆ ಅವರ ಬೆಂಬಲಿಗರಿಗೆ ಹಾಗೂ ಅಭಿಮಾನಿಗಳಿಗೆ ನೋವು & ಆಘಾತ ತಂದಿದೆ. ಕಾಂಗ್ರೆಸ್ ಪಕ್ಷವೇ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಅಖಾಡವಾಗಿದ್ದರೂ, ಪ್ರತಿಯೊಂದು ಪಕ್ಷದಲ್ಲೂ ಸ್ನೇಹಿತರನ್ನು ಹೊಂದಿದ್ದರು. ಅಲ್ಲದೆ 2023 ವಿಧಾನಸಭೆ ಚುನಾವಣೆ ಕಾಂಗ್ರೆಸ್ ಗೆಲ್ಲಲು ಶಾಮನೂರು ಶಿವಶಂಕರಪ್ಪ ಅವರ ಶ್ರಮ ಕೂಡ ದೊಡ್ಡದಾಗಿತ್ತು. ಹೀಗಿದ್ದಾಗ ಅವರ ಅಗಲಿಕೆ ನೋವು ತರಿಸಿದ್ದು, ನಾಳೆ ಶಾಲೆಗಳಿಗೆ ರಜೆ ಘೋಷಣೆ ಸಾಧ್ಯತೆ?
ಶಾಲೆಗಳಿಗೆ ರಜೆ ಘೋಷಣೆ ಬಗ್ಗೆ ಬಿಗ್ ಅಪ್‌ಡೇಟ್...
ಹೌದು, ಈಗಾಗಲೇ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ & ಕಾಂಗ್ರೆಸ್ ಹಿರಿಯ ನಾಯಕ ಆಗಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನ ಹಿನ್ನೆಲೆ ದಾವಣಗೆರೆ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಹಲವು ಪರೀಕ್ಷೆಗಳನ್ನ ಕೂಡ ಮುಂದೂಡಲಾಗಿದೆ. ಮತ್ತೊಂದು ಕಡೆ ಇಡೀ ರಾಜ್ಯದಲ್ಲಿ ನಾಳೆ ಶಾಲೆಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆಯಾ? ಎಂಬ ಪ್ರಶ್ನೆ ಮೂಡಿರುವ ಸಮಯದಲ್ಲೇ ರಜೆ ಘೋಷಣೆ ಬಗ್ಗೆ ಅಧಿಕೃತವಾಗಿ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ರಜೆ ಘೋಷಣೆ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಬೀಳುವ ತನಕ ಕಾದು ನೋಡಬೇಕಿದೆ...
ಸಿಎಂ ಸಿದ್ದರಾಮಯ್ಯ & ಮಾಜಿ ಸಿಎಂ ಯಡಿಯೂರಪ್ಪ...
ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆ ಹಿನ್ನೆಲೆ ಈಗ ಸಿಎಂ ಸಿದ್ದರಾಮಯ್ಯ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೇರಿ ಮಾಜಿ ಸಿಎಂ ಯಡಿಯೂರಪ್ಪ ಅವರು ಹಾಗೇ ಇಡೀ ಕರ್ನಾಟಕ ರಾಜಕೀಯದ ಹಿರಿಯ & ಕಿರಿಯ ನಾಯಕರು ಪಕ್ಷ ಮರೆತು ಸಂತಾಪ ಸೂಚಿಸಿದ್ದಾರೆ. ಮತ್ತೊಂದು ಕಡೆ ಅಭಿಮಾನಿಗಳಿಗೆ ಈ ಸುದ್ದಿ ತೀವ್ರ ನೋವು ಕೂಡ ತರಿಸಿದ್ದು, ಕುಟುಂಬಸ್ಥರು ನೋವಿನಲ್ಲಿ ಇದ್ದಾರೆ. ಅನಾರೋಗ್ಯದ ಹಿನ್ನೆಲೆ, 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ ಶಾಮನೂರು ಶಿವಶಂಕರಪ್ಪ ಅವರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಶಾಮನೂರು ಶಿವಶಂಕರಪ್ಪ ಅವರು ವಿಧಿವಶರಾಗಿದ್ದಾರೆ.












Click it and Unblock the Notifications